ಸಾವರ್ಕರ್ V/S ಟಿಪ್ಪು ಸುಲ್ತಾನ್ ದಂಗಲ್; ಸಾವರ್ಕರ್ ಫೋಟೋ ಶಾಲೆಗಳಲ್ಲಿ ಅಳವಡಿಸಿದರೆ ಕಿತ್ತು ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ ಮುಸ್ಲಿಂ ನಾಯಕ

| Updated By: ಆಯೇಷಾ ಬಾನು

Updated on: Jan 07, 2023 | 9:23 AM

ಮುಸ್ಲಿಂ ಮುಖಂಡರು ಶಾಲೆಗಳಲ್ಲಿ ಟಿಪ್ಪು ಸುಲ್ತಾನ್ ಫೋಟೋ ಕೂಡಾ ಹಾಕುವಂತೆ ಮನವಿ ಮಾಡಿದ್ದಾರೆ. ಆದ್ರೆ ಶಿಕ್ಷಣ ಸಚಿವರು ಶಾಲೆಗಳಲ್ಲಿ ಸ್ವಾಂತತ್ರ್ಯ ಹೋರಾಟಗಾರರ ಫೋಟೋ ಮಾತ್ರ ಅವಕಾಶ ಎಂದಿದ್ದಾರೆ.

ಸಾವರ್ಕರ್ V/S ಟಿಪ್ಪು ಸುಲ್ತಾನ್ ದಂಗಲ್; ಸಾವರ್ಕರ್ ಫೋಟೋ ಶಾಲೆಗಳಲ್ಲಿ ಅಳವಡಿಸಿದರೆ ಕಿತ್ತು ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ ಮುಸ್ಲಿಂ ನಾಯಕ
ಸಾವರ್ಕರ್ V/S ಟಿಪ್ಪು ಸುಲ್ತಾನ್
Follow us on

ಬೆಂಗಳೂರು: ಕರ್ನಾಟಕದ ಕರಾವಳಿ ಭಾಗದಲ್ಲಿ ಹಿಜಾಬ್​ನಿಂದ(Hijab) ಶುರುವಾದ ಧರ್ಮ ದಂಗಲ್ ನಿಲ್ಲುವ ಸೂಚನೆಯೇ ನೀಡುತ್ತಿಲ್ಲ. ಒಂದಿಲೊಂದು ವಿಚಾರದಲ್ಲಿ ರಾಜ್ಯ ಸದ್ದು ಮಾಡುತ್ತಿದೆ. ಸದ್ಯ ಶಾಲೆಗಳಲ್ಲಿ ಸಾವರ್ಕರ್ V/S ಟಿಪ್ಪು ಸುಲ್ತಾನ್(Veer Savarkar Vs Tipu Sultan) ಎಂಬ ಧರ್ಮ ದಂಗಲ್ ಶುರುವಾಗಿದೆ. ಶಾಲೆಗಳಲ್ಲಿ ಸಾವರ್ಕರ್ ಫೋಟೋ ಇಡುವ ಬಗ್ಗೆ ಶಿಕ್ಷಣ ಸಚಿವರು ನೀಡಿದ ಹೇಳಿಕೆ ಬಳಿಕ ಸಾರ್ವಕರ್ ಸ್ವಾಂತತ್ರ್ಯ ಹೋರಾಟಗಾರ. ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಅಲ್ವಾ? ಎಂಬ ಕೂಗು ಕೇಳಿ ಬರುತ್ತಿದೆ.

ಇತ್ತೀಚೆಗೆ ಬೆಳಗಾವಿಯ ಜೈಲಿನಲ್ಲಿ ಸಾವರ್ಕರ್ ಫೋಟೋ ಉದ್ಘಾಟಿಸಿದ ಶಿಕ್ಷಣ ಸಚಿವ ಬಿಸಿ ನಾಗೇಶ್ ಶಾಲೆಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಮಾತ್ರ ಇಡಬೇಕು ಎಂದು ಪ್ರತಿಕ್ರಿಯಿಸಿದ್ದರು. ಸಾರ್ವಕರ್ ಸ್ವಾಂತತ್ರ್ಯಕ್ಕಾಗಿ ಹೋರಾಟ ಮಾಡುದ್ರು, ಆದ್ರೆ ಟಿಪ್ಪು ಸುಲ್ತಾನ್ ಸ್ವಾರ್ಥಕ್ಕಾಗಿ ಹೋರಾಟ ಮಾಡಿದ್ದ ಎಂದು ಸಚಿವ ಬಿಸಿ ನಾಗೇಶ್ ಹೇಳಿದ್ದರು. ಆದ್ರೆ ಈಗ ಶಾಲೆಗಳಲ್ಲಿ ಸಾರ್ವಕರ್ ಫೋಟೋ ಅಳವಡಿಕೆಯ ಚಿಂತನೆ ಬೆನ್ನಲೆ ಹೊಸ ಧರ್ಮ ದಂಗಲ್ ಶುರುವಾಗಿದೆ.

ಶಾಲೆಗಳಲ್ಲಿ ಟಿಪ್ಪು ಫೋಟೋ ಅಳವಡಿಕೆಗೆ ಮುಸ್ಲಿಂ ಮುಖಂಡರ ಡಿಮ್ಯಾಂಡ್

ಮುಸ್ಲಿಂ ಮುಖಂಡರು ಶಾಲೆಗಳಲ್ಲಿ ಟಿಪ್ಪು ಸುಲ್ತಾನ್ ಫೋಟೋ ಕೂಡಾ ಹಾಕುವಂತೆ ಮನವಿ ಮಾಡಿದ್ದಾರೆ. ಆದ್ರೆ ಶಿಕ್ಷಣ ಸಚಿವರು ಶಾಲೆಗಳಲ್ಲಿ ಸ್ವಾಂತತ್ರ್ಯ ಹೋರಾಟಗಾರರ ಫೋಟೋ ಮಾತ್ರ ಅವಕಾಶ ಎಂದಿದ್ದಾರೆ. ಸಾರ್ವಕರ್ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಮಕ್ಕಳಿಗೆ ಹೋರಾಟಗಾರರ ಬಗ್ಗೆ ತಿಳಿಯಬೇಕಿದೆ. ಶಾಲೆಗಳಲ್ಲಿ ಎಸ್​ಡಿಎಮ್​ಸಿ ಹಾಗೂ ಶಿಕ್ಷಕರು ನಿಶ್ಚಯ ಮಾಡಿ ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಹಾಕಿದ್ರೆ ತುಂಬಾ ಸಂತೋಷ. ಸಾರ್ವಕರ್ ಫೋಟೋ ಹಾಕಿದ್ರು ಸಂತೋಷ. ಆದ್ರೆ ಟಿಪ್ಪು ಯಾರಿಗಾದ್ರೂ ಸ್ವಾಂತತ್ರ್ಯ ಹೋರಾಟಗಾರ ಅನಿಸಿದ್ರೆ ಹೇಳಲಿ. ಟಿಪ್ಪು ಕನ್ನಡದ ಕಗ್ಗೊಲೆ ಮಾಡಿದವನು. ಕನ್ನಡ ಭಾಷೆ ಹಿಂದಿಕ್ಕಿ ಪರ್ಷಿಯನ್ ಭಾಷೆ ಬೆಳೆಸಿದವನು. ಎಲ್ಲ ಆಡಳಿತ ವ್ಯವಸ್ಥೆಯಿಂದ ಕನ್ನಡ ಭಾಷೆಯನ್ನ ಟಿಪ್ಪು ಕಿತ್ತುಹಾಕಿದ್ದವನು. ಕೊಡಗಿನಲ್ಲಿ ಅತ್ಯಾಚಾರ ಬಲತ್ಕಾರಕ್ಕೆ ಟಿಪ್ಪು ಕಾರಣವಾಗಿದ್ದ. ಟಿಪ್ಪು ಹೋರಾಡಿದ್ದು ತನ್ನ ಸ್ವಾರ್ಥಕ್ಕಾಗಿ ರಾಜ್ಯ ಉಳಿಸಿಕೊಳ್ಳೊದಕ್ಕೆ ಸ್ವಾತಂತ್ರ್ಯಕ್ಕೆ ಅಲ್ಲ. ಟಿಪ್ಪು ತನ್ನ ರಾಜ್ಯ ಉಳಿಸಿಕೊಳ್ಳಲು ಬ್ರಿಟಿಷರ್ ವಿರುದ್ಧ ಹೋರಾಟ ಮಾಡಿದ್ದಾನೆ. ಯಾರಿಗಾದ್ರೂ ಟಿಪ್ಪು ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ದಾಖಲೆ ಇದ್ರೆ ಹೇಳಲಿ ಆಗ ಪೋಟೋ ಹಾಕಬೇಕಾ ಬೇಡ್ವಾ ನೋಡೋಣಾ ಅಂತಾ ಶಿಕ್ಷಣ ಸಚಿವ ಬಿಸಿ ನಾಗೇಶ್ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: ದೈವಕೋಲದ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು, ಕಾಂತಾರ ಸಿನಿಮಾದಂತಿದೆ ಈ ರಿಯಲ್ ಸ್ಟೋರಿ

ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿಕೆ ವಿರುದ್ಧ ಮುಸ್ಲಿಂ ನಾಯಕರು ಗರಂ

ಶಿಕ್ಷಣ ಸಚಿವ ಬಿಸಿ ನಾಗೇಶ್ ಶಾಲೆಗಳಲ್ಲಿ ಟಿಪ್ಪು ಪೋಟೋ ಅಳವಡಿಕೆ ಬೇಡ ಎಂಬ ಹೇಳಿಕೆಗೆ ಮುಸ್ಲಿಂ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ನಾಯಕ ಅಬ್ದುಲ್ ರಜಾಕ್ ಸಚಿವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಟಿಪ್ಪು ಅಪ್ಪಟ ಸ್ವಾತಂತ್ರ್ಯ ಹೋರಾಟಗಾರ. ಸಾರ್ವಕರ್ ಒಬ್ಬ ಗುಲಾಮ. ಬ್ರಿಟಿಷರಿಗೆ ಕ್ಷಮಾರ್ಪಣೆ ಪತ್ರ ಬರೆದ ಗುಲಾಮ. ಟಿಪ್ಪು ಸ್ವಾಂತತ್ರ್ಯಕ್ಕಾಗಿ ಹೋರಾಟ ಮಾಡಿದವರು. ಶಾಲೆಗಳಲ್ಲಿ ಟಿಪ್ಪು ಪೋಟೋ ಹಾಕಬೇಕು ಸಾರ್ವಕರ್ ಪೋಟೋ ಅಲ್ಲ. ಶಾಲೆಗಳಲ್ಲಿ ಸಾರ್ವಕರ್ ಪೋಟೋ ಹಾಕಿದ್ರೆ ಬಿಡ್ತೀವಾ? ಪೋಟೋ ಕಿತ್ತು ಹಾಕುತ್ತೇವೆ ಎಂದು ಅಬ್ದುಲ್ ರಜಾಕ್ ಎಚ್ಚರಿಕೆ ನೀಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:23 am, Sat, 7 January 23