ರೌಡಿ ಶೀಟರ್ ಸೈಲೆಂಟ್ ಸುನಿಲ ವಾಸವಾಗಿರುವ ಬೆಂಗಳೂರು ನನ್ನ ವ್ಯಾಪ್ತಿಗೆ ಬರಲ್ಲ: ಅಲೋಕ್ ಕುಮಾರ್, ಎಡಿಜಿಪಿ
ತಮ್ಮ ವ್ಯಾಪ್ತಿಗೆ ಬರುವ ಕೆ ಸಿ ನಾರಾಯಣ ಮುಂತಾದವರ ಬಗ್ಗೆ ಕೇಳಿದರೆ ಉತ್ತರ ಕೊಡುವುದಾಗಿ ಅಲೋಕ್ ಕುಮಾರ್ ಹೇಳಿದರು.
ಬೆಳಗಾವಿ: ಖಡಕ್ ಪೊಲೀಸ್ ಅಧಿಕಾರಿ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ (Alok Kumar) ಅವರು ಸೋಮವಾರ ಬೆಂಗಳೂರಲ್ಲಿ ಕುಖ್ಯಾತ ರೌಡಿ ಶೀಟರ್ ಸೈಲೆಂಟ್ ಸುನಿಲನನ್ನು (Silent Sunil) ಎಲ್ಲರೆದುರೇ ಗದರಿದ್ದನ್ನು ನೀವು ನೋಡಿದ್ದೀರಿ. ಇಂದು ಬೆಳಗಾವಿ (Belagavi) ಮಾಧ್ಯಮದವರೊಂದಿಗೆ ಮಾತಾಡಿದ ಅವರು ಅವನ ಬಗ್ಗೆ ಕಾಮೆಂಟ್ ಮಾಡಲು ನಿರಾಕರಿಸಿದರು. ಸುನೀಲ ಬೆಂಗಳೂರಲ್ಲಿದ್ದಾನೆ ಮತ್ತು ಅದು ತಮ್ಮ ವ್ಯಾಪ್ತಿಗೆ ಬರೋದಿಲ್ಲವಾದ್ದರಿಂದ ಅವನ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಗದು ಎಂದು ಹೇಳಿದರು. ತಮ್ಮ ವ್ಯಾಪ್ತಿಗೆ ಬರುವ ಕೆ ಸಿ ನಾರಾಯಣ ಮುಂತಾದವರ ಬಗ್ಗೆ ಕೇಳಿದರೆ ಉತ್ತರ ಕೊಡುವುದಾಗಿ ಅಲೋಕ್ ಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos