ಇನ್ನಿಬ್ಬರಿಗೂ ನೊಟೀಸ್
ಸಿಡಿ ಪ್ರಕರಣದ ಸೂತ್ರಧಾರ ಎನ್ನಲಾಗಿರುವ ನರೇಶ್ಗೌಡನ ಹೆಂಡತಿ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಮತ್ತೋರ್ವ ವ್ಯಕ್ತಿ ಚೇತನ್ ಎಂಬಾತನಿಗೂ ಎಸ್ಐಟಿಯಿಂದ ನೋಟಿಸ್ ಜಾರಿ ಮಾಡಲಾಗಿದೆ. ನಾಳೆ ಬೆಳಗ್ಗೆ 10ಕ್ಕೆ ಆಡುಗೋಡಿ ಟೆಕ್ನಿಕಲ್ ವಿಂಗ್ಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿದೆ.
ನಾಳೆ ಯುವತಿ ಹೇಳಿಕೆ ಸಾಧ್ಯತೆ
ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಸುದ್ದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಯುವತಿಯೂ ನಾಳೆ ನಗರಕ್ಕೆ ಬರುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಈ ಹಿಂದೆ ಯುವತಿ ಬಿಡುಗಡೆ ಮಾಡಿದ್ದ ಸಿಡಿಯಲ್ಲಿ ‘ನೇರವಾಗಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡುವೆ’ ಎಂದು ಯುವತಿ ಹೇಳಿದ್ದರು. ಯುವತಿ ಪರ ಪೊಲೀಸರಿಗೆ ದೂರು ಸಲ್ಲಿಸಿದ್ದ ಬೆಂಗಳೂರಿನ ವಕೀಲ ಜಗದೀಶ್ ಸಹಕಾರ ನಗರದ ತಮ್ಮ ಕಚೇರಿಯಲ್ಲಿ ಆಪ್ತ ವಕೀಲರ ಸಭೆ ನಡೆಸಿದರು. ನಾಳೆ ಬೆಳಿಗ್ಗೆ 11.30ರ ಬಳಿಕ ಯುವತಿ ನಗರಕ್ಕೆ ಬರಬಹುದು ಎನ್ನಲಾಗುತ್ತಿದೆ. ನಾಳೆ ಬೆಳಿಗ್ಗೆ ಏನೆಲ್ಲಾ ಬೆಳವಣಿಗೆ ಆಗಲಿದೆ ಎಂಬುದನ್ನು ಗಮನಿಸಿದ ನಂತರ ಯುವತಿಯನ್ನು ಕರೆತರಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: ಅಂದುಕೊಂಡಂತಾದ್ರೆ ನಾಳೆ ಯುವತಿ ನ್ಯಾಯಾಲಯದ ಮುಂದೆ ಹಾಜರಾಗುತ್ತಾಳೆ -ವಕೀಲ ಜಗದೀಶ್