ಬೆಂಗಳೂರು: ಗಿಫ್ಟ್ ಸೆಂಟರ್​ ಮೂಲಕ ಇ-ಸಿಗರೇಟ್ ಮಾರಾಟ ಮಾಡುತ್ತಿದ್ದ ಐವರ ಬಂಧನ

ಕೊತ್ತನೂರಿನ ಎರಡು ಗಿಫ್ಟ್ ಸೆಂಟರ್​ನಲ್ಲಿ ದಾಸ್ತಾನು ಮಾಡಿ ಇ-ಸಿಗರೇಟ್ ಮಾರಾಟ ಮಾಡುತ್ತಿದ್ದ ಐವರನ್ನು ಕೊತ್ತನೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕೊತ್ತನೂರು ಪೊಲೀಸರು ಈ ಬಗ್ಗೆ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು, ಸಾರ್ವಜನಿಕರಿಗೆ ಅಕ್ರಮವಾಗಿ ಇ-ಸಿಗರೇಟ್ ಮಾರಾಟ ಮಾಡುತ್ತಿದ್ದರು.

ಬೆಂಗಳೂರು: ಗಿಫ್ಟ್ ಸೆಂಟರ್​ ಮೂಲಕ ಇ-ಸಿಗರೇಟ್ ಮಾರಾಟ ಮಾಡುತ್ತಿದ್ದ ಐವರ ಬಂಧನ
ಇ-ಸಿಗರೇಟ್
Follow us
| Updated By: ಆಯೇಷಾ ಬಾನು

Updated on: Dec 13, 2023 | 7:33 AM

ಬೆಂಗಳೂರು, ಡಿ.13: ನಗರದಲ್ಲಿ ಇ-ಸಿಗರೇಟ್ (E Cigarettes) ಮಾರಾಟ ಮಾಡುತ್ತಿದ್ದ ಐವರನ್ನು ಕೊತ್ತನೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮುಜಮಿಲ್, ಅಬ್ದುಲ್ ಅಜೀಜ್, ಮಹಮ್ಮದ್ ಅಫ್ಜಲ್, ಅಬ್ದುಲ್ ಸಮೀರ್, ಮುತಾಸಿದ್ದಿಕ್ ಬಂಧಿತ ಆರೋಪಿಗಳು. ಬಂಧಿತರಿಂದ 26 ಲಕ್ಷ ಮೌಲ್ಯದ ಇ-ಸಿಗರೇಟ್ ಉತ್ಪನ್ನ, ವಿದೇಶಿ ಸಿಗರೇಟ್ ಜಪ್ತಿ ಮಾಡಲಾಗಿದೆ. ಆರೋಪಿಗಳು ಅಕ್ರಮವಾಗಿ ಇ-ಸಿಗರೇಟ್ ದಾಸ್ತಾನು ಮಾಡಿ ಮಾರಾಟ ಮಾಡ್ತಿದ್ದರು.

ಕೊತ್ತನೂರಿನ ಎರಡು ಗಿಫ್ಟ್ ಸೆಂಟರ್​ನಲ್ಲಿ ದಾಸ್ತಾನು ಮಾಡಿದ್ದ ಆರೋಪಿಗಳು, ಸಾರ್ವಜನಿಕರಿಗೆ ಅಕ್ರಮವಾಗಿ ಇ-ಸಿಗರೇಟ್ ಮಾರಾಟ ಮಾಡುತ್ತಿದ್ದರು. ವ್ಯಕ್ತಿಯೊಬ್ಬನ ಮೂಲಕ ಗಿಫ್ಟ್ ಸೆಂಟರ್​ಗೆ ಇ-ಸಿಗರೇಟ್ ಗಳ ಸರಬರಾಜು ಆಗುತ್ತಿತ್ತು. ಕೊತ್ತನೂರು ಪೊಲೀಸರು ಈ ಬಗ್ಗೆ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಈ ವಾರದ ಅಂತ್ಯದಿಂದ ರೈತರ ಖಾತೆ 2 ಸಾವಿರ ರೂ. ಬೆಳೆ ಪರಿಹಾರ: ಕೃಷ್ಣ ಭೈರೇಗೌಡ

21 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಆಫ್ರಕನ್ ಮೂಲದ ಪ್ರಜೆ ಲಿಯೋನಾರ್ಡ್ ಒಕ್ವಿಡಿಲಿ ಎಂಬಾತನನ್ನ ಡ್ರಗ್ಸ್ ಕೇಸಲ್ಲಿ ಬಂಧನ ಮಾಡಲಾಗಿದೆ. ಆರೋಪಿಯಿಂದ ಬರೋಬ್ಬರಿ 21‌ ಕೋಟಿ ಮೌಲ್ಯದ 16‌ಕೆಜಿ ಎಂಡಿಎಂಎ, ಅರ್ಧ ಕೆಜಿಯಷ್ಟು ಕೊಕೇನ್ ಜಪ್ತಿ ಮಾಡಲಾಗಿದೆ. 16 ಕೇಜಿ ಎಂಡಿಎಂಎ ಬೆಲೆ 16 ಕೋಟಿ ಇದೆ. ಈ ಬೃಹತ್ ಡ್ರಗ್ಸ್ ಅಕ್ರಮವಾಗಿ ಶೇಖರಿಸಿಟ್ಟಿದ್ದು ರಾಮಮೂರ್ತಿನಗರದಲ್ಲಿ.

ಆಫ್ರಿಕಾದಿಂದ ಬ್ಯೂಸಿನೆಸ್ ವೀಸಾದಲ್ಲಿ ನಗರಕ್ಕೆ ಬಂದಿದ್ದ ಆರೋಪಿ ಮತ್ತೆ ವಾಪಾಸ್ ಹೋಗದೆ ಡ್ರಗ್ ಬ್ಯೂಸಿನೆಸ್ ಗೆ ಕೈ ಹಾಕಿದ್ದ. ಆಫ್ರಿಕನ್ ಪ್ರಜೆಗಳೇ ಹೆಚ್ಚಿರವ ಹೆಣ್ಣೂರು ,ರಾಮಮೂರ್ತಿನಗರ ಭಾಗದಲ್ಲಿ ನೆಲೆಸಿ ಡ್ರಗ್ ಪೆಡ್ಲಿಂಗ್ ಮಾಡ್ತಿದ್ದ. ಇನ್ನು ವಿದೇಶಿಗರ ಮೂಲಕವೇ ಡ್ರಗ್ ವಿಲೇವಾರಿ ಮಾಡ್ತಿದ್ದ ಎನ್ನಲಾಗಿದೆ. ಮುಂಬೈ ಹಾಗು ದೆಹಲಿಯಿಂದ ವಿದೇಶಿ ಸ್ನೇಹಿತರಿಂದ ಡ್ರಗ್ಸ್ ತರಿಸುತ್ತಿದ್ದ. ಇ‌ನ್ನು ಈತ ಡ್ರಗ್ಸ್ ತರಿಸುತ್ತಿದ್ದ ರೀತಿ ಕೂಡ ಹೊಸ ವಿಧಾನವೇ. ಯಸ್ ಚೂಡಿದಾರ, ಸೀರೆ, ಬೆಡ್ ಶೀಟ್ ಕವರ್, ಸೋಪ್ ಬಾಕ್ಸ್, ಚಾಕ್ಲೇಟ್, ಬಿಸ್ಕೇಟ್ ಬಾಕ್ಸ್ ಗಳಲ್ಲಿ ಡ್ರಗ್ಸ್ ಗಳನ್ನ ತರಿಸಿಕೊಳ್ತಿದ್ದ. ಇನ್ನು ಈತ ಕಾಲೇಜು ವಿದ್ಯಾರ್ಥಿಗಳು , ಐಟಿ,ಬಿಟಿ ಅವರಲ್ಲದೆ ರೇವ್ ಪಾರ್ಟಿ ಗಳಿಗೂ ಸಪ್ಲೈ ಮಾಡುತ್ತಿರುವುದು ತಿಳಿದು ಬಂದಿದೆ. ಇನ್ನು ಹೊಸ ವರ್ಷಾಚರಣೆ ವೇಳೆ ಡ್ರಗ್ಸ್ ಒಂದಕ್ಕೆ ಐದು ಪಟ್ಟು ಮಾರಾಟವಾಗುತ್ತದೆ. ಹೀಗಾಗಿ ಬೃಹತ್ ಮೊತ್ತದ ಡ್ರಗ್ಸ್ ಗಳನ್ನ ಶೇಖರಣೆ ಮಾಡ್ತಿದ್ದ ಎನ್ನಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ದೇವರ ಮುಂದೆ ಕಣ್ಣೀರು ಹಾಕಿದ್ರೆ ಏನಾಗುತ್ತೆ ಗೊತ್ತಾ?
ದೇವರ ಮುಂದೆ ಕಣ್ಣೀರು ಹಾಕಿದ್ರೆ ಏನಾಗುತ್ತೆ ಗೊತ್ತಾ?
ಬದುಕು ಬದಲಿಸಿದ ‘ಕೆಜಿಎಫ್’: ಪ್ರಶಾಂತ್ ನೀಲ್​ಗೆ ಗರುಡ ರಾಮ್ ಧನ್ಯವಾದ
ಬದುಕು ಬದಲಿಸಿದ ‘ಕೆಜಿಎಫ್’: ಪ್ರಶಾಂತ್ ನೀಲ್​ಗೆ ಗರುಡ ರಾಮ್ ಧನ್ಯವಾದ
ತುಂಗಭದ್ರಾ ಪೈಪ್‌ಲೈನ್ ಒಡೆದು 50 ಎಕರೆ ಬೆಳೆ ಮುಳುಗಡೆ
ತುಂಗಭದ್ರಾ ಪೈಪ್‌ಲೈನ್ ಒಡೆದು 50 ಎಕರೆ ಬೆಳೆ ಮುಳುಗಡೆ
ಕಟ್ಟಡ ಕುಸಿತ: ಅಧಿಕಾರಿಗಳನ್ನ ತರಾಟೆಗೆ ತಗೊಂಡ್ರು ಲೋಕಾಯುಕ್ತ ನ್ಯಾಯಮೂರ್ತಿ
ಕಟ್ಟಡ ಕುಸಿತ: ಅಧಿಕಾರಿಗಳನ್ನ ತರಾಟೆಗೆ ತಗೊಂಡ್ರು ಲೋಕಾಯುಕ್ತ ನ್ಯಾಯಮೂರ್ತಿ
‘ಬಘೀರ’ದಲ್ಲಿ ಹೇಗಿದೆ ಗರುಡಾ ರಾಮ್ ಪಾತ್ರ? ಕಥೆ ಬಗ್ಗೆ ಸುಳಿವು ನೀಡಿದ ನಟ
‘ಬಘೀರ’ದಲ್ಲಿ ಹೇಗಿದೆ ಗರುಡಾ ರಾಮ್ ಪಾತ್ರ? ಕಥೆ ಬಗ್ಗೆ ಸುಳಿವು ನೀಡಿದ ನಟ
ನಾಮಪತ್ರ ಸಲ್ಲಿಕೆಗೆ ಸಿದ್ದರಾಮಯ್ಯ, ಶಿವಕುಮಾರ್ ಬರಲಿದ್ದಾರೆ: ಯೋಗೇಶ್ವರ್
ನಾಮಪತ್ರ ಸಲ್ಲಿಕೆಗೆ ಸಿದ್ದರಾಮಯ್ಯ, ಶಿವಕುಮಾರ್ ಬರಲಿದ್ದಾರೆ: ಯೋಗೇಶ್ವರ್
ಕುಮಾರಸ್ವಾಮಿ ಸೂಚಿಸುವ ಅಭ್ಯರ್ಥಿಗೆ ಎನ್​ಡಿಎ ಒಮ್ಮತದ ಬೆಂಬಲ: ವಿಜಯೇಂದ್ರ
ಕುಮಾರಸ್ವಾಮಿ ಸೂಚಿಸುವ ಅಭ್ಯರ್ಥಿಗೆ ಎನ್​ಡಿಎ ಒಮ್ಮತದ ಬೆಂಬಲ: ವಿಜಯೇಂದ್ರ
ಬಿಗ್​ಬಾಸ್​ನಲ್ಲಿ ಶುರುವಾಯ್ತು ಪಕ್ಷ ರಾಜಕೀಯ, ಸ್ಪರ್ಧಿಗಳ ನಡುವೆ ಗಲಾಟೆ
ಬಿಗ್​ಬಾಸ್​ನಲ್ಲಿ ಶುರುವಾಯ್ತು ಪಕ್ಷ ರಾಜಕೀಯ, ಸ್ಪರ್ಧಿಗಳ ನಡುವೆ ಗಲಾಟೆ
ಭಾರತ- ಪಾಕಿಸ್ತಾನದ ನಡುವೆ ರಾಜಿಯಾಗಬೇಕು; ಮೆಹಬೂಬಾ ಮುಫ್ತಿ ಹೇಳಿಕೆ
ಭಾರತ- ಪಾಕಿಸ್ತಾನದ ನಡುವೆ ರಾಜಿಯಾಗಬೇಕು; ಮೆಹಬೂಬಾ ಮುಫ್ತಿ ಹೇಳಿಕೆ
ಎನ್​ಡಿಎ ಅಭ್ಯರ್ಥಿ ಗೆಲ್ಲಿಸಲು ಕುಮಾರಸ್ವಾಮಿ ಶ್ರಮಿಸಬೇಕು: ಪ್ರೀತಂ ಗೌಡ
ಎನ್​ಡಿಎ ಅಭ್ಯರ್ಥಿ ಗೆಲ್ಲಿಸಲು ಕುಮಾರಸ್ವಾಮಿ ಶ್ರಮಿಸಬೇಕು: ಪ್ರೀತಂ ಗೌಡ