ಡಿಸೆಂಬರ್​ನಲ್ಲೇ ಅಡ್ಮಿಷನ್ ಆದ್ರೂ ತರಗತಿ ಆರಂಭಿಸದ ಆರೋಪ; ಬಸವನಗುಡಿಯ BMS ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅಹೋರಾತ್ರಿ ಪ್ರತಿಭಟನೆ

BMS ಇಂಜಿನಿಯರಿಂಗ್ ಸಂಜೆ ಕಾಲೇಜು ವಿದ್ಯಾರ್ಥಿಗಳು ತರಗತಿ ಆರಂಭಿಸಿಲ್ಲವೆಂದು ಧರಣಿ ನಡೆಸಿದ್ದಾರೆ. ನಮಗೆ ನ್ಯಾಯ ಸಿಗುವವರೆಗೆ ಪ್ರತಿಭಟನೆ ನಿಲ್ಲಿಸೋಲ್ಲ ಅಂತಾ ದಿಕ್ಕಾರ ಕೂಗಿದ್ದಾರೆ.

ಡಿಸೆಂಬರ್​ನಲ್ಲೇ ಅಡ್ಮಿಷನ್ ಆದ್ರೂ ತರಗತಿ ಆರಂಭಿಸದ ಆರೋಪ; ಬಸವನಗುಡಿಯ BMS ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅಹೋರಾತ್ರಿ ಪ್ರತಿಭಟನೆ
ಬಸವನಗುಡಿಯ BMS ಕಾಲೇಜ್
Follow us
TV9 Web
| Updated By: ಆಯೇಷಾ ಬಾನು

Updated on:Feb 16, 2022 | 8:47 AM

ಬೆಂಗಳೂರು: ಡಿಸೆಂಬರ್ನಲ್ಲೇ ಅಡ್ಮಿಷನ್ ಆದ್ರೂ ತರಗತಿ ಆರಂಭಿಸದ ಹಿನ್ನೆಲೆಯಲ್ಲಿ ಬೆಂಗಳೂರಿನ ಬಸವನಗುಡಿಯಲ್ಲಿರುವ ಬಿ.ಎಂ.ಎಸ್ ಕಾಲೇಜು((BMS Womens College) ವಿದ್ಯಾರ್ಥಿಗಳು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. BMS ಇಂಜಿನಿಯರಿಂಗ್ ಸಂಜೆ ಕಾಲೇಜು ವಿದ್ಯಾರ್ಥಿಗಳು ತರಗತಿ ಆರಂಭಿಸಿಲ್ಲವೆಂದು ಧರಣಿ ನಡೆಸಿದ್ದಾರೆ. ನಮಗೆ ನ್ಯಾಯ ಸಿಗುವವರೆಗೆ ಪ್ರತಿಭಟನೆ ನಿಲ್ಲಿಸೋಲ್ಲ ಅಂತಾ ದಿಕ್ಕಾರ ಕೂಗಿದ್ದಾರೆ. ತರಗತಿ ಶುರುವಾಗುವವರೆಗೂ ಹೋರಾಟ ಮಾಡುತ್ತೇವೆ ಅಂತಾ ಪಟ್ಟು ಹಿಡಿದಿದ್ದಾರೆ.

ಪ್ರತಿಭಟನೆಗೆ ಕಾರಣಗಳೇನು? ಡಿಸೆಂಬರ್ನಲ್ಲಿ ನಮಗೆ ದಾಖಲಾತಿ ಮಾಡಿಕೊಂಡಿದ್ದಾರೆ. ಮೂರನೇ ಸೆಮಿಸ್ಟರ್ಗೆ ನಾವು ಬಿಎಂಎಸ್ ಇಂಜಿನಿಯರಿಂಗ್ ಸಂಜೆ ಕಾಲೇಜಿಗೆ ಸಾವಿರಾರು ರೂಪಾಯಿ ನೀಡಿ ಆಡ್ಮೀಷನ್ ಆಗಿದ್ದೇವೆ. ಜನವರಿ 2 ರಿಂದ ಕಾಲೇಜು ತರಗತಿ ಶುರು ಅಂತಾ ಹೇಳಿದ್ರು. ಅದರೇ ಇಲ್ಲಿವರೆಗೆ ನಮಗೆ ತರಗತಿಗಳನ್ನ ಶುರು ಮಾಡಿಲ್ಲ. 46 ದಿನಗಳಿಂದ ಯಾವುದೇ ಸರಿಯಾದ ಮಾಹಿತಿ ನೀಡ್ತಿಲ್ಲ. ಪ್ರತಿನಿತ್ಯ ಸಂಜೆ ಕಾಲೇಜಿಗೆ ಬರೋದು ತರಗತಿ ಇಲ್ಲದೇ ವಾಪಸ್ ಹೋಗ್ತಿದ್ದೇವೆ. ಪ್ರಿನ್ಸಿಪಾಲ್ ಗಮನಕ್ಕೆ ತಂದಿದ್ದೇವೆ, ಸರ್ಕಾರದ ಗಮನಕ್ಕೂ ತಂದಿದ್ದೇವೆ. ಆದರೇ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ತಿಂಗಳು ಪರೀಕ್ಷೆ ಶುರುವಾಗಲಿದೆ. ತರಗತಿಗಳೇ ಇಲ್ಲದೇ ನಾವೂ ಹೇಗೆ ಪರೀಕ್ಷೆ ಎದುರಿಸೋದು. ಬೆಳಗ್ಗೆ ಸಮಯದಲ್ಲಿ ಕೆಲಸ ಮಾಡಿಕೊಂಡು ಸಂಜೆ ವಿದ್ಯಾಭ್ಯಾಸ ಮಾಡಲು ಬಂದಿದ್ದೇವೆ. ಆದರೇ ಇಲ್ಲಿ ಇನ್ನೂ ತರಗತಿಗಳೇ ಶುರು ಮಾಡದೇ ನಮ್ಮ ಭವಿಷ್ಯದ ಜೊತೆ ಆಟವಾಡಿತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಬಸವನಗುಡಿ ಬಳಿಯ ಪಿಜ್ಜಾ ಶಾಪ್​ನಲ್ಲಿ ಪ್ರೇಮಿಸಲು ನಿರಾಕರಿಸಿದ ಯುವತಿ ಮೇಲೆ ಹಲ್ಲೆ; ಆರೋಪಿ ಮ್ಯಾನೇಜರ್ ಬಂಧನ

Published On - 8:42 am, Wed, 16 February 22

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ