ಯಾವುದೇ ಪ್ರಭಾವಕ್ಕೆ ಒಳಗಾಗದೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ: ಬಸವರಾಜ ಬೊಮ್ಮಾಯಿ ಸ್ಪಷ್ಟನೆ
ಮೇಟಿ ಪ್ರಕರಣದಲ್ಲಿ ಕಾಂಗ್ರೆಸ್‌ನವರು ಹೇಗೆ ನಡ್ಕೊಂಡ್ರು? ಹೀಗಾಗಿ ಅವರ ಹೇಳಿಕೆಗೆ ನಾನು ಮಹತ್ವ ನೀಡುವುದಿಲ್ಲ. ಪ್ರಕರಣವನ್ನು ಯಾವುದೇ ಪ್ರಭಾವಕ್ಕೆ ಒಳಗಾಗದೆ ಸೂಕ್ತವಾಗಿ ನಡೆಸಲಾಗುವುದು ಎಂದು ಮಂಗಳೂರಿನಲ್ಲಿ ಇಂದು (ಮಾರ್ಚ್ 28) ಬೊಮ್ಮಾಯಿ ಮಾತನಾಡಿದ್ದಾರೆ.
ಮಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಕೇಸ್ನಲ್ಲಿ ಕಾಂಗ್ರೆಸ್‌ನವರು ಹಾಗೂ ಮತ್ತೊಬ್ಬರ ಹೇಳಿಕೆ ಮುಖ್ಯವಲ್ಲ. ಪ್ರಕರಣವನ್ನು ಕಾನೂನುಬದ್ಧವಾಗಿ ತನಿಖೆ ಮಾಡುತ್ತೇವೆ. ಯಾರು ಏನು ಹೇಳಿಕೆ ನೀಡಿದ್ರೂ ನಮಗೆ ಸಂಬಂಧಪಟ್ಟಿದ್ದಲ್ಲ. ಹಲವಾರು ಸಿಡಿ, ವಿಡಿಯೋ ಹಾಗೂ ಆಡಿಯೋ ಬಂದಿದೆ. ಎಲ್ಲವನ್ನೂ ವೈಜ್ಞಾನಿಕವಾಗಿ ತನಿಖೆಗೆ ಒಳಪಡಿಸಿದ್ದೇವೆ. ಒಟ್ಟಾರೆ ಕೇಸ್‌ನ ತನಿಖೆ ಯಾವುದೇ ಪ್ರಭಾವಕ್ಕೆ ಒಳಗಾಗಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
ಮೇಟಿ ಪ್ರಕರಣದಲ್ಲಿ ಕಾಂಗ್ರೆಸ್‌ನವರು ಹೇಗೆ ನಡ್ಕೊಂಡ್ರು? ಹೀಗಾಗಿ ಅವರ ಹೇಳಿಕೆಗೆ ನಾನು ಮಹತ್ವ ನೀಡುವುದಿಲ್ಲ. ಪ್ರಕರಣವನ್ನು ಯಾವುದೇ ಪ್ರಭಾವಕ್ಕೆ ಒಳಗಾಗದೆ ಸೂಕ್ತವಾಗಿ ನಡೆಸಲಾಗುವುದು ಎಂದು ಮಂಗಳೂರಿನಲ್ಲಿ ಇಂದು (ಮಾರ್ಚ್ 28) ಬೊಮ್ಮಾಯಿ ಮಾತನಾಡಿದ್ದಾರೆ.
ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಬೆಂಬಲಿಗರು ಡಿ.ಕೆ. ಶಿವಕುಮಾರ್ ವಿರುದ್ಧ ನಡೆಸಿದ ಪ್ರತಿಭಟನೆಯ ಬಗ್ಗೆ ಬೊಮ್ಮಾಯಿ ಮಾತನಾಡಿದ್ದಾರೆ. ಡಿ.ಕೆ. ಶಿವಕುಮಾರ್‌ಗೆ ಚಪ್ಪಲಿ ಹಾರ ಎಸೆದಿಲ್ಲ. ಹಿಂಬದಿಯಿದ್ದ ಕೊನೆಯ ಭಾಗದ ವಾಹನಕ್ಕೆ ಎಸೆದಿರಬಹುದು. ಈ ಬಗ್ಗೆ ಈಗಾಗಲೇ ಬೆಳಗಾವಿ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ. ಯಾವುದೇ ಸಣ್ಣ ಅಹಿತಕರ ಘಟನೆ ಕೂಡ ನಡೆಯಬಾರದು. ಸೂಕ್ತ ಭದ್ರತೆ ನೀಡಲು ಹೇಳಿದ್ದೇನೆ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಡಿ.ಕೆ. ಶಿವಕುಮಾರ್ ಮುತ್ತಿಗೆಗೆ ಮೊದಲೇ ಯೋಜನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಭೇಟಿ ನೀಡಲಿರುವ ವಿಚಾರ ತಿಳಿದು ಮುತ್ತಿಗೆ ಹಾಕಲು ಮೊದಲೇ ಪ್ಲ್ಯಾನ್ ಮಾಡಿಕೊಳ್ಳಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮುತ್ತಿಗೆ ಹಾಕಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಂಬಲಿಗರ ಪ್ಲ್ಯಾನ್ ಆಗಿತ್ತು. 2 ತಂಡಗಳಾಗಿ ಮುತ್ತಿಗೆ ಹಾಕಿ ಗಲಾಟೆ ಮಾಡಲು ರಮೇಶ್ ಬೆಂಬಲಿಗರು ಪ್ಲ್ಯಾನ್ ಮಾಡಿಕೊಂಡು ಬಂದಿದ್ದರು.
35ಕ್ಕೂ ಹೆಚ್ಚು ಕ್ರೂಸರ್ ವಾಹನಗಳಲ್ಲಿ ಬಂದಿದ್ದ ಬೆಂಬಲಿಗರು, ಬೆಳಗಾವಿಯಿಂದ 15ಕ್ಕೂ ಹೆಚ್ಚು ಕಾರುಗಳಲ್ಲಿ ಬಂದಿದ್ದರು. 1 ಟೀಮ್ ಏರ್ಪೋರ್ಟ್ ಬಳಿ ಮುತ್ತಿಗೆ ಹಾಕಲು ಪ್ಲ್ಯಾನ್ ಮಾಡಿಕೊಂಡಿತ್ತು. ಇನ್ನೊಂದು ಟೀಮ್ ರಸ್ತೆಯಲ್ಲಿ ಘೇರಾವ್ ಹಾಕಲು ಯೋಜನೆ ಹಾಕಿತ್ತು.
ಬೆಳಗಾವಿ-ಬಾಗಲಕೋಟೆ ರಸ್ತೆಯಲ್ಲಿ ಮುತ್ತಿಗೆ ಹಾಕಲು ಯೋಜನೆ ಇತ್ತು. ಅದರಂತೆ ಮೊದಲ ಟೀಮ್ನಿಂದ ಚಪ್ಪಲಿ ತೂರಿ ಗಲಾಟೆ ನಡೆದಿದೆ. ಬಳಿಕ ಮುಂದೆ ಬಂದು ಡಿ.ಕೆ. ಶಿವಕುಮಾರ್ ಕಾರಿಗೆ ಮುತ್ತಿಗೆ ಹಾಕಿ ತಡೆ ಒಡ್ಡಲಾಗಿದೆ.
ಸಿಡಿ ಕೇಸ್: ವಿಚಾರಣೆಗೆ ಹಾಜರಾಗಲು ರಮೇಶ್ ಜಾರಕಿಹೊಳಿಗೆ ಪೊಲೀಸರಿಂದ ನೋಟಿಸ್ ಜಾರಿ
Published On - 9:28 pm, Sun, 28 March 21