ಫೋರ್ಜರಿ ಸಹಿ ಮಾಡಿ ಹಣ ಮಂಜೂರಾತಿಗೆ ಯತ್ನ! ಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕ ರವಿಕುಮಾರ್ ವಿರುದ್ಧ ಎಫ್ಐಆರ್
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಐಪಿಸಿ 420, 506, 504, 509, 380, 465, 468, 471 ಅಡಿ ಕೇಸ್ ದಾಖಲಾಗಿದೆ. ಎಫ್ಐಆರ್ ದಾಖಲಾಗುತ್ತಿದ್ದಂತೆ ರವಿಕುಮಾರ್ ಎಸ್ಕೇಪ್ ಆಗಿದ್ದಾರೆ.
ಬೆಂಗಳೂರು: ಫೋರ್ಜರಿ ಸಹಿ (Forgery Signature) ಮಾಡಿ ಹಣ ಮಂಜೂರಾತಿಗೆ ಯತ್ನಿಸಿದ ಆರೋಪದ ಹಿನ್ನೆಲೆ ಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕ ರವಿಕುಮಾರ್ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಐಪಿಸಿ 420, 506, 504, 509, 380, 465, 468, 471 ಅಡಿ ಕೇಸ್ ದಾಖಲಾಗಿದೆ. ಎಫ್ಐಆರ್ ದಾಖಲಾಗುತ್ತಿದ್ದಂತೆ ರವಿಕುಮಾರ್ ಎಸ್ಕೇಪ್ ಆಗಿದ್ದಾರೆ. ನಿಗಮದ ಎಂ.ಡಿ.ಲೀಲಾವತಿ, ಜಿ.ಎಂ.ನಾಗರಾಜಪ್ಪರ ಸಹಿಯನ್ನು ರವಿಕುಮಾರ್ ಫೋರ್ಜರಿ ಸಹಿ ಮಾಡಿ, ಸುಮಾರು 1.83 ಕೋಟಿ ರೂ. ಲಪಟಾಯಿಸಲು ಪ್ಲ್ಯಾನ್ ಮಾಡಿದ್ದರು ಎಂದು ಹೇಳಲಾಗುತ್ತಿದೆ.
ಉದ್ಯಮಶೀಲತಾ ಯೋಜನೆಯಡಿ ಸಾಲಸೌಲಭ್ಯ ಕೋರಿ ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಬಳ್ಳಾರಿ, ವಿಜಯಪುರ, ಚಿಕ್ಕಬಳ್ಳಾಪುರ, ಕಲಬುರಗಿಯಿಂದ ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದರು. ನಕಲಿ ಜಾತಿ ಪತ್ರ, ಅಂಕಪಟ್ಟಿ ಸಲ್ಲಿಸಿದ್ದ ಅರ್ಜಿಗಳು ತಿರಸ್ಕೃತವಾಗಿದ್ದವು. ಮೇ 4ರಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಕ್ರಮ ಬೆಳಕಿಗೆ ಬಂದಿದೆ. ಅಕ್ರಮದ ಬಗ್ಗೆ ಪ್ರಶ್ನಿಸಲು ಮುಂದಾದ ಕೆಎಎಸ್ ಅಧಿಕಾರಿಗಳಿಗೆ ಎಂ.ಡಿ.ಲೀಲಾವತಿರಿಗೆ ಅಶ್ಲೀಲ ಪದಗಳಿಂದ ನಿಂದನೆ ಮಾಡಿರುವ ಆರೋಪ ಕೇಳಿಬಂದಿದೆ.
ಡಾ.ಬಿ.ಕೆ.ನಾಗರಾಜಪ್ಪರಿಗೆ ವಾಟ್ಸಾಪ್ ವಾಯ್ಸ್ ಮೆಸೇಜ್ನಲ್ಲಿ ಧಮ್ಕಿ ಹಾಕಿದ್ದು, ಸದ್ಯ ನಾಪತ್ತೆಯಾದ ರವಿಕುಮಾರ್ಗಾಗಿ ಹುಡುಕಾಟ ಮುಂದುವರಿದಿದೆ.
ನಿಗಮಕ್ಕೆ ಸೇರಿದ್ದ ಐಸಿಐಸಿಐ ಬ್ಯಾಂಕ್ಗೆ ಸೇರಿದ ಚೆಕ್ಗಳು ಕಳೆದ ಮಾರ್ಚ್ನಲ್ಲಿ ಕಳುವಾಗಿತ್ತು. ಈ ಬಗ್ಗೆ ಭೋವಿ ಅಭಿವೃದ್ಧಿ ನಿಗಮ ಐಸಿಐಸಿಐ ಬ್ಯಾಂಕ್ಗೆ ದೂರು ನೀಡಿತ್ತು. ಕಳುವಾಗಿದ್ದ ಚೆಕ್ ಬಳಸಿ ನಿರ್ದೇಶಕ ರವಿಕುಮಾರ್ ರಾಯಚೂರು ಜಿಲ್ಲೆಗೆ 52 ಲಕ್ಷ ಜಮಾ ಮಾಡಿದ್ದಾರೆ. 52 ಲಕ್ಷ ಅಕ್ರಮವಾಗಿ ಜಮಾ ಮಾಡಿರುವುದಲ್ಲದೇ, 60 ಅಕ್ರಮ ಫಲಾಪೇಕ್ಷಿಗಳ ಹೆಸರಲ್ಲಿ ಒಂದು ಕೋಟಿ 83 ಲಕ್ಷ ಹಣ ಮಂಜೂರಾತಿಗೆ ಸಹಿ ಫೋರ್ಜರಿ ಮಾಡಿದ್ದಾರೆ. ಈ ಎಲ್ಲಾ ಅಕ್ರಮ ಇಂದು ನಡೆದ ಭೋವಿ ಅಭಿವೃದ್ದಿ ನಿಗಮ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ
ರವಿಚಂದ್ರನ್ ಮಗನ ಮದುವೆ ಆಹ್ವಾನ ಪತ್ರಿಕೆಯಲ್ಲಿ ಹೊಸ ನಟಿಯ ಹೆಸರು? ವೈರಲ್ ಫೋಟೋದ ಅಸಲಿಯತ್ತು ಇಲ್ಲಿದೆ
PSI ನೇಮಕಾತಿ ಹಗರಣದಲ್ಲಿ ಮತ್ತೊಬ್ಬ ಅಧಿಕಾರಿ ತಲೆದಂಡ; ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತರಾಜು ವರ್ಗಾವಣೆ
Published On - 8:16 am, Wed, 4 May 22