ಸಿಡಿ ಆರೋಪಿ ರಮೇಶ್ ಜಾರಕಿಹೊಳಿ ಬಂಧನ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ; ನಲಪಾಡ್ ಹ್ಯಾರಿಸ್ ಬಂಧನ

|

Updated on: Mar 29, 2021 | 12:45 PM

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಬಳಿ ರಸ್ತೆ ಮೇಲೆ ಮಲಗಿ ನಲಪಾಡ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುವಾಗ ಧರಣಿನಿರತ ನಲಪಾಡ್ ಹ್ಯಾರಿಸ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆಯಲಾಗಿದೆ....

ಸಿಡಿ ಆರೋಪಿ ರಮೇಶ್ ಜಾರಕಿಹೊಳಿ ಬಂಧನ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ; ನಲಪಾಡ್ ಹ್ಯಾರಿಸ್ ಬಂಧನ
ನಲಪಾಡ್ ಹ್ಯಾರಿಸ್
Follow us on

ಬೆಂಗಳೂರು: ಶಾಸಕ ರಮೇಶ್ ಜಾರಕಿಹೊಳಿ ಬಂಧಿಸುವಂತೆ ಆಗ್ರಹಿಸಿ ರಮೇಶ್ ಜಾರಕಿಹೊಳಿ ವಿರುದ್ಧ ಬೆಂಗಳೂರಿನ ಮೌರ್ಯ ಸರ್ಕಲ್‌ನಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಹಾಗೂ ಕೋರ್ಟ್ ಮೊರೆ ಹೋಗಿರುವ ಸಚಿವರ ವಿರುದ್ಧವೂ ಕಿಡಿ ಕಾರಿದ್ದು ಬಿ.ಎಸ್. ಯಡಿಯೂರಪ್ಪ ಸಂಪುಟದ 6 ಸಚಿವರು ರಾಜೀನಾಮೆಗೂ ಆಗ್ರಹಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ರಮೇಶ್ ಜಾರಕಿಹೊಳಿ ಅಸಂವಿಧಾನಿಕ ಪದ ಬಳಿಸಿದ್ದಕ್ಕೆ ರಮೇಶ್ ವಿರುದ್ಧ ಧಿಕ್ಕಾರ ಕೂಗಿ ಕೈ ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ. ಆದ್ರೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಬಳಿ ಕಾಂಗ್ರೆಸ್ ಪ್ರತಿಭಟನೆ ನಡೆಸುವಾಗ ಧರಣಿನಿರತ ನಲಪಾಡ್ ಹ್ಯಾರಿಸ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು ಬಿಎಂಟಿಸಿ ಬಸ್​ನಲ್ಲಿ ಕರೆದೊಯ್ದಿದ್ದಾರೆ.

ರಮೇಶ್ ಜಾರಕಿಹೊಳಿ ಬಂಧನಕ್ಕೆ ಒತ್ತಾಯ
ಧರಣಿ ನಡೆಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು ರಮೇಶ್ ಜಾರಕಿಹೊಳಿ ಬಂಧನಕ್ಕೆ ಒತ್ತಾಯಿಸಿದ್ದಾರೆ. ರಮೇಶ್ ಜಾರಕಿಹೊಳಿ ಗೂಂಡಾ, ಸಿಡಿ ಸರ್ಕಾರ, ಇದು ವಿಚಾರಣೆಯೋ ? ಬೆದರಿಕೆಯೋ ಎಂದು ಘೋಷಣೆ ಕೂಗುವ ಮೂಲಕ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಬಳಿ ರಸ್ತೆ ಮೇಲೆ ಮಲಗಿ ನಲಪಾಡ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುವಾಗ ಧರಣಿನಿರತ ನಲಪಾಡ್ ಹ್ಯಾರಿಸ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆಯಲಾಗಿದೆ.

ಸಾಮಾನ್ಯ ವ್ಯಕ್ತಿ ಹೀಗೆ ಮಾಡಿದ್ದರೆ ಇಷ್ಟೊತ್ತಿಗೆ ಬಂಧಿಸುತ್ತಿದ್ದರು
ಇನ್ನು ಪ್ರತಿಭಟನೆ ವೇಳೆ ಬಂಧನಕ್ಕೂ ಮುನ್ನ ಮಾತನಾಡಿದ್ದ ನಲಪಾಡ್ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ರು. ಸಾಮಾನ್ಯ ವ್ಯಕ್ತಿ ಹೀಗೆ ಮಾಡಿದ್ದರೆ ಇಷ್ಟೊತ್ತಿಗೆ ಬಂಧಿಸುತ್ತಿದ್ದರು. ಆದರೆ 24 ದಿನ ಕಳೆದರೂ ಏಕೆ ರಮೇಶ್‌ರನ್ನು ಬಂಧಿಸಿಲ್ಲ. ಆ ವಿಡಿಯೋ ಯಾರಾದರೂ ಮಾಡಲಿ, ಅದರಲ್ಲಿ ಇರೋದ್ಯಾರು. ಬಟ್ಟೆ ಬಿಚ್ಚಿದ್ದು ಯಾರು? ಮಹಿಳೆಗೆ ಅತ್ಯಾಚಾರವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾರಿನ ಮೇಲೆ ಅಟ್ಯಾಕ್ ಮಾಡಿದ್ದಾರೆ. ಡಿಕೆಶಿಗೆ ನೀವು ಹೇಗೆ ಮಾಡಿದ್ದೀರಿ ನಾವೂ ಅದೇ ರೀತಿ ಮಾಡ್ತೇವೆ. ಗಲ್ಲಿ ಗಲ್ಲಿಯಲ್ಲೂ ನಿಮ್ಮನ್ನು ತಡೆಯುತ್ತೇವೆ ಎಂದು ಆಕ್ರೋಶದಿಂದ ನಲಪಾಡ್ ಹ್ಯಾರಿಸ್ ಹೇಳಿಕೆ ನೀಡಿದ್ರು.

ಇದನ್ನೂ ಓದಿ: ಯಾವುದೇ ಪ್ರಭಾವಕ್ಕೆ ಒಳಗಾಗದೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ: ಬಸವರಾಜ ಬೊಮ್ಮಾಯಿ ಸ್ಪಷ್ಟನೆ