‘ಇವತ್ತು ಹಿಜಾಬ್ ಬೇಡಿಕೆ ಇಡುತ್ತಾರೆ, ನಾಳೆ ಇನ್ನೊಂದು ಬೇಡುತ್ತಾರೆ’ ಮುಸ್ಲಿಂರ ಈ ಮನಸ್ಥಿತಿ ತುಂಬಾ ಅಪಾಯಕಾರಿ -ಸಿ.ಟಿ. ರವಿ

| Updated By: ಆಯೇಷಾ ಬಾನು

Updated on: Feb 16, 2022 | 1:03 PM

ಹಿಂದು-ಮುಸ್ಲಿಂರನ್ನ ಗೌರವಯುತವಾಗಿ ವಿನಿಮಯ ಮಾಡಿಕೊಳ್ಳಲು ಹೇಳಿದಕ್ಕೆ ಅಂಬೇಡ್ಕರ್ ಕೆಲವರ ವಿಚಾರದಲ್ಲಿ ಕೋಮುವಾದಿಯಾದ್ರು. ಅಂಬೇಡ್ಕರ್ ಸಾವರ್ಕರ್ರ ಏಜೆಂಟ್ ಅನ್ನಿಸಿಕೊಂಡರು. ಅಂಬೇಡ್ಕರ್ ಶಿಕ್ಷಣ, ಸಂಘಟನೆ ಮಾರ್ಗ ತೋರಿಸಿದರು. -ಸಿ.ಟಿ. ರವಿ

‘ಇವತ್ತು ಹಿಜಾಬ್ ಬೇಡಿಕೆ ಇಡುತ್ತಾರೆ, ನಾಳೆ ಇನ್ನೊಂದು ಬೇಡುತ್ತಾರೆ’ ಮುಸ್ಲಿಂರ ಈ ಮನಸ್ಥಿತಿ ತುಂಬಾ ಅಪಾಯಕಾರಿ -ಸಿ.ಟಿ. ರವಿ
ಸಿ.ಟಿ. ರವಿ
Follow us on

ಬೆಂಗಳೂರು: ಕಾಂಗ್ರೆಸ್ನವರು ತಮ್ಮವರಿಗೆ ಮಾತ್ರ ಭಾರತ ರತ್ನ ಕೊಟ್ಟರು ಎಂದು ಬೆಂಗಳೂರಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಾಂಗ್ರೆಸ್ ಹೇಳಿದ್ದಾರೆ. ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಡುವಂತೆ ವಾಜಪೇಯಿ ಪ್ರಸ್ತಾಪ ಮಾಡಿದಾಗ ಭಾರತ ರತ್ನ ಕೊಟ್ಟರು. ಅಂಬೇಡ್ಕರ್ ದೇಶ ವಿಭಜನೆ ಬೇಡ ಅಂತ ಹೇಳಿದ್ದರು. ಹಾಗೇನಾದರೂ ಮಾಡಿದರೂ ಹಿಂದೂ ಮುಸ್ಲಿಮರನ್ನು ಗೌರವಯುತವಾಗಿ ವಿನಿಮಯ ಮಾಡಿಕೊಳ್ಳಬೇಕು ಎಂದು ತಮ್ಮ ಥಾಟ್ಸ್ ಆಫ್ ಪಾಕಿಸ್ತಾನ ಪುಸ್ತಕದಲ್ಲಿ ಹೇಳಿದ್ದಾರೆ. ಆಗ ಆ ರೀತಿ ಹೇಳಿದ್ದಕ್ಕೆ ಅಂಬೇಡ್ಕರ್ ಕೆಲವರ ವಿಚಾರದಲ್ಲಿ ಕೋಮುವಾದಿಯಾದರು ಎಂದು ಸಿ.ಟಿ. ರವಿ ಹೇಳಿದ್ರು.

ಹಿಂದು-ಮುಸ್ಲಿಂರನ್ನ ಗೌರವಯುತವಾಗಿ ವಿನಿಮಯ ಮಾಡಿಕೊಳ್ಳಲು ಹೇಳಿದಕ್ಕೆ ಅಂಬೇಡ್ಕರ್ ಕೆಲವರ ವಿಚಾರದಲ್ಲಿ ಕೋಮುವಾದಿಯಾದ್ರು. ಅಂಬೇಡ್ಕರ್ ಸಾವರ್ಕರ್ರ ಏಜೆಂಟ್ ಅನ್ನಿಸಿಕೊಂಡರು. ಅಂಬೇಡ್ಕರ್ ಶಿಕ್ಷಣ, ಸಂಘಟನೆ ಮಾರ್ಗ ತೋರಿಸಿದರು. ಸಮಾಜ ಸಶಕ್ತವಾಗಬೇಕೆಂದರೆ ಎಲ್ಲರೂ ಸಬಲರಾಗಬೇಕು. ಬಿಜೆಪಿಯಿಂದ ಅಂಬೇಡ್ಕರ್ ಪಂಚಧಾಮಗಳ ಅಭಿವೃದ್ಧಿ ಮಾಡಲಾಗಿದೆ. ಬಿಜೆಪಿ ಅಂಬೇಡ್ಕರ್ ವಿರೋಧಿ ಅಂತ ಬಿಂಬಿಸುತ್ತಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ರನ್ನ ಸೋಲಿಸಿದವರು, ಇಂದು ಅಂಬೇಡ್ಕರ್ ಪರ ಎಂದು ಬಿಂಬಿಸುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷ ರಾಜಕೀಯ ಲಾಭಕ್ಕಾಗಿ ಈ ರೀತಿ ಮಾಡುತ್ತಿದೆ
ಹಿಜಾಬ್ ವಿಚಾರದಲ್ಲಿ ಕಾನೂನು ಪಾಲಿಸಲು ಅವರಿಗೆ ಇಷ್ಟ ಅಲ್ಲ ಎಂಬ ಮನಸ್ಥಿತಿ ತೋರಿಸುತ್ತದೆ. ನಮ್ಮ ದೇಶವನ್ನು ಹಲವು ತುಂಡು ಮಾಡಿದ್ದು ಇದೇ ಬೆಳವಣಿಗೆ. ಅಫ್ಘಾನಿಸ್ತಾನ ಮಾಡಿದ್ದು, ಪಾಕಿಸ್ತಾನ ಮಾಡಿದ್ದು, ಬಾಂಗ್ಲಾ ಮಾಡಿದ್ದು ಇದೇ ಮನಸ್ಥಿತಿ. ಈ ದೇಶದಲ್ಲಿ ಅಂಬೇಡ್ಕರ್ ಬರೆದ ಸಂವಿಧಾನವನ್ನು ಪಾಲಿಸುವುದಿಲ್ಲ ಎನ್ನುವುದು ಯಾವ ಮನಸ್ಥಿತಿ? ಇವತ್ತು ಹಿಜಾಬ್ ಬೇಡಿಕೆ ಇಡುತ್ತಾರೆ, ನಾಳೆ ಇನ್ನೊಂದು ಬೇಡುತ್ತಾರೆ. ಕೋರ್ಟ್ ಯಾವುದೇ ರೀತಿಯ ಧಾರ್ಮಿಕ ಸೂಚಿತ ಬಟ್ಟೆಗಳನ್ನು ಹಾಕಬಾರದು ಎಂದು ಹೇಳಿದ ಮೇಲೂ ಈ ರೀತಿಯ ಮನಸ್ಥಿತಿ ಬಹಳ ಅಪಾಯಕಾರಿ. ಕಾಂಗ್ರೆಸ್ ಪಕ್ಷ ಇದನ್ನು ರಾಜಕೀಯ ಲಾಭಕ್ಕಾಗಿ ಮತ ಬ್ಯಾಂಕ್ ಗಾಗಿ ಮಾಡುತ್ತ ಬಂದಿದೆ. ಒಂದು ಸಮುದಾಯದ ವಿದ್ಯಾರ್ಥಿಗಳು ಹಿಜಾಬ್ ಹಾಕಿಕೊಂಡು ಬರಲು ಅವಕಾಶ ನೀಡಿದರೆ ನಾಳೆ ದಿಗಂಬರ ಅನುಯಾಯಿಗಳು, ನಾಗಾ ಸಾಧು ಅನುಯಾಯಿಗಳು ತಮ್ಮ ಹುಟ್ಟುಡುಗೆಯಲ್ಲಿ ಶಾಲೆಗೆ ಬರುತ್ತೇವೆ ಎಂದರೆ ಪರಿಸ್ಥಿತಿ ಏನಾಗುತ್ತದೆ ಯೋಚನೆ ಮಾಡಿ. ಗಾಂಧೀಜಿ ವೇಷದಲ್ಲಿ ಮೇಲಿನ ಬಟ್ಟೆ ಹಾಕಿಕೊಳ್ಳದೇ ಬರುತ್ತೇವೆಂದರೂ ಪರಿಸ್ಥಿತಿ ಏನಾಗಬಹುದು ಆಲೋಚಿಸಿ.

ಹೈಕೋರ್ಟ್ನಲ್ಲಿ ಅವರಿಗೆ ಹಿನ್ನಡೆಯಾದರೆ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ. ಸುಪ್ರೀಂ ಕೋರ್ಟ್ ಏನು ತೀರ್ಪು ಕೊಡುತ್ತದೋ ಅದನ್ನು ಎಲ್ಲರೂ ಪಾಲಿಸಬೇಕಾಗುತ್ತದೆ. ಕೇಸರಿ ಬಾವುಟ ಹಾರಿಸುವ ವಿಚಾರದಲ್ಲಿ ಈಗಾಗಲೇ ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ. ನಾವು ಯಾವಾಗಲೂ ರಾಷ್ಟ್ರ ಧ್ವಜಕ್ಕೆ‌ ಮೊದಲ ಆದ್ಯತೆ ನೀಡಿದ್ದೇವೆ. ರಾಷ್ಟ್ರ ಧ್ವಜಕ್ಕಿಂತ ಮೇಲೆ ಭಗವಾ ಧ್ವಜ ಹಾರಬೇಕೆಂದು ಯಾವತ್ತೂ ಹೇಳಿಲ್ಲ. ಆದರೆ ಭಗವಾಧ್ವಜಕ್ಕೂ ಒಂದು ಸ್ಥಾನ ಇದೆ. ತ್ರಿವರ್ಣ ಧ್ವಜಕ್ಕೂ ಮೊದಲು ದೇಶದಲ್ಲಿ ಕಾಂಗ್ರೆಸ್ನ ಚರಕ ಇರುವ ಧ್ವಜ ಇತ್ತು. ತ್ರಿವರ್ಣ ಧ್ವಜ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೂ ರಾಷ್ಟ್ರಧ್ವಜ ಅದೇ ಆಗಿರುತ್ತದೆ. ಈಶ್ವರಪ್ಪ ಅಪ್ಪಟ ದೇಶ ಭಕ್ತ, ಅದರಲ್ಲಿ ಅನುಮಾನ ಬೇಡ ಎಂದು ಸಿ.ಟಿ. ರವಿ ಈಶ್ವರಪ್ಪ ಪರ ಮಾತನಾಡಿದ್ದಾರೆ.

ಇದನ್ನು ಓದಿ: ರಾಹುಲ್​ ಗಾಂಧಿ ಬಳಿ ಅವರಪ್ಪನ ವಿಚಾರವಾಗಿ ಪುರಾವೆ ಕೇಳಿದ್ದೆವಾ ಎಂದು ಪ್ರಶ್ನಿಸಿದ್ದ ಅಸ್ಸಾಂ ಮುಖ್ಯಮಂತ್ರಿ ವಿರುದ್ಧ ಪ್ರಕರಣ ದಾಖಲು

Published On - 1:01 pm, Wed, 16 February 22