ಹಿಂದವೀ ಮೀಟ್ ಮಾರ್ಟ್ ಮಾಲೀಕನ ಹತ್ಯೆಗೆ ಸ್ಕೆಚ್? ಮುಸ್ಲಿಂ ಯುವಕರಿಂದ ಬೆದರಿಕೆ, ಮಾಲೀಕ ಮುನೇಗೌಡಗೆ ಪೊಲೀಸ್ ಭದ್ರತೆ

| Updated By: ಆಯೇಷಾ ಬಾನು

Updated on: Apr 20, 2022 | 9:43 AM

ಉಳ್ಳಾಲದ ಹಿಂದವೀ ಮೀಟ್ ಮಾರ್ಟ್ ಸುತ್ತಮುತ್ತ ಮುಸ್ಲಿಂ ಯುವಕರು ರೌಂಡ್ಸ್ ಹಾಕುತ್ತಿದ್ದು ನಿಮ್ಮ ಮಾಲೀಕ ಮುನೇಗೌಡನಿಗೆ ಸರಿಯಾಗಿ ಮಾಡ್ತಿವಿ ಎಂದು ಕೆಲಸಗಾರರಿಗೆ ಧಮ್ಕಿ ಹಾಕುತ್ತಿದ್ದಾರಂತೆ. ಮುನೇಗೌಡನಿಗಾಗಿ ಅಕ್ಕಪಕ್ಕದ ಅಂಗಡಿಗಳ ಬಳಿ ಕಾಯುತ್ತಿದ್ದಾರೆ ಎನ್ನಲಾಗಿದೆ.

ಹಿಂದವೀ ಮೀಟ್ ಮಾರ್ಟ್ ಮಾಲೀಕನ ಹತ್ಯೆಗೆ ಸ್ಕೆಚ್? ಮುಸ್ಲಿಂ ಯುವಕರಿಂದ ಬೆದರಿಕೆ, ಮಾಲೀಕ ಮುನೇಗೌಡಗೆ ಪೊಲೀಸ್ ಭದ್ರತೆ
ಹಿಂದವೀ ಮೀಟ್ ಮಾರ್ಟ್
Follow us on

ಬೆಂಗಳೂರು: ರಾಜ್ಯದಲ್ಲಿ ಶುರುವಾಗಿದ್ದ ಹಲಾಲ್ ಕಟ್ ವಿರೋಧಿ ಆಂದೋಲನದಲ್ಲಿ ತಲೆ ಎತ್ತಿದ ಹಿಂದವೀ ಮೀಟ್ ಮಾರ್ಟ್ಗಳು ಸದ್ಯ ಒಳ್ಳೆಯ ಲಾಭಗಳಿಸುತ್ತಿವೆ. ಬಹುತೇಕ ಹಿಂದೂಗಳು ಇದೇ ಅಂಗಡಿಗಳಲ್ಲಿ ಮಾಂಸ ಖರೀದಿಸುತ್ತಿದ್ದಾರೆ. ಆದ್ರೆ ಇದರ ನಡುವೆ ಹಿಂದವೀ ಮೀಟ್ ಮಾರ್ಟ್ ಅಂಗಡಿಗೆ ಮುಸ್ಲಿಂ ಯುವಕರಿಂದ ಧಮ್ಕಿ ಹಾಕಿರುವ ಆರೋಪ ಕೇಳಿ ಬಂದಿದೆ. ಒಂದು ವಾರದಿಂದ ಮುಸ್ಲಿಂ ಯುವಕರು ಹಿಂದವೀ ಮೀಟ್ ಮಾರ್ಟ್ ಮಾಲೀಕನ ಹತ್ಯೆಗೆ ಸ್ಕೆಚ್? ಹಾಕುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಉಳ್ಳಾಲದ ಹಿಂದವೀ ಮೀಟ್ ಮಾರ್ಟ್ ಸುತ್ತಮುತ್ತ ಮುಸ್ಲಿಂ ಯುವಕರು ರೌಂಡ್ಸ್ ಹಾಕುತ್ತಿದ್ದು ನಿಮ್ಮ ಮಾಲೀಕ ಮುನೇಗೌಡನಿಗೆ ಸರಿಯಾಗಿ ಮಾಡ್ತಿವಿ ಎಂದು ಕೆಲಸಗಾರರಿಗೆ ಧಮ್ಕಿ ಹಾಕುತ್ತಿದ್ದಾರಂತೆ. ಮುನೇಗೌಡನಿಗಾಗಿ ಅಕ್ಕಪಕ್ಕದ ಅಂಗಡಿಗಳ ಬಳಿ ಕಾಯುತ್ತಿದ್ದಾರೆ ಎನ್ನಲಾಗಿದೆ. ಬೆದರಿಕೆ ಹಿನ್ನೆಲೆ ಅಂಗಡಿಯ ಬಳಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಭದ್ರತೆ ಕೋರಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಗಿದ್ದು ಭದ್ರತೆ ನೀಡುವುದಾಗಿ ಮುನೇಗೌಡಗೆ ಪೊಲೀಸರು ಭರವಸೆ ನೀಡಿದ್ದಾರೆ.

ಈಗಾಗಲೇ ಬೆಂಗಳೂರಿನ ಏಳು ಕಡೆಗಳಲ್ಲಿ ಹಿಂದವೀ ಮೀಟ್ ಮಾರ್ಟ್ಗಳನ್ನು ಓಪನ್ ಮಾಡಲಾಗಿದೆ. ಮುಂದೆ ಬೆಂಗಳೂರಿನ 198 ವಾರ್ಡ್ಗಳಲ್ಲಿ, ರಾಜ್ಯದ ಎಲ್ಲಾ ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ಹಿಂದವೀ ಮೀಟ್ ಮಾರ್ಟ್ ಓಪನ್ ಮಾಡಲು ಮುನೇಗೌಡ ಮುಂದಾಗಿದ್ದಾರೆ. ಒಂದು ವಾರದಿಂದ ಪ್ರತಿದಿನ ಬೆಳಿಗ್ಗೆ ಯಿಂದ ಸಂಜೆಯವರೆಗೆ ಅಂಗಡಿ ಬಳಿ ಬಂದು ಮುನೇಗೌಡನಿಗೆ ಕಾಯುತ್ತ ಯುವಕರು ಹೊಂಚು ಹಾಕುತ್ತಿದ್ದಾರಂತೆ. ಹೀಗಾಗಿ ಪ್ರತಿ ಎರಡು ಗಂಟೆಗೊಮ್ಮೆ ಅಂಗಡಿ ಮುಂದೆ ಪೊಲೀಸರು ರೌಂಡ್ಸ್ ಹಾಕುತ್ತಾರೆ ಎಂದು ಭರವಸೆ ನೀಡಿದ್ದಾರೆ. ಮುಂದೆ ಯಾರಾದರೂ ಬಂದ್ರೆ ವಾಹನದ ನಂಬರ್ ನೋಟ್ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರಂತೆ.

ಹಿಂದವೀ ಮೀಟ್ ಮಾರ್ಟ್ ಮಾಲೀಕನನ್ನು ಮಸ್ಲಿಂ ಯುವಕರು ವಿರೋಧಿಸಲು ಕಾರಣವೇನು?
ಹಿಂದವೀ ಮೀಟ್ ಮಾರ್ಟ್ ಮಾಲೀಕ ಮುನೇಗೌಡ ಹಲಾಲ್ ಕಟ್ ಮಾಂಸದ ವಿರುದ್ಧ ಅಭಿಯಾನ ನಡೆಸಿದ್ದರು. ಜಟ್ಕಾ ಕಟ್ ಅಭಿಯಾನ ನಡೆಸಿ ಹಿಂದವೀ ಮೀಟ್ ಮಾರ್ಟ್ ಆರಂಭಿಸಿದ್ದರು. ಇದರಿಂದ ಹಲಾಲ್ ಕಟ್ ಮಾಂಸಕ್ಕೆ ಬೇಡಿಕೆ ಕುಸಿದಿತ್ತು. ಹೀಗಾಗಿ ಮುನೇಗೌಡ ವಿರುದ್ಧ ಸಂಚು ರೂಪಿಸಿರುವ ಶಂಕೆ ವ್ಯಕ್ತವಾಗಿದೆ.

ನಾನು ಈಗಾಗಲೇ ಗನ್ ಲೈಸೆನ್ಸ್ ಗೆ ಅಪ್ಲೈ ಮಾಡಿದ್ದೀನಿ
ಇನ್ನು ಘಟನೆ ಸಂಬಂಧ ಮುನೇಗೌಡ ಮಾತನಾಡಿದ್ದು, ಧರ್ಮಕ್ಕಾಗಿ ನನ್ನ ಬಲಿದಾನವಾದ್ರು ಪರವಾಗಿಲ್ಲ. ಸಂತೋಷವಾಗಿ ಇರ್ತೀನಿ. ನಾವು ಸಂಘದ ಕಾರ್ಯಕರ್ತರು ಹಿಡಿದ ಕೆಲಸವನ್ನು ಬಿಡೋದಿಲ್ಲ. ಅವರ ಉದ್ಯಮಕ್ಕೆ ಕೈ ಹಾಕಿದ್ದಿವಿ, ನಮ್ಮ ಜನಗಳನ್ನು ಜಾಗೃತಿ ಗೊಳಿಸಿದ್ದೀವಿ. ಸಮಾಜ ಈಗಾಗಲೇ ನನ್ನನ್ನು ಎಚ್ಚರಿಸಿದೆ. ಅವರ ವಿರುದ್ಧ ಹೋಗ್ತಿದ್ದೀರಾ ಹಾಗಾಗಿ ಎಚ್ಚರಿಕೆಯಿಂದಿರಲು ಹೇಳಿದೆ. ನನ್ನ ಅಂಗಡಿ ಸುತ್ತಲೂ ಅವಶ್ಯಕವಾಗಿ ಓಡಾಡುತ್ತಿದ್ದಾರೆ. ಜ್ಞಾನ ಭಾರತಿ ಸ್ಟೇಷನ್ ನಲ್ಲಿ ಮನವಿ ಮಾಡಿದ್ದೀವಿ. ಪೋಲಿಸರು ಪಾಸಿಟಿವ್ ಆಗಿ ಸ್ಪಂದಿಸಿದ್ದಾರೆ. ನಿನ್ನೆಯಿಂದ ನಮ್ಮ ಅಂಗಡಿಯಲ್ಲಿ ಪಾಯಿಂಟ್ ಬುಕ್ ಇಟ್ಟಿದ್ದಾರೆ. ಪ್ರತಿ ಎರಡು ಗಂಟೆಗಳಿಗೊಮ್ಮೆ ಬೀಟ್ ಹಾಕ್ತಿದ್ದಾರೆ. ನಮ್ಮ ಹುಡುಗನ ಬಳಿ ಬಂದು ಹಿಂದವೀ ಮೀಟ್ ಮಾರ್ಟ್ ಅಲ್ವ ಅಂತ ಕೇಳಿದ್ದಾರೆ. ನಮ್ಮ ಹತ್ತಿರ ಗನ್ ಇದೆ ಮುನೇಗೌಡನಿಗೆ ಹೊಡೆದು ಹಾಕ್ತಿವಿ ಅಂದಿದ್ದಾರೆ. ನಾನು ಈಗಾಗಲೇ ಗನ್ ಲೈಸೆನ್ಸ್ ಗೆ ಅಪ್ಲೈ ಮಾಡಿದ್ದೀನಿ. ನನ್ನ ರಕ್ಷಣೆಗೆ ನಾನು ಸಿದ್ದನಾಗ್ತಿನಿ. ನಾನು ಇಲ್ಲಾಂದ್ರು ಇದನ್ನು ಬೇರೆ ಅವರು ಮುಂದುವರಿಸ್ತಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನಟಿ ಆಗ್ಬೇಕು ಅಂತ ಮನೆ ಬಿಟ್ಟು ಓಡಿಬಂದಿದ್ದ ಯುವತಿ: ಇಂದು ಏನಾಗಿದ್ದಾರೆ ನೋಡಿ; ಇದು ಶಾಲಿನಿ ಸಿನಿಜರ್ನಿ

ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್ನಿಂದ ಗಲಾಟೆ ಪ್ರಕರಣ; ಗಲಾಟೆ ಹಿಂದಿನ ಮಾಸ್ಟರ್ ಮೈಂಡ್‌ಗಾಗಿ ಶೋಧ, ವಸೀಂ ಮೊಬಾಲಿಕ್ ಪಠಾಣ್‌ ಡೆಡ್‌ಲೈನ್ ಅಂತ್ಯ

Published On - 9:10 am, Wed, 20 April 22