ರಾಹುಲ್ ಗಾಂಧಿ ಬಳಿ ಅವರಪ್ಪನ ವಿಚಾರವಾಗಿ ಪುರಾವೆ ಕೇಳಿದ್ದೆವಾ ಎಂದು ಪ್ರಶ್ನಿಸಿದ್ದ ಅಸ್ಸಾಂ ಮುಖ್ಯಮಂತ್ರಿ ವಿರುದ್ಧ ಪ್ರಕರಣ ದಾಖಲು
ಸುದ್ದಿಗೋಷ್ಠಿ ನಡೆಸಿದ್ದ ಕೆಸಿಆರ್, ಹಿಮಂತ್ ಬಿಸ್ವಾ ಶರ್ಮಾರನ್ನು ಅಸ್ಸಾಂ ಮುಖ್ಯಮಂತ್ರಿ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾರನ್ನು ಒತ್ತಾಯಿಸಿದ್ದರು. ಅಷ್ಟೇ ಅಲ್ಲ, ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಕ್ಕೆ ಪುರಾವೆ ಕೊಡಿ ಎಂದು ಅವರೂ ಸಹ ಕೇಳಿದ್ದರು.
ಭಾರತೀಯ ಸೇನೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ರಾಹುಲ್ ಗಾಂಧಿ (Rahul Gandhi) ಪುರಾವೆ ಕೇಳಿದ್ದಾರೆ. ಸೇನೆಯ ಬಳಿ ಪುರಾವೆ ಕೇಳುವುದಕ್ಕೆ ಅವರಿಗೇನು ಹಕ್ಕಿದೆ. ನಾವೇನಾದರೂ, ರಾಹುಲ್ ಗಾಂಧಿಯವರು ರಾಜೀವ್ ಗಾಂಧಿಯವರ ಮಗ ಹೌದಾ? ಅಲ್ಲವಾ? ಎಂದು ಪುರಾವೆ ಕೊಡಿ ಎಂದು ಕೇಳಿದ್ದೆವಾ ಎಂಬ ಹೇಳಿಕೆಯನ್ನು ನೀಡಿ, ವಿವಾದ ಸೃಷ್ಟಿಸಿದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Assam Chief Minister Himanta Biswa Sarma) ವಿರುದ್ಧ ತೆಲಂಗಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತೆಲಂಗಾಣ ರಾಜ್ಯ ಕಾಂಗ್ರೆಸ್ ಘಟಕದ ಮುಖ್ಯಸ್ಥ, ಸಂಸದ ರೇವಂತ್ ರೆಡ್ಡಿ ನೀಡಿರುವ ದೂರಿನ ಆಧಾರದ ಮೇಲೆ ಈ ಕೇಸ್ ದಾಖಲಾಗಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 2016ರಲ್ಲಿ ಭಾರತೀಯ ಸೇನೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಮತ್ತು 2019ರಲ್ಲಿ ನಡೆಸಿದ್ದ ಏರ್ಸ್ಟ್ರೈಕ್ ಬಗ್ಗೆ ರಾಹುಲ್ ಗಾಂಧಿ ಪುರಾವೆ ಕೇಳಿದ್ದರ ಬಗ್ಗೆ, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ತಿರುಗೇಟು ನೀಡುವ ಭರದಲ್ಲಿ ವಿವಾದ ಸೃಷ್ಟಿಸಿದ್ದರು. ಉತ್ತರಾಖಂಡ್ನಲ್ಲಿ ರ್ಯಾಲಿಯಲ್ಲಿ ಮಾತನಾಡಿದ್ದ ಅವರು, ಬಿಜೆಪಿ ಯಾವತ್ತೂ ರಾಹುಲ್ ಗಾಂಧಿ, ರಾಜೀವ್ ಗಾಂಧಿಯವರ ಮಗನೋ ಅಲ್ಲವೋ ಎಂಬ ಬಗ್ಗೆ ಪುರಾವೆ ಕೇಳಿಲ್ಲ ಎಂದಿದ್ದರು. ಆದರೆ ಈ ಮಾತಿಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದರು.
ಸುದ್ದಿಗೋಷ್ಠಿ ನಡೆಸಿದ್ದ ಕೆಸಿಆರ್, ಹಿಮಂತ್ ಬಿಸ್ವಾ ಶರ್ಮಾರನ್ನು ಅಸ್ಸಾಂ ಮುಖ್ಯಮಂತ್ರಿ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾರನ್ನು ಒತ್ತಾಯಿಸಿದ್ದರು. ಅಷ್ಟೇ ಅಲ್ಲ, ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಕ್ಕೆ ಪುರಾವೆ ಕೊಡಿ ಎಂದು ಅವರೂ ಸಹ ಕೇಳಿದ್ದರು. ಮತ್ತೆ ಅದಕ್ಕೂ ಕಟುವಾಗಿ ಪ್ರತಿಕ್ರಿಯೆ ನೀಡಿದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ, ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರಾ ಇಲ್ಲವಾ ಎಂದು ಸೇನೆಯನ್ನು ಪ್ರಶ್ನಿಸುವುದೇ ಅತ್ಯಂತ ದೊಡ್ಡ ಅಪರಾಧ ಎಂದು ನಾನು ಭಾವಿಸುತ್ತೇನೆ. ಅಷ್ಟಾಗ್ಯೂ ಅವರು ಸೇನೆಯ ಕಾರ್ಯಾಚರಣೆ ಪ್ರಶ್ನಿಸುತ್ತಾರೆ ಎಂದರೆ, ಅದರು ಅವರ ಕೀಳು ಮನಸ್ಥಿತಿ ತೋರಿಸುತ್ತದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ನಾನು ಟೀಕಿಸಿದ್ದಕ್ಕೆ ಕೆಸಿಆರ್ ತಳಮಳಗೊಂಡಿದ್ದಾರೆ ಎಂದು ಹೇಳಿದ್ದರು.
ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಹಿಮಂತ ಅವರ ಹೆಸರು ಹೇಳದೆ ಅವರ ನಡವಳಿಕೆಯನ್ನು ಖಂಡಿಸಿದ್ದರು. ಒಬ್ಬರು ಸಿಎಂ ಆದವರು ಹೀಗೆ ವೈಯಕ್ತಿಕ ನಿಂದನೆ ಮಾಡುತ್ತ ಕಾಲಹರಣ ಮಾಡಬಾರದು. ಇದರಿಂದ ಮುಂದೆ ಆಗಬಹುದಾದ ಅಪಾಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ನೀವು ಎಲ್ಲಿರಲು ಬಯಸಿದ್ದಿರೋ, ಅದೇ ಒಳ್ಳೆಯ ಹುದ್ದೆಯಲ್ಲಿ ಇದ್ದೀರಿ. ಇಷ್ಟಾಗಿಯೂ ಕೂಡ ನೀವು ಕಟುವಾಗಿ, ದ್ವೇಷಯುಕ್ತವಾಗಿ ಮಾತನಾಡುವುದನ್ನು ಮುಂದುವರಿಸಿದ್ದೀರಿ. ಇದೆಲ್ಲ ನಿಮ್ಮ ವಿಷಯ ಲಂಪಟತೆಯನ್ನು ತೋರಿಸುತ್ತದೆ ಎಂದು ಹೇಳಿದ್ದರು.
ಇದನ್ನೂ ಓದಿ: ‘ಲತಾಜೀ ಇಲ್ಲದೇ ನಾನಿಲ್ಲ’ ಎಂದು ಹೇಳಿದ್ದ ಬಪ್ಪಿ ಲಹಿರಿ; 10 ದಿನದ ಅಂತರದಲ್ಲಿ ಇಬ್ಬರೂ ವಿಧಿವಶ
Published On - 12:58 pm, Wed, 16 February 22