ಬೆಂಗಳೂರು: ಮೆಟ್ರೋ ಕಾಮಗಾರಿ ಸ್ಥಳದಲ್ಲಿ ಸುಮಾರು 30 ಅಡಿ ಮಣ್ಣು ಕುಸಿದ ಘಟನೆ ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿ ನಡೆದಿದೆ. ಗೊಟ್ಟಿಗೆರೆಯಿಂದ ನಾಗವಾರದವರೆಗೆ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಸುರಂಗ ಕೊರೆದು ಟಿಬಿಎಂ ಹೊರಗೆ ಬಂದಿದ್ದತ್ತು. ಸುರಂಗ ಕೊರೆದ ಬಳಿಕ ಪ್ರಷರ್ನಿಂದ ಮಣ್ಣು ಕುಸಿದಿರಬಹುದೆಂದು ಹೇಳಲಾಗುತ್ತಿದೆ.
ಮುಚ್ಚಿರುವ ಬಾವಿ ಜಾಗದಲ್ಲಿ ಮಣ್ಣು ಕುಸಿದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಝಬೀ ಎಂಬುವರಿಗೆ ಸೇರಿದ ಜಾಗದಲ್ಲಿ ಮಣ್ಣು ಕುಸಿದಿದ್ದು, ಇದಕ್ಕೆ ಬಿಎಂಆರ್‌ಸಿಎಲ್ ಕಾರಣ ಅಂತ ಮಾಲೀಕರು ಹೇಳುತ್ತಿದ್ದಾರೆ. ಬಿಎಂಆರ್ಸಿಲ್ ಹಳ್ಳ ಮುಚ್ಚಲು ಬೆಳಗ್ಗೆಯಿಂದ 2 ಲೋಡ್ ಮಣ್ಣು ತರಿಸಿದೆ. ಹಳ್ಳ ಮುಚ್ಚಲು 15ಕ್ಕೂ ಹೆಚ್ಚು ಜನರು ಹರಸಾಹಸ ಪಡುತ್ತಿದ್ದಾರೆ.
ಟ್ಯಾನ್ರಿ ರಸ್ತೆಯಲ್ಲಿ ಮುಚ್ಚಿದ್ದ ಬಾವಿ ಮಣ್ಣು ಕುಸಿದಿದೆ. ಮುಂಜಾನೆ 3 ಗಂಟೆಗೆ ಮಣ್ಣು ಕುಸಿದಿದೆ. ಮಣ್ಣು ಕುಸಿಯಲು ಬಿಎಂಆರ್‌ಸಿಎಲ್ ಅಧಿಕಾರಿಗಳೇ ಕಾರಣವೆಂದು ಆರೋಪಿಸುತ್ತಿರುವ ಜಾಗ ಮಾಲೀಕರು ಇದಕ್ಕೆ ಪರಿಹಾರ ನೀಡಲಿ ಅಂತಿದ್ದಾರೆ.
ಇದನ್ನೂ ಓದಿ
ಕಿಟಕಿಯಿಂದ ಸೋಫಾ ಕೆಳಗಿಳಿಸಲು ಮುಂದಾದವರನ್ನು ನೋಡಿ ‘ಎಂಥಾ ಐಡಿಯಾ ಗುರೂ’ ಎಂದ ನೆಟ್ಟಿಗರು! ತಮಾಷೆಯ ವಿಡಿಯೋ ವೈರಲ್
Published On - 11:26 am, Thu, 30 September 21