ಬೆಂಗಳೂರು | ದೇಶ ಅಭಿವೃದ್ಧಿ ಹೊಂದಬೇಕಾದರೆ ಹಿಂದೂ-ಮುಸ್ಲಿಂ ಅಂತ ತಾರತಮ್ಯ ಮಾಡಬಾರದು: ಮುಸ್ಲಿಂ ವ್ಯಾಪಾರಿಗಳು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 29, 2022 | 12:02 PM

ದೇಶ ಅಭಿವೃದ್ಧಿ ಹೊಂದಬೇಕು ಅಂತ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ, ಧರ್ಮದ ಹೆಸರಲ್ಲಿ ಭೇದಭಾವ ಮಾಡಿದರೆ ದೇಶ ಅಭಿವೃದ್ಧಿಯಾಗದು ಎಂದು ಆಸಿಫ್ ಹೆಸರಿನ ಮುಸ್ಲಿಂ ಹೇಳಿದ್ದಾರೆ.

ಬೆಂಗಳೂರು: ನಗರದ ಸುಬ್ರಹ್ಮಣ್ಯ ದೇವಸ್ಥಾನ (Subrahmanya Temple) ರಥೋತ್ಸವ ನಡೆಯುವಾಗ ಮುಸ್ಲಿಂ ಸಮುದಾಯದ ವ್ಯಾಪಾರಸ್ಥರಿಗೆ ಅಂಗಡಿಗಳನ್ನು ಹಾಕಲು ಅವಕಾಶ ನೀಡಬಾರದು ಅಂತ ಕೆಲ ಹಿಂದೂ ಪರ ಸಂಘಟನೆಗಳು (Hindu oraganisations) ಹೇಳಿವೆ. ಆದರೆ ಕೆಲ ಮುಸ್ಲಿಂ ವ್ಯಾಪಾರಿಗಳು (Muslim vendors) ಮಾತ್ರ ಯಾವುದೇ ಆತಂಕವಿಲ್ಲದೆ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ‘ನಮಗೇನೂ ಸಮಸ್ಯೆ ಇಲ್ಲ, ಸ್ಥಳೀಯ ಶಾಸಕರು ನಮ್ಮ ಬೆಂಬಲಕ್ಕಿದ್ದಾರೆ, ವ್ಯಾಪಾರದಲ್ಲಿ ಹಿಂದೂ-ಮುಸ್ಲಿಂ ಅಂತ ತಾರತಮ್ಯ ಇರಬಾರದು, ನಾವು ವಸ್ತುಗಳನ್ನ ಖರೀದಿಸುವುದೇ ಹಿಂದೂಗಳಿಂದ, ದೇಶ ಅಭಿವೃದ್ಧಿ ಹೊಂದಬೇಕು ಅಂತ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಧರ್ಮದ ಹೆಸರಲ್ಲಿ ಭೇದಭಾವ ಮಾಡಿದರೆ ದೇಶ ಅಭಿವೃದ್ಧಿಯಾಗದು,’ ಎಂದು ಆಸಿಫ್ ಹೆಸರಿನ ಮುಸ್ಲಿಂ ವ್ಯಾಪಾರಿ ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರನಿಗೆ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ