ಬೆಂಗಳೂರಿನಲ್ಲಿ ಮುಂಬೈ ಮೂಲದ ಯುವತಿ ಮೇಲೆ ಬಾಡಿ ಬಿಲ್ಡರ್ ಅತ್ಯಾಚಾರ ಆರೋಪ! ಆರೋಪಿ ಬಂಧನ

| Updated By: sandhya thejappa

Updated on: May 04, 2022 | 8:53 AM

ಸಂತ್ರಸ್ತೆ ಯುವತಿ ದೂರಿನ ಹಿನ್ನೆಲೆ ಕೆ.ಜಿ.ಹಳ್ಳಿ ಠಾಣೆಯಲ್ಲಿ ಆರೋಪಿ ಸಯ್ಯದ್ ಸಿದ್ದಿಕಿ, ಪತ್ನಿ ಫಾಸಿಯಾ ರೆಹಮಾನ್ ಮತ್ತು ಪತ್ನಿ ಸೋದರ ಸಾಧಿಕ್ ವಿರುದ್ಧ ಎಫ್ಐಆರ್ ದಾಖಲಾಗಿದೆ ಆರೋಪಿಗಳು ಕೊಲೆ ಬೆದರಿಕೆ ಒಡ್ಡುತ್ತಿದ್ದಾರೆ ಅಂತಲೂ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬೆಂಗಳೂರಿನಲ್ಲಿ ಮುಂಬೈ ಮೂಲದ ಯುವತಿ ಮೇಲೆ ಬಾಡಿ ಬಿಲ್ಡರ್ ಅತ್ಯಾಚಾರ ಆರೋಪ! ಆರೋಪಿ ಬಂಧನ
ಬಂಧಿತ ಆರೋಪಿ ಸೈಯದ್ ಸಿದ್ದಿಕಿ, ಸಂತ್ರಸ್ತೆ ಯುವತಿ
Follow us on

ಬೆಂಗಳೂರು: ಮುಂಬೈ (Mumbai) ಮೂಲದ ಯುವತಿ ಮೇಲೆ ಬಾಡಿ ಬಿಲ್ಡರ್ (Body Builder) ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಅತ್ಯಾಚಾರ ಆರೋಪದ ಹಿನ್ನೆಲೆ ಬಾಣಸವಾಡಿ ಜಿಮ್ ಟ್ರೈನರ್ ಸೈಯದ್ ಸಿದ್ದಿಕಿಯನ್ನು ಕೆ.ಜಿ.ಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಸಯ್ಯದ್ ಸಿದ್ದಿಕಿ, ಅಂತರಾಷ್ರ್ಟೀಯ ಸ್ಪರ್ಧೆಯ ಬಾಡಿ ಬಿಲ್ಡರ್ಗಳ ಟ್ರೈನರ್ ಆಗಿದ್ದಾನೆ. ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿರುವುದಾಗಿ 23 ವರ್ಷದ ಯುವತಿ ದೂರು ನೀಡಿದ್ದಾಳೆ. ಅತ್ಯಾಚಾರ ಎಸಗಿದ ಬಳಿಕ ವಿವಾಹವಾಗುವುದಾಗಿ ನಂಬಿಸಿ ಮತ್ತೆ ಅತ್ಯಾಚಾರ ಮಾಡಿದ್ದಾನೆ ಅಂತ ಸಂತ್ರಸ್ತೆ ಯುವತಿ ಆರೋಪಿಸಿದ್ದಾಳೆ.

ಸಂತ್ರಸ್ತೆ ಯುವತಿ ದೂರಿನ ಹಿನ್ನೆಲೆ ಕೆ.ಜಿ.ಹಳ್ಳಿ ಠಾಣೆಯಲ್ಲಿ ಆರೋಪಿ ಸಯ್ಯದ್ ಸಿದ್ದಿಕಿ, ಪತ್ನಿ ಫಾಸಿಯಾ ರೆಹಮಾನ್ ಮತ್ತು ಪತ್ನಿ ಸೋದರ ಸಾಧಿಕ್ ವಿರುದ್ಧ ಎಫ್ಐಆರ್ ದಾಖಲಾಗಿದೆ ಆರೋಪಿಗಳು ಕೊಲೆ ಬೆದರಿಕೆ ಒಡ್ಡುತ್ತಿದ್ದಾರೆ ಅಂತಲೂ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಯುವತಿಗೆ ಆರೋಪಿ ಸಯ್ಯದ್ ಸಿದ್ದಿಕಿ ಪರಿಚಯನಾಗಿದ್ದ. ಜಿಮ್ ಟ್ರೈನಿಂಗ್, ಅವಾರ್ಡ್ ಕಾರ್ಯಕ್ರಮಗಳ ಕುರಿತು ಪೋಟೋ, ವಿಡಿಯೋ ವೀಕ್ಷಿಸಿ ಸಂಪರ್ಕಿಸಿದ್ದಳು. ಫೆಬ್ರವರಿ 15 ರಂದು ಸಂತ್ರಸ್ತೆ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದಳು. ಬಾಡಿ ಬಿಲ್ಡ್ ಮಾಡಬೇಕು, ಜಿಮ್ಮರ್ ಆಗಬೇಕು ಎಂಬ ಕನಸು ಹೊತ್ತು ಬಂದಿದ್ದಳು. ಟ್ರೈನಿಂಗ್ ಆರಂಭಿಸಿದ ಎರಡು ದಿನ ಬಳಿಕ ಸ್ಟಿರಾಯಿಡ್ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾನಂತೆ. ಜೊತೆಗೆ ಫೆಬ್ರವರಿ 19 ರಂದು ಸಂತ್ರಸ್ತೆ ವಾಸವಾಗಿದ್ದ ಮನೆಗೆ ಬಂದು ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಾಳೆ.

ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಗೆಲ್ಲಬೇಕು ಅಂತ ಆರೋಪಿ ಆರೋಪಿ ಟ್ರೈನರ್ ಸಿದ್ದಿಕಿ ಸ್ಟಿರಾಯಿಡ್ ಸೇವನೆ ಮಾಡುವಂತೆ ಒತ್ತಾಯಿಸಿದ್ದಾನಂತೆ. ಸ್ವಾಭಾವಿಕವಾಗಿ ವರ್ಕ್ ಔಟ್ ಮಾಡಿ ಬಾಡಿ ಬಿಲ್ಡ್ ಮಾಡಬೇಕು ಅಂತ ಸಂತ್ರಸ್ತೆ ಬಂದಿದ್ದಳು. ಹೀಗಾಗಿ ಸ್ಟಿರಾಯಿಡ್ ಸಲಹೆ ನಿರಾಕರಿಸಿದ್ಳು. ದ್ರವ ರೂಪದ ಪದಾರ್ಥದಲ್ಲಿ ಡ್ರಗ್ಸ್ ನೀಡಿ‌ ಕೃತ್ಯ ಎಸಗಿದ್ದಾನಂತೆ. ದೂರು ನೀಡುವುದಾಗಿ ಹೇಳಿದ್ದಕ್ಕೆ ವಿವಾಹವಾಗುವುದಾಗಿ ನಂಬಿಸಿದ್ದನಂತೆ. ಆದರೆ ಸಯ್ಯದ್ ಸಿದ್ದಿಕ್ಕಿ ಈಗಾಗಲೇ ವಿವಾಹವಾಗಿ ಪತ್ನಿ ಮತ್ತು ಮಗು ಇರುವುದಾಗಿ ಮಾಹಿತಿ ಇದೆ.

ಇದನ್ನೂ ಓದಿ

ಫೋರ್ಜರಿ ಸಹಿ ಮಾಡಿ ಹಣ ಮಂಜೂರಾತಿಗೆ ಯತ್ನ! ಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕ ರವಿಕುಮಾರ್ ವಿರುದ್ಧ ಎಫ್ಐಆರ್

PSI ನೇಮಕಾತಿ ಹಗರಣದಲ್ಲಿ ಮತ್ತೊಬ್ಬ ಅಧಿಕಾರಿ ತಲೆದಂಡ; ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತರಾಜು ವರ್ಗಾವಣೆ

Published On - 8:48 am, Wed, 4 May 22