Aniruddha Birthday: ಸ್ಯಾಂಡಲ್​ವುಡ್​ನಿಂದ ಕಿರುತೆರೆಯ ‘ಸೆನ್ಸೇಶನ್ ಸ್ಟಾರ್’ವರೆಗೆ; ಇಲ್ಲಿದೆ ಅನಿರುದ್ಧ ಜೀವನ ಪಯಣ

Aniruddha Jatkar Birthday: ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಅನಿರುದ್ಧ ಅವರಿಗೆ ಇಂದು (ಫೆಬ್ರವರಿ 16) ಜನ್ಮದಿನದ ಸಂಭ್ರಮ. ಸ್ಯಾಂಡಲ್​ವುಡ್​ನಲ್ಲಿ ಕಾಣಿಸಿಕೊಂಡು ನಂತರ ಕಿರುತೆರೆಯಲ್ಲಿ ಸ್ಟಾರ್ ಆದ ಅವರ ಸಾಧನೆಗಳು ಒಂದೆರಡಲ್ಲ.. ಇಲ್ಲಿದೆ ಕುತೂಹಲಕರ ಮಾಹಿತಿ.

Aniruddha Birthday: ಸ್ಯಾಂಡಲ್​ವುಡ್​ನಿಂದ ಕಿರುತೆರೆಯ ‘ಸೆನ್ಸೇಶನ್ ಸ್ಟಾರ್’ವರೆಗೆ; ಇಲ್ಲಿದೆ ಅನಿರುದ್ಧ ಜೀವನ ಪಯಣ
ನಟ ಅನಿರುದ್ಧ
Follow us
TV9 Web
| Updated By: shivaprasad.hs

Updated on:Feb 16, 2022 | 12:30 PM

ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಟ ಅನಿರುದ್ಧ (Aniruddha Jatkar) ಅವರದ್ದು ದೊಡ್ಡ ಹೆಸರು. ಮೊದಲಿಗೆ ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದ ಅನಿರುದ್ಧ ನಂತರ ಕಿರುತೆರೆಯೆಡೆಗೆ ಹೊರಳಿದರು. ಸಿನಿಮಾಗಳ ಮೂಲಕ ಜನರಿಗೆ ಪರಿಚಿತರಾಗಿದ್ದ ಅವರು, ಧಾರಾವಾಹಿಯ ಮೂಲಕ ಕನ್ನಡಿಗರ ಮನೆ-ಮನ ತಲುಪಿದರು. ಇಂದು (ಫೆಬ್ರವರಿ 16) ಅನಿರುದ್ಧ ಅವರಿಗೆ 47ನೇ ಜನ್ಮದಿನದ ಸಂಭ್ರಮ. ಪ್ರಸ್ತುತ ಕನ್ನಡ ಕಿರುತೆರೆಯಲ್ಲಿ ಬಹುಬೇಡಿಕೆಯ ನಟರಾಗಿರುವ ಅವರ ವೃತ್ತಿಜೀವನದ ಆರಂಭ ಹೇಗಿತ್ತು? ಧಾರಾವಾಹಿ ಅವರ ಬದುಕಿಗೆ ಹೊಸ ತಿರುವು ನೀಡಿದ್ದು ಹೇಗೆ? ನಟನೆಯಾಚೆಗೆ ಅನಿರುದ್ಧ ಮಾಡಿರುವ ಸಾಧನೆಗಳೆಷ್ಟು? ಈ ಎಲ್ಲವುಗಳ ಕುರಿತು ಕುತೂಹಲಕರ ವಿಚಾರಗಳು ಇಲ್ಲಿವೆ.

ಮೊದಲಿಗೆ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅನಿರುದ್ಧ್:

ಅನಿರುದ್ಧ ಅವರು ವ್ಯಾಸಂಗ ಮಾಡಿದ್ದು ಆರ್ಕಿಟೆಕ್ಟ್. ಮೊದಲಿಗೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಅವರು, ಕೆಲಸದ ನಂತರ ನಾಟಕಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅದೇ ಸಮಯದಲ್ಲಿ ಅವರ ಸಿನಿಮಾ ಪಯಣವೂ ಆರಂಭವಾಯಿತು. 2001ರಲ್ಲಿ ದಿನೇಶ್ ಬಾಬು ನಿರ್ದೇಶನದ ‘ಚಿಟ್ಟೆ’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಅನಿರುದ್ಧ ಪದಾರ್ಪಣೆ ಮಾಡಿದರು. ಈ ಚಿತ್ರ ವೀಕ್ಷಕರ ಗಮನಸೆಳೆದಿತ್ತು. ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ತುಂಟಾಟ’, ದಿನೇಶ್ ಬಾಬು ನಿರ್ದೇಶನದ ‘ನೀನೆಲ್ಲೋ ನಾನಲ್ಲೇ’ ಮೊದಲಾದ ಚಿತ್ರಗಳು ಅನಿರುದ್ಧ್​ಗೆ ಖ್ಯಾತಿ ತಂದುಕೊಟ್ಟವು. ‘ಇಜ್ಜೋಡು’ ಚಿತ್ರದ ಪಾತ್ರ ಪೋಷಣೆ ಅನಿರುದ್ಧ ಅವರಲ್ಲಿದ್ದ​ ಅಭಿನಯ ಪ್ರತಿಭೆಗೆ ಸಾಕ್ಷಿ ಒದಗಿಸಿತ್ತು.

ಮುಖ್ಯಪಾತ್ರಗಳಲ್ಲಿ ಗುರುತಿಸಿಕೊಂಡಿದ್ದಲ್ಲದೇ ‘ರಾಮ ಶಾಮ ಭಾಮ’, ‘ಸತ್ಯವಾನ್ ಸಾವಿತ್ರಿ’ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದ ಅನಿರುದ್ಧ, ಜನರ ಮನಗೆದ್ದಿದ್ದರು. ಕನ್ನಡವಲ್ಲದೇ ತಮಿಳು, ಹಿಂದಿ, ಮರಾಠಿ, ತೆಲುಗು ಚಿತ್ರರಂಗಗಳಲ್ಲೂ ಅವರು ಕೆಲಸ ಮಾಡಿದ್ದಾರೆ. ಚಿತ್ರರಂಗದಲ್ಲಿ ಇಷ್ಟೆಲ್ಲಾ ಗುರುತಿಸಿಕೊಂಡರೂ ಕೂಡ ಅನಿರುದ್ಧ ಅವರಿಗೆ ನಿರೀಕ್ಷಿತ ಮಟ್ಟದ ಯಶಸ್ಸು ಸಿಕ್ಕಿರಲಿಲ್ಲ ಎಂದೇ ಹೇಳಬೇಕು. ಅಂತಹ ದೊಡ್ಡ ಯಶಸ್ಸನ್ನು, ಸ್ಟಾರ್ ಪಟ್ಟವನ್ನು ನೀಡಿದ್ದು, ಕನ್ನಡ ಕಿರುತೆರೆ ಕ್ಷೇತ್ರ.

ಜೊತೆ ಜೊತೆಯಲಿ ಮೂಲಕ ವೀಕ್ಷಕರ ಮನೆ-ಮನ ತಲುಪಿದ ಅನಿರುದ್ಧ:

ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅನಿರುದ್ಧ ಅವರು ‘ಜೊತೆ ಜೊತೆಯಲಿ’ ಮೂಲಕ ಕಿರುತೆರೆಗೆ ಹೊರಳಿದರು. ಕನ್ನಡದಲ್ಲಿ ಬಹಳಷ್ಟು ಹೊಸತನವನ್ನು ಹೊತ್ತುತಂದಿದ್ದ ಆ ಧಾರಾವಾಹಿಯಲ್ಲಿ ಅನಿರುದ್ಧ 45 ವರ್ಷದ ಉದ್ಯಮಿ ಆರ್ಯವರ್ಧನ್ ಪಾತ್ರದಲ್ಲಿ ಕಾಣಿಸಿಕೊಂಡರು. ಎಲ್ಲಾ ಸಿದ್ಧಮಾದರಿಗಳನ್ನು ಒಡೆದು, ಹೊಸತನ್ನು ಕಟ್ಟಿಕೊಟ್ಟ ಈ ಧಾರಾವಾಹಿ ಎಲ್ಲೆಡೆ ಜನಪ್ರಿಯವಾಯಿತು. ಭಾರತ ಹಾಗೂ ವಿದೇಶದಲ್ಲೂ ವೀಕ್ಷಕರನ್ನು ಹೊಂದಿದ್ದ ಇದು ಅನಿರುದ್ಧ ಅವರಿಗೆ ಅಪಾರ ಖ್ಯಾತಿ ತಂದುಕೊಟ್ಟಿತು.

2019ರ ಸೆಪ್ಟೆಂಬರ್​ನಲ್ಲಿ ಮೊದಲಿಗೆ ಬಿತ್ತರವಾದ ಈ ಧಾರಾವಾಹಿ ಆರಂಭಿಕ ವಾರದಲ್ಲಿ ಅತ್ಯಂತ ಹೆಚ್ಚು ಟಿಆರ್​ಪಿ ಪಡೆದ ಧಾರಾವಾಹಿಯಾಗಿ ದಾಖಲೆ ಬರೆಯಿತು. ದೀರ್ಘ ಕಾಲದವರೆಗೆ ಮೊದಲ ಸ್ಥಾನವನ್ನು ಉಳಿಸಿಕೊಂಡಿತ್ತು. ಇದುವರೆಗೆ ಸುಮಾರು 615ಕ್ಕೂ ಹೆಚ್ಚು ಎಪಿಸೋಡ್​ ಪ್ರಸಾರವಾಗಿರುವ ಇದರ ಕ್ರೇಜ್ ಜನರಿಗೆ ಇನ್ನೂ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿಯೆಂಬಂತೆ ಈಗಲೂ ಟಾಪ್ 5ರೊಳಗೆ ಈ ಧಾರಾವಾಹಿ ಪ್ರತಿ ವಾರ ಕಾಣಿಸಿಕೊಳ್ಳುತ್ತಿದೆ..

‘ಜೊತೆ ಜೊತೆಯಲಿ’ಯ ಅನಿರುದ್ಧ ಅವರ ಪಾತ್ರ ಎಷ್ಟು ಜನಪ್ರಿಯವಾಗಿದೆಯೆಂದರೆ ಜನರು ಅವರನ್ನು ‘ಆರ್ಯವರ್ಧನ್’ ಹೆಸರಿನಿಂದ ಗುರುತಿಸುತ್ತಾರೆ. ಈ ಪಾತ್ರ ಎಲ್ಲೆಡೆ ಟ್ರೆಂಡ್ ಹುಟ್ಟುಹಾಕಿದ್ದಲ್ಲದೇ, ಪ್ರೀತಿಯನ್ನು ಮರುವ್ಯಾಖ್ಯಾನಿಸಿತ್ತು. ಶೀರ್ಷಿಕೆ ಗೀತೆಯಂತೂ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಇದನ್ನು ಗಮನಿಸಿದ ಜೀ ವಾಹಿನಿ ಅನಿರುದ್ಧ ಅವರಿಗೆ ‘ಸೆನ್ಸೇಶನ್ ಸ್ಟಾರ್’ ಎಂಬ ಬಿರುದನ್ನೂ ನೀಡಿ ಗೌರವಿಸಿತ್ತು.

ಸೀರಿಯಲ್, ಸಿನಿಮಾದಾಚೆಗೆ ಅನಿರುದ್ಧ ಬರೆದಿರುವ ದಾಖಲೆಗಳು ಒಂದೆರಡಲ್ಲ!

ಅನಿರುದ್ಧ ಅವರಿಗೆ ಬರವಣಿಗೆ ಬಹಳ ಪ್ರಿಯವಾದುದು. ಕಿರುಚಿತ್ರಗಳು ಅವರ ಮತ್ತೊಂದು ಅಸಕ್ತಿಯ ಕ್ಷೇತ್ರ. 2018ರ ವಿಷ್ಣುವರ್ಧನ್ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ 6 ಕಿರುಚಿತ್ರಗಳನ್ನು ಅನಿರುದ್ಧ ತೆರೆಗೆ ತಂದಿದ್ದರು. ಎಲ್ಲವೂ ಸಾಮಾಜಿಕ ಕಳಕಳಿಯ ವಿಚಾರಗಳನ್ನು ಹೊಂದಿದ್ದವು. ವಿಶೇಷವೆಂದರೆ ಈ ಕಿರುಚಿತ್ರಗಳಲ್ಲಿ ಯಾವುದೇ ರೀತಿಯ ಸಂಭಾಷಣೆಗಳಿರಲಿಲ್ಲ. ಮಾತುಗಳಿಲ್ಲದ, ಸಾಮಾಜಿಕ ಕಳಕಳಿ ಸಾರುವ, ವಿವಿಧ ಬಗೆಯ, ಒಂದೇ ದಿನ ಅತಿ ಹೆಚ್ಚು ಕಿರುಚಿತ್ರ ಬಿಡುಗಡೆ ಮಾಡಿದ ಅನಿರುದ್ಧ ಅವರ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಕಲಾಂ ಅವರ ವರ್ಲ್ಡ್ ರೆಕಾರ್ಡ್ಸ್​ನಲ್ಲಿ ದಾಖಲಾಗಿದೆ.

ಡಾ.ಭಾರತಿ ವಿಷ್ಣುವರ್ಧನ್ ಅವರ ಜೀವನವನ್ನು ಕಟ್ಟಿಕೊಡುವ ‘ಬಾಳೆ ಬಂಗಾರ’ ಎಂಬ ಸಾಕ್ಷ್ಯಚಿತ್ರವನ್ನು ಅನಿರುದ್ಧ ನಿರ್ದೇಶಿಸಿದ್ದಾರೆ. ಇದರ ವಿಷಯ, ವಸ್ತು ಸಂಗ್ರಹ, ಚಿತ್ರಕತೆ ಮತ್ತು ನಿರೂಪಣೆಯಲ್ಲೂ ಅವರು ತೊಡಗಿಸಿಕೊಂಡಿದ್ದರು. ಬದುಕಿರುವ ಮೇರು ನಟಿಯೊಬ್ಬರ ಕುರಿತು ಭಾರತದಲ್ಲಿ ತಯಾರಾದ ಅತ್ಯಂತ ದೀರ್ಘ ಕಾಲಾವಧಿಯ (141 ನಿಮಿಷ) ಸಾಕ್ಷ್ಯಚಿತ್ರ ಎಂಬ ಖ್ಯಾತಿಯನ್ನು ಇದು ಪಡೆದಿದೆ. ಇದೂ ಕೂಡ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಕಲಾಂ ಅವರ ವರ್ಲ್ಡ್ ರೆಕಾರ್ಡ್ಸ್​ನಲ್ಲಿ ದಾಖಲಾಗಿದೆ. ಇದುವರೆಗೆ ಒಟ್ಟು 20 ದಾಖಲೆಗಳನ್ನು ಬರೆದು ವಿಶಿಷ್ಟ ಛಾಪು ಮೂಡಿಸಿದ್ದಾರೆ ಅನಿರುದ್ಧ.

‘ಸೆನ್ಸೇಶನ್ ಸ್ಟಾರ್​’ಗೆ ಹುಟ್ಟುಹಬ್ಬದ ಶುಭಾಶಯ..

ಸಾಹಸ ಸಿಂಹ ವಿಷ್ಣುವರ್ಧನ್ ಹಾಗೂ ಭಾರತಿ ವಿಷ್ಣುವರ್ಧನ್ ಪುತ್ರಿ ಕೀರ್ತಿ ವಿಷ್ಣುವರ್ಧನ್ ಅವರನ್ನು ಅನಿರುದ್ಧ್ ವಿವಾಹವಾಗಿದ್ದಾರೆ. ದಂಪತಿಗೆ ಜ್ಯೇಷ್ಠವರ್ಧನ್ ಹಾಗೂ ಶ್ಲೋಕ ಎಂಬ ಮಕ್ಕಳಿದ್ದಾರೆ. ನಟನೆಯೊಂದಿಗೆ ಬರವಣಿಗೆ, ಅಂಕಣ ಬರಹ, ಗಾಯನ, ಸಾಮಾಜಿಕ ಕಾರ್ಯಗಳಲ್ಲಿ ಅನಿರುದ್ಧ ಅವರು ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಜನ-ಮನ ಗೆದ್ದು, ಅಪಾರ ಖ್ಯಾತಿ ಪಡೆದಿದ್ದರೂ ಸರಳತೆಯಿಂದ, ವಿನಯದಿಂದ ಗುರುತಿಸಿಕೊಂಡಿರುವ ‘ಸೆನ್ಸೇಶನ್​ ಸ್ಟಾರ್​’ಗೆ ಹುಟ್ಟುಹಬ್ಬದ ಶುಭಾಶಯ..

ಇದನ್ನೂ ಓದಿ:

ನಟಿ ಭಾರತಿ ವಿಷ್ಣುವರ್ಧನ್​ ಕುರಿತ ‘ಬಾಳೇ ಬಂಗಾರ’ ಸಾಕ್ಷ್ಯಚಿತ್ರದಿಂದ ದಾಖಲೆ ಬರೆದ ಅನಿರುದ್ಧ

Bappi Lahiri: ಚಿತ್ರರಂಗದ ದಿಗ್ಗಜರೊಂದಿಗೆ ಕೆಲಸ ಮಾಡಿದ್ದ ಬಪ್ಪಿ ಲಹಿರಿ; ಇಲ್ಲಿವೆ ಅಪರೂಪದ ಫೋಟೋಗಳು

Published On - 12:21 pm, Wed, 16 February 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ