Bappi Lahiri: ಬಪ್ಪಿ ಲಹಿರಿ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ; ಕಂಬನಿ ಮಿಡಿದ ಚಿತ್ರರಂಗ
Bappi Lahiri Passes Away: ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಬಪ್ಪಿ ಲಹಿರಿ ಅವರ ನಿಧನಕ್ಕೆ ಗಣ್ಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
Bappi Lahiri Death | ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಬಪ್ಪಿ ಲಹಿರಿ (Bappi Lahiri) ಮುಂಬೈನಲ್ಲಿ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಬಪ್ಪಿ ಡಾ ಎಂದೇ ಎಲ್ಲರಿಂದ ಗುರುತಿಸಿಕೊಂಡಿದ್ದ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಕ್ಷಯ್ ಕುಮಾರ್ (Akshay Kumar), ಅಜಯ್ ದೇವಗನ್ ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಕುಟುಂಬಸ್ಥರು ಹಾಗೂ ಆಪ್ತರಿಗೆ ಸಾಂತ್ವನ ಹೇಳಿರುವ ಪ್ರಧಾನಿ ಮೋದಿ (PM Narendra Modi), ‘‘ಬಪ್ಪಿ ಲಹಿರಿ ಅವರು ಸಂಗೀತದಲ್ಲಿ ಎಲ್ಲಾ ಭಾವನೆಗಳನ್ನು ಸಮರ್ಥವಾಗಿ ಕಟ್ಟಿಕೊಡುತ್ತಿದ್ದರು. ಅವರ ಕೆಲಸಗಳು ಮುಂದಿನ ಪೀಳಿಗೆಯವರೂ ಸ್ಮರಿಸಿಕೊಳ್ಳುತ್ತಾರೆ. ಅವರ ಲವಲವಿಕೆ ಸ್ವಭಾವವನ್ನು ಎಲ್ಲರೂ ನೆನಪಿಡುತ್ತಾರೆ. ಅವರ ನಿಧನದಿಂದ ದುಃಖವಾಗಿದೆ’’ ಎಂದು ಟ್ವೀಟ್ ಮಾಡಿದ್ದಾರೆ.
Shri Bappi Lahiri Ji’s music was all encompassing, beautifully expressing diverse emotions. People across generations could relate to his works. His lively nature will be missed by everyone. Saddened by his demise. Condolences to his family and admirers. Om Shanti. pic.twitter.com/fLjjrTZ8Jq
— Narendra Modi (@narendramodi) February 16, 2022
ಬಪ್ಪಿ ಲಹಿರಿ ನಿಧನಕ್ಕೆ ಕಂಬನಿ ಮಿಡಿದ ಚಿತ್ರರಂಗ:
ಬಪ್ಪಿ ಲಹಿರಿ ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. ಅಕ್ಷಯ್ ಕುಮಾರ್ ಸಂತಾಪ ವ್ಯಕ್ತಪಡಿಸಿದ್ದು, ‘‘ಇಂದು ಸಂಗೀತ ಲೋಕದ ಮತ್ತೋರ್ವ ದಿಗ್ಗಜನನ್ನು ಕಳೆದುಕೊಂಡಿದ್ದೇವೆ. ನನ್ನನ್ನೂ ಸೇರಿದಂತೆ ಲಕ್ಷಾಂತರ ಜನರು ಹೆಜ್ಜೆ ಹಾಕಲು ಬಪ್ಪಿ ಅವರ ಸಂಗೀತ ಕಾರಣವಾಗಿದೆ. ನೀವು ಎಲ್ಲರಿಗೂ ನೀಡಿದ ಆನಂದಕ್ಕೆ ಧನ್ಯವಾದಗಳು’’ ಎಂದು ಬರೆದಿರುವ ಅಕ್ಷಯ್, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಖ್ಯಾತ ನಟಿ ರವೀನಾ ಟಂಡನ್, ‘ನಿಮ್ಮ ಸಂಗೀತ, ಹಾಡನ್ನು ಕೇಳುತ್ತಾ ನಾವೆಲ್ಲಾ ಬೆಳೆದಿದ್ದೇವೆ. ನಿಮ್ಮ ನಗುಮುಖವನ್ನು ಎಂದೆಂದಿಗೂ ಮಿಸ್ ಮಾಡಿಕೊಳ್ಳುತ್ತೇವೆ’ ಎಂದು ಬರೆದಿದ್ದಾರೆ. ಅಜಯ್ ದೇವಗನ್ ಟ್ವೀಟ್ ಮಾಡಿ, ಬಪ್ಪಿ ಲಹಿರಿ ಅವರು ಹಿಂದಿ ಚಿತ್ರರಂಗಕ್ಕೆ ಸಮಕಾಲೀನ ಸಂಗೀತವನ್ನು ಪರಿಚಯಿಸಿದವರು. ವೈಯಕ್ತಿಕವಾಗಿ ಪ್ರೀತಿಪಾತ್ರರು. ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಬರೆದಿದ್ದಾರೆ. ನಿಮ್ರತ್ ಕೌರ್, ಸುಜಯ್ ಘೋಷ್, ಮಧುರ್ ಭಂಡಾರ್ಕರ್ ಮೊದಲಾದವರು ಬಪ್ಪಿ ಲಹಿರಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಹಿಂದಿಯಲ್ಲಿ ಡಿಸ್ಕೋ ಡಾನ್ಸರ್, ರಾತ್ ಬಾಕಿ, ಬಂಬಾಯ್ ಸೇ ಆಯಾ ಮೇರಾ ದೋಸ್ತ್ ಸೇರಿದಂತೆ ಹಲವಾರು ಹಿಟ್ಗಳನ್ನು ಬಪ್ಪಿ ಲಹಿರಿ ನೀಡಿದ್ದರು. ಡಿಸ್ಕೋ ಡ್ಯಾನ್ಸರ್, ಹಿಮ್ಮತ್‌ವಾಲಾ, ಶರಾಬಿ, ಅಡ್ವೆಂಚರ್ಸ್ ಆಫ್ ಟಾರ್ಜಾನ್, ಡ್ಯಾನ್ಸ್ ಡ್ಯಾನ್ಸ್, ಸತ್ಯಮೇವ್ ಜಯತೆ, ಕಮಾಂಡೋ, ನಂಬರಿ ಆದ್ಮಿ ಮತ್ತು ಶೋಲಾ ಔರ್ ಶಬ್ನಮ್ ಮೊದಲಾದ ಚಲನಚಿತ್ರಗಳಿಗೆ ಬಪ್ಪಿ ಲಾಹಿರಿ ಸಂಗೀತ ಸಂಯೋಜಿಸಿದ್ದು, ಗೀತೆಗಳು ಹಿಟ್ ಆಗಿದ್ದವು. ಕನ್ನಡ, ತಮಿಳು, ತೆಲುಗು, ಗುಜರಾತಿ, ಬಂಗಾಳಿ, ಹಿಂದಿ ಚಿತ್ರರಂಗಗಳಲ್ಲಿ ಬಪ್ಪಿ ಲಹಿರಿ ಕೆಲಸ ಮಾಡಿದ್ದರು.
ಇದನ್ನೂ ಓದಿ:
Bappi Lahiri: ಸ್ಯಾಂಡಲ್ವುಡ್ನಲ್ಲೂ ಗುರುತಿಸಿಕೊಂಡಿದ್ದ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ಇನ್ನಿಲ್ಲ
Bhargavi Narayan: ನೇತ್ರ, ದೇಹದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಹಿರಿಯ ನಟಿ ಭಾರ್ಗವಿ ನಾರಾಯಣ್