ಬೆಂಗಳೂರು, (ಡಿಸೆಂಬರ್ 12): ರಾಜಭವನಕ್ಕೆ (Raj Bhavan) ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ (hoax Bomb threat ) ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ ಮುಳಬಾಗಿಲು ಬಳಿಯ ವಡ್ಡಳ್ಳಿ ನಿವಾಸಿ ಭಾಸ್ಕರ್ ಎನ್ನುವಾತನನ್ನು ವಿಧಾನಸೌಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆದ್ರೆ, ಆರೋಪಿ ಬಾಂಬ್ ಬೆದರಿಕೆ ಕರೆ ಹಾಕಿರುವ ಹಿಂದಿನ ಕಾರಣ ಕೇಳಿ ಪೊಲೀಸರಿಗೆ ನಗಬೇಕೋ ಏನು ಮಾಡಬೇಕು ಎನ್ನುವುದು ತಿಳಿಯದಂತಾಗಿದೆ.
ಸೋಮವಾರ ರಾತ್ರಿ ಬೆಂಗಳೂರಿಗೆ ಬಂದಾಗ ಎನ್ಐಎ ನಂಬರ್ ಸರ್ಚ್ ಮಾಡಿ ಬಾಂಬ್ ಬೆದರಿಕೆ ಕರೆ ಮಾಡಿರುವುದಾಗಿ ಆರೋಪಿ ಭಾಸ್ಕರ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಸುಮ್ಮನೆ ಹೋಗುತ್ತಿದ್ದಾಗ ರಾಜಭವನ ನೋಡಿದ್ದನಂತೆ. ಬಳಿಕ ಬಾಂಬ್ ಇಟ್ಟಿದ್ದೀನಿ ಎಂದು ಕರೆ ಮಾಡಬೇಕು ಅನ್ನಿಸ್ತಂತೆ. ಹೀಗಾಗಿ ಕೂಡಲೇ ನೆಟ್ನಲ್ಲಿ ಎನ್ಐಎ ನಂಬರ್ ಸರ್ಚ್ ಮಾಡಿ ಕಾಲ್ ಮಾಡಿದ್ನಂತೆ. ಬಾಂಬ್ ಇಟ್ಟಿದ್ದೀನಿ ಅಂತಾ ಸುಮ್ಮನೆ ಕರೆ ಮಾಡಬೇಕು. ಅನಿಸ್ತು ಅದಕ್ಕೆ ಮಾಡಿದೆ ಎಂದು ಪೊಲೀಸರ ಮುಂದೆ ಹೇಳಿದ್ದಾನೆ. ಆರೋಪಿ ಭಾಸ್ಕರ್ ಹೇಳಿದ ವಿಷಯ ಕೇಳಿ ಪೊಲೀಸರರು ತಲೆ ಮೇಲೆ ಕೈ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: Raj Bhavan Bomb Threat: ಬೆಂಗಳೂರು ಶಾಲೆ ಬೆನ್ನಲ್ಲೇ ಈಗ ರಾಜ ಭವನಕ್ಕೆ ಬಾಂಬ್ ಬೆದರಿಕೆ ಕರೆ
ಸೋಮವಾರ (ಡಿ.11)ರ ರಾತ್ರಿ 11.30ರ ಸುಮಾರಿಗೆ ರಾಜ ಭವನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಬಂಧಿತ ಭಾಸ್ಕರ್ ಅಕರೆ ಮಾಡಿದ್ದ. ಇದರಿಂದ ರಾಜ ಭವನ ಭದ್ರತಾ ಅಧಿಕಾರಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಸಿಕ್ಕ ಕೂಡಲೇ ಪೊಲೀಸರು ಹಾಗೂ ಬಾಂಬ್ ಸ್ಕ್ವಾಡ್ ಸ್ಥಳಕ್ಕೆ ಧಾವಿಸಿ ರಾಜಭವನದ ಒಳಗೆ ಮತ್ತು ಹೊರಗೆ ಒಂದು ಇಂಚೂ ಬಿಡದೇ ಪರಿಶೀಲನೆ ಮಾಡಿದ್ದರು. ಬಳಿಕ ಇದೊಂದು ಹುಸಿ ಬಾಂಬ್ ಕರೆ ಎಂದು ತಿಳಿದಾಗ ನಿಟ್ಟುಸಿರುಬಿಟ್ಟಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ