‘ಲತಾಜೀ ಇಲ್ಲದೇ ನಾನಿಲ್ಲ’ ಎಂದು ಹೇಳಿದ್ದ ಬಪ್ಪಿ ಲಹಿರಿ; 10 ದಿನದ ಅಂತರದಲ್ಲಿ ಇಬ್ಬರೂ ವಿಧಿವಶ

ಲತಾ ಮಂಗೇಶ್ಕರ್​ ಮತ್ತು ಬಪ್ಪಿ ಲಹಿರಿ ಅವರ ನಡುವೆ ಆಪ್ತ ಒಡನಾಟವಿತ್ತು. ಆ ಕುರಿತು ಬಪ್ಪಿ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಇವರಿಬ್ಬರನ್ನೂ ಕಳೆದುಕೊಂಡು ಭಾರತೀಯ ಚಿತ್ರರಂಗ ಬಡವಾಗಿದೆ.

‘ಲತಾಜೀ ಇಲ್ಲದೇ ನಾನಿಲ್ಲ’ ಎಂದು ಹೇಳಿದ್ದ ಬಪ್ಪಿ ಲಹಿರಿ; 10 ದಿನದ ಅಂತರದಲ್ಲಿ ಇಬ್ಬರೂ ವಿಧಿವಶ
ಬಪ್ಪಿ ಲಹಿರಿ, ಲತಾ ಮಂಗೇಶ್ಕರ್
Follow us
TV9 Web
| Updated By: ಮದನ್​ ಕುಮಾರ್​

Updated on: Feb 16, 2022 | 1:18 PM

ಹಿಂದಿ ಚಿತ್ರರಂಗಕ್ಕೆ ಪದೇಪದೇ ಕಹಿ ಸುದ್ದಿ ಕೇಳಿಬರುತ್ತಿದೆ. ಸೆಲೆಬ್ರಿಟಿಗಳ ನಿಧನದಿಂದ ಬಾಲಿವುಡ್​ ಮಂಕಾಗಿದೆ. ಕೆಲವೇ ದಿನಗಳ ಹಿಂದೆ ಖ್ಯಾತ ಗಾಯಕಿ ಲತಾ ಮಂಗೇಶ್ಕರ್​ (Lata Mangeshkar) ಅವರ ಅಗಲಿಕೆಯಿಂದ ತೀವ್ರ ನೋವುಂಟಾಗಿತ್ತು. ಈಗ ಜನಪ್ರಿಯ ಸಂಗೀತ ನಿರ್ದೇಶಕ ಬಪ್ಪಿ ಲಹಿರಿ (Bappi Lahiri) ಅವರು ಇಹಲೋಕ ತ್ಯಜಿಸಿದ್ದಾರೆ. ಇಂದು (ಫೆ.16) ಅವರು ಕೊನೆಯುಸಿರೆಳೆದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ಹಲವು ಬಗೆಯ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಬಪ್ಪಿ ಲಹಿರಿ ಮುಂಬೈನಲ್ಲಿ ಮೃತರಾದರು. ಅವರ ನಿಧನಕ್ಕೆ (Bappi Lahiri Death) ಭಾರತೀಯ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಬಪ್ಪಿ ಲಹಿರಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು ಮತ್ತು ಆಪ್ತರು ಪ್ರಾರ್ಥಿಸುತ್ತಿದ್ದಾರೆ. ಬಪ್ಪಿ ಲಹಿರಿ ಮತ್ತು ಲತಾ ಮಂಗೇಶ್ಕರ್​ ನಡುವೆ ಆಪ್ತವಾದ ಒಡನಾಟ ಇತ್ತು. ಹಲವು ದಶಕಗಳಿಂದ ಅವರಿಬ್ಬರೂ ಪರಸ್ಪರ ಆತ್ಮೀಯರಾಗಿದ್ದರು. ‘ಲತಾಜೀ ಇಲ್ಲದೇ ನಾನಿಲ್ಲ’ ಎಂದು ಹಲವು ವರ್ಷಗಳ ಹಿಂದೆಯೇ ಬಪ್ಪಿ ಲಹಿರಿ ಹೇಳಿದ್ದರು. ಲತಾ ಮಂಗೇಶ್ಕರ್​ ನಿಧನರಾಗಿ 10 ದಿನ ಕಳೆಯುವುದರಲ್ಲಿ ಬಪ್ಪಿ ಲಹಿರಿ ಕೂಡ ಇಹಲೋಕ ತ್ಯಜಿಸಿರುವುದು ನಿಜಕ್ಕೂ ಕಾಕತಾಳೀಯವೇ ಸರಿ.

2012ರಲ್ಲಿ ‘ಇ ಟೈಮ್ಸ್​’ಗೆ ನೀಡಿದ ಸಂದರ್ಶನದಲ್ಲಿ ಬಪ್ಪಿ ಲಹಿರಿ ಅವರು ಈ ಮಾತನ್ನು ಹೇಳಿದ್ದರು. ಲತಾ ಮಂಗೇಶ್ಕರ್​ ಜೊತೆ ತಮಗೆ ಇರುವ ಒಡನಾಟ ಎಂಥದ್ದು ಎಂಬುದನ್ನು ಅವರು ವಿವರಿಸಿದ್ದರು. ‘ನಾನು ನಾಲ್ಕು ವರ್ಷದ ಬಾಲಕನಾಗಿದ್ದಾಗ ಲತಾಜೀ ನಮ್ಮ ಮನೆಗೆ ಬಂದು ನನಗೆ ಆಶೀರ್ವಾದ ಮಾಡಿದ್ದರು. ಅವರ ತೊಡೆ ಮೇಲೆ ನಾನು ಕುಳಿತಿರುವ ಫೋಟೋ ಈಗಲೂ ನನ್ನ ಬಳಿ ಇದೆ. ಬಾಂಗ್ಲಾದಲ್ಲಿ ಖ್ಯಾತ ಸಂಗೀತ ನಿರ್ದೇಶಕರಾಗಿದ್ದ ನನ್ನ ತಂದೆ ಅಪರೇಶ್​​ ಲಹಿರಿ ಅವರಿಗಾಗಿ ಲತಾಜೀ ಅನೇಕ ಗೀತೆಗಳನ್ನು ಹಾಡಿದ್ದರು’ ಎಂಬುದನ್ನು ಬಪ್ಪಿ ಲಹಿರಿ ನೆನಪು ಮಾಡಿಕೊಂಡಿದ್ದರು.

‘ಆ ಕಾಲದಿಂದಲೂ ಲತಾಜೀ ಅವರು ನನಗೆ ಬೆಂಬಲ ನೀಡುತ್ತ ಬಂದಿದ್ದಾರೆ. ಬಂಗಾಲಿ ಚಿತ್ರಕ್ಕೆ ನಾನು ಮೊದಲ ಬಾರಿಗೆ ಸಂಗೀತ ನಿರ್ದೇಶನ ಮಾಡಿದಾಗ ಅವರು ನನಗೆ ಹಾಡಿದ್ದರು. ಅವರಿಲ್ಲದೇ ಇದ್ದಿದ್ದರೆ ಇತರರ ಪೈಪೋಟಿಯ ಎದುರು ನಾನು ಉಳಿದುಕೊಳ್ಳಲು ಆಗುತ್ತಿರಲಿಲ್ಲ’ ಎಂದು ಬಪ್ಪಿ ಲಹಿರಿ ಹೇಳಿದ್ದರು.

ಆಮಿರ್ ಖಾನ್​ ತಂದೆ ತಾಹೀರ್​ ಹುಸೇನ್​ ನಿರ್ದೇಶನ ಮಾಡಿದ್ದ ‘ಝಕ್ಮೀ’ ಚಿತ್ರದಿಂದ ಬಪ್ಪಿ ಲಹಿರಿ ಅವರಿಗೆ ಬಾಲಿವುಡ್​ನಲ್ಲಿ ಮೊದಲ ಯಶಸ್ಸು ಸಿಕ್ಕಿತ್ತು. ಆ ಚಿತ್ರದಲ್ಲಿಯೂ ಲತಾ ಮಂಗೇಶ್ಕರ್​ ಹಾಡಿದ್ದ ‘ಆವೋ ತುಮೆ ಚಾಂದ್​ ಪೇ ಲೇ ಜಾಯೇ..’ ಹಾಗೂ ‘ಅಭಿ ಅಭಿ ಥಿ ದುಷ್ಮನಿ..’ ಗೀತೆಗಳು ಸೂಪರ್​ ಹಿಟ್​ ಆಗಿದ್ದವು. ಆ ಮೂಲಕ ಬಾಲಿವುಡ್​ನಲ್ಲಿ ಬಪ್ಪಿ ಲಹಿರಿ ಅವರು ನೆಲೆ ಕಂಡುಕೊಳ್ಳಲು ಲತಾ ಅವರ ಹಾಡುಗಳು ಸಹಕಾರಿ ಆಗಿದ್ದವು.

ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ ಮಾತ್ರವಲ್ಲದೆ ರಾಜಕಾರಣಿ ಆಗಿಯೂ ಬಪ್ಪಿ ಲಹಿರಿ ಗುರುತಿಸಿಕೊಂಡಿದ್ದರು. ಚಿತ್ರರಂಗಕ್ಕೆ ಹಲವಾರು ಸೂಪರ್​ ಹಿಟ್​ ಗೀತೆಗಳನ್ನು ನೀಡಿದ್ದ ಅವರ ಕೊಡುಗೆ ಅಪಾರ. ‘ಕೃಷ್ಣ ನೀ ಬೇಗನೆ ಬಾರೋ’, ‘ಆಫ್ರಿಕಾದಲ್ಲಿ ಶೀಲಾ’, ‘ಪೊಲೀಸ್​ ಮತ್ತು ದಾದಾ’ ಮುಂತಾದ ಕನ್ನಡ ಸಿನಿಮಾಗಳಿಗೂ ಬಪ್ಪಿ ಲಹಿರಿ ಸಂಗೀತ ನಿರ್ದೇಶನ ಮಾಡಿದ್ದರು.

ಇದನ್ನೂ ಓದಿ:

Bappi Lahiri: ಚಿತ್ರರಂಗದ ದಿಗ್ಗಜರೊಂದಿಗೆ ಕೆಲಸ ಮಾಡಿದ್ದ ಬಪ್ಪಿ ಲಹಿರಿ; ಇಲ್ಲಿವೆ ಅಪರೂಪದ ಫೋಟೋಗಳು

Bappi Lahiri: ಸ್ಯಾಂಡಲ್​ವುಡ್​ನಲ್ಲೂ ಗುರುತಿಸಿಕೊಂಡಿದ್ದ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ಇನ್ನಿಲ್ಲ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ