ವಿವಿ ಪುರಂ ತೇರು: ಸರ್ವ ಧರ್ಮದ ವ್ಯಾಪಾರಿಗಳಿಗೂ ಇತ್ತು ಅವಕಾಶ
ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಧರ್ಮ ದಂಗಲ್ ವಿಚಾರ. ವಿರೋಧದ ನಡುವೆಯು ದೇವಸ್ಥಾನದ ಬಳಿ ಸರ್ವಧರ್ಮ ವ್ಯಾಪಾರಕ್ಕೆ ಅವಕಾಶ
ಬೆಂಗಳೂರು: ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಧರ್ಮ ದಂಗಲ್ ವಿಚಾರದ ವಿರೋಧದ ನಡುವೆಯು ವ್ಯಾಪಾರ ಮಾಡಿದ ಮುಸ್ಲಿಂ ವ್ಯಾಪಾರಿಗಳು. ಮುಸ್ಲಿಂ ವ್ಯಾಪಾರಿಗಳಾದ ಹಿದಾಯತ್ ಮತ್ತು ಆಸಿಫ್ ಮಾತನಾಡಿ ಕೋಲಾರದಿಂದ ಪ್ರತೀ ವರ್ಷವು ಬರುತ್ತೇವೆ. ಸುಮಾರು ನಾಲ್ಕೈದು ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬರ್ತಾಇದ್ದೀವಿ. ಪ್ರತಿ ವರ್ಷವೂ ಇಲ್ಲಿ ಚೆನ್ನಾಗಿ ವ್ಯಾಪಾರ ಕೂಡ ಆಗುತ್ತದೆ. ಇಷ್ಟು ವರ್ಷ ಈ ರೀತಿ ಧರ್ಮ ದಂಗಲ್ ಇರಲಿಲ್ಲ. ಈ ರೀತಿ ಆಗಿದೆ ಅಂತಾ ನಮಗೆ ಇಲ್ಲಿಗೆ ಬಂದಮೇಲೆ ಗೊತ್ತಾಗುತ್ತಿದೆ. ಯಾರಾದರೂ ಬಂದು ಇಲ್ಲಿ ವ್ಯಾಪಾರ ಮಾಡಬೇಡಿ ಎಂದರೆ ನಾವು ಇಲ್ಲಿಂದ ಹೋಗುತ್ತೆವೆ ಎಂದು ಹೇಳಿದರು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 29, 2022 12:58 PM
Latest Videos