ನನಗ 64 ವಯಸ್ಸಾಗಿದೆ, ತಾಕತ್ ಇದ್ರ ನನ್ನ ಮಗನ ಜೊತೆ ಕುಸ್ತಿ ಹಿಡಿತಿದ್ರ ಹಿಡಿ: ಕಾಶಪ್ಪನವರ್​ಗೆ ದೊಡ್ಡನಗೌಡ ಪಾಟೀಲ್ ಸವಾಲ್

ನನಗ 64 ವಯಸ್ಸಾಗಿದೆ, ತಾಕತ್ ಇದ್ರ ನನ್ನ ಮಗನ ಜೊತೆ ಕುಸ್ತಿ ಹಿಡಿತಿದ್ರ ಹಿಡಿ: ಕಾಶಪ್ಪನವರ್​ಗೆ ದೊಡ್ಡನಗೌಡ ಪಾಟೀಲ್ ಸವಾಲ್

TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Nov 29, 2022 | 6:55 PM

ಮನ್ಯಾಗ ಮಗ ಅದಾನ ಅವನನ್ನು ಕಳಿಸಬಾರದೇನು ಅಂತಾ ಕೇಳ್ತಾರೆ. ಕಾಶಪ್ಪನವರ್​ಗೆ ತಿಂಡಿ ಇದ್ದರ ಅವನ ಜತೆ ಕುಸ್ತಿ ಹಿಡಿಯಲಿ ಎಂದು ಸವಾಲ್ ಹಾಕಿದ್ದಾರೆ.

ಬಾಗಲಕೋಟೆ: ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಹಾಗೂ ಕಾಂಗ್ರೆಸ್ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್​ ನಡುವಿನ ವಾಕ್ಸಮರ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಈ ಇಬ್ಬರ ನಾಯಕರ ನಡುವಿನ ಮಾತಿನ ಸಮರ ಇದೀಗ ಗಂಡಸ್ತನ ಮತ್ತು ತಾಕತ್ತಿನ ಸವಾಲ್​ಗೆ ಬಂದು ನಿಂತಿದೆ.

ಗಂಡಸ್ತನ & ತಾಕತ್ತಿನ ಸವಾಲ್ ಹಾಕಿದ್ದ ವಿಜಯಾನಂದ ಕಾಶಪ್ಪನವರ್​ ಗೆ ತಿರುಗೇಟು ನೀಡಿದ ದೊಡ್ಡನಗೌಡ ಪಾಟೀಲ್, ನನಗ 64 ವಯಸ್ಸಾಗಿದೆ, ನಾನು ಕುಸ್ತಿಗಿಳಿದರೆ ಜನ ನನ್ನನ್ನು ಬೈತಾರೆ. ಮನ್ಯಾಗ ಮಗ ಅದಾನ ಅವನನ್ನು ಕಳಿಸಬಾರದೇನು ಅಂತಾ ಕೇಳ್ತಾರೆ. ಕಾಶಪ್ಪನವರ್​ಗೆ ತಿಂಡಿ ಇದ್ದರ ಅವನ ಜತೆ ಕುಸ್ತಿ ಹಿಡಿಯಲಿ ಎಂದು ಸವಾಲ್ ಹಾಕಿದ್ದಾರೆ.