ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಸಹಯೋಗದಲ್ಲಿ ರಾಜ್ಯಮಟ್ಟದ ಹಿರಿಯರ ಕುಸ್ತಿ ಆರಂಭ

ಸಾಮಾನ್ಯವಾಗಿ ಕುಸ್ತಿ ಆಟದಲ್ಲಿ 30 ವರ್ಷಕ್ಕೆ ಕುಸ್ತಿಪಟುಗಳ ಕ್ರೀಡಾ ಜೀವ‌ನ‌ ಮುಗಿದು ಹೋಗುತ್ತಿತ್ತು. ಕುಸ್ತಿ ಆಡಲು ಶಕ್ತಿ ಇದ್ದರು ಅಂತವರಿಗೆ ಅವಕಾಶ ಸಿಗುತ್ತಿರಲಿಲ್ಲ. ಆದರೆ ದೇಶದಲ್ಲೆ ಇದೀಗಾ ಮೊದಲ ಮಾಸ್ಟರ್ ಕುಸ್ತಿಗಳ ಚಾಂಪಿಯನ್ ಆಯ್ಕೆ ಪ್ರಾರಂಭವಾಗಿದ್ದು, ಇದಕ್ಕಾಗಿ‌ ಮೂವತ್ತು ವರ್ಷ ಮೇಲ್ಪಟ್ಟವರ ರಾಜ್ಯಮಟ್ಟದ ಕುಸ್ತಿ ಪಂದ್ಯ ಆಯೋಜಿಸಲಾಗಿದೆ.

ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಸಹಯೋಗದಲ್ಲಿ ರಾಜ್ಯಮಟ್ಟದ ಹಿರಿಯರ ಕುಸ್ತಿ ಆರಂಭ
ರಾಜ್ಯಮಟ್ಟದ ಹಿರಿಯರ ಕುಸ್ತಿಗೆ ಮೈಸೂರು‌ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಅವರಿಂದ ಚಾಲನೆ
Follow us
preethi shettigar
| Updated By: ganapathi bhat

Updated on: Mar 28, 2021 | 9:54 PM

ಮೈಸೂರು: ಪ್ರಾಚೀನ ಕ್ರೀಡೆಗಳಲ್ಲೊಂದು ಎನಿಸಿಕೊಂಡಿರುವ ಕುಸ್ತಿಗೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಮತ್ತು ವಿಶೇಷತೆ ಇದೆ. ಇಂತಹ ಕ್ರೀಡೆಗೆ ವಯೋಮಿತಿ ನಿಗದಿಯಾಗಿರುವುದರಿಂದ ವಯಸ್ಸಾದ ಮೇಲೆ ಕುಸ್ತಿ ಆಡಿ ಸಾಧನೆ ಮಾಡುತ್ತೇನೆ ಎಂದುಕೊಂಡಿದ್ದರೆ ಅದು ಅಸಾಧ್ಯವಾದದ್ದು ಎನ್ನುವ ಮಾತು ಈ ಹಿಂದೆ ಇತ್ತು. ಆದರೆ ಇದೀಗ ಕುಸ್ತಿಯಲ್ಲಿ ಹಿರಿಯರಿಗೂ ಅವಕಾಶ ಸಿಕ್ಕಿದ್ದು, ತಮ್ಮ ವಯಸ್ಸನ್ನು ಮರೆತು ಅಖಾಡದಲ್ಲಿ ಕುಸ್ತಿಪಟುಗಳು ಸೆಣೆಸಾಡಿ ಸೈ ಎನಿಸಿಕೊಂಡಿದ್ದಾರೆ.

ಮದಗಜಗಳ ರೀತಿ ಸೆಣೆಸಾಡುತ್ತಾ, ಒಬ್ಬರನ್ನು ಮತ್ತೊಬ್ಬರು ಕೆಡವಿ ಕೇಳಗೆ ಹಾಕಿ, ಶಕ್ತಿ ಪ್ರದರ್ಶನ ಮಾಡುತ್ತಾ ತೊಡೆತಟ್ಟಿ ನಿಲ್ಲುವುದು ನಿಜಕ್ಕೂ ಕುಸ್ತಿಯ ಪ್ರಮುಖ ಆಕರ್ಷಣೆ. ಮೈಸೂರು ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ಕೂಡ ಇಂತಹದ್ದೇ ವಾತವರಣ ಸೃಷ್ಟಿಯಾಗಿದ್ದು, ಕ್ರೀಡಾಪಟುಗಳು ಅತ್ಯಂತ ಉತ್ಸಾಹದಿಂದ ಈ ಕುಸ್ತಿಯಲ್ಲಿ ಭಾಗವಹಿಸಿದ್ದಾರೆ.

ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ಪ್ರಾರಂಭವಾದ ರಾಜ್ಯಮಟ್ಟದ ಹಿರಿಯರ ಕುಸ್ತಿಗೆ ಮೈಸೂರು‌ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಮಾರ್ಚ್ 27ರಂದು ಚಾಲನೆ‌ ನೀಡಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ನೂರೈವತ್ತಕ್ಕೂ ಹೆಚ್ಚು ಕುಸ್ತಿಪಟುಗಳು ಇಲ್ಲಿ ಆಗಮಿಸಿ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ.

wrestling

ಕುಸ್ತಿಪಟುಗಳು ಆಟದಲ್ಲಿ ತಲ್ಲೀನರಾಗಿರುವ ದೃಶ್ಯ

ಸಾಮಾನ್ಯವಾಗಿ ಕುಸ್ತಿ ಆಟದಲ್ಲಿ 30 ವರ್ಷಕ್ಕೆ ಕುಸ್ತಿಪಟುಗಳ ಕ್ರೀಡಾ ಜೀವ‌ನ‌ ಮುಗಿದು ಹೋಗುತ್ತಿತ್ತು. ಕುಸ್ತಿ ಆಡಲು ಶಕ್ತಿ ಇದ್ದರು ಅಂತವರಿಗೆ ಅವಕಾಶ ಸಿಗುತ್ತಿರಲಿಲ್ಲ. ಆದರೆ ದೇಶದಲ್ಲೆ ಇದೀಗಾ ಮೊದಲ ಮಾಸ್ಟರ್ ಕುಸ್ತಿಗಳ ಚಾಂಪಿಯನ್ ಆಯ್ಕೆ ಪ್ರಾರಂಭವಾಗಿದ್ದು, ಇದಕ್ಕಾಗಿ‌ ಮೂವತ್ತು ವರ್ಷ ಮೇಲ್ಪಟ್ಟವರ ರಾಜ್ಯಮಟ್ಟದ ಕುಸ್ತಿ ಪಂದ್ಯ ಆಯೋಜಿಸಲಾಗಿದೆ.

ಸದ್ಯ ಇಲ್ಲಿ ಗೆದ್ದ ಕುಸ್ತಿಪಟುಗಳನ್ನು ರಾಜ್ಯ ಕುಸ್ತಿ ಚಾಂಪಿಯನ್ ಆಗಿ ಆಯ್ಕೆ ಮಾಡಿ ನಂತರ ಅವರನ್ನು ಅಂತರಾಜ್ಯ ಚಾಂಪಿಯನ್ ಶಿಫ್​ಗೆ ಕಳುಹಿಸಲಾಗುತ್ತದೆ. ಇದು ದೇಶದಲ್ಲೇ ಮೊದಲ ಮಾಸ್ಟರ್ ಕುಸ್ತಿ ಚಾಂಪಿಯನ್ ಎಂಬ ಹೆಗ್ಗಳಿಕೆಗೂ ಕೂಡ ಪಾತ್ರವಾಗಿದೆ.

wrestling

ಪ್ರಶಸ್ತಿಗಳ ಚಿತ್ರಣ

ಸದ್ಯ 30 ರಿಂದ 40 ವಯಸ್ಸಿನ ವರಗೆಗಿನ‌ ವಯೋಮಿತಿ, 40 ರಿಂದ 50 ವಯೋಮಿತಿ, 50 ರಿಂದ 60 ವಯಸ್ಸಿನ‌ ವಯೋಮಿತಿಯವರಿಗೆ ಈ ಕುಸ್ತಿ ನಡೆಸಲಾಗುತ್ತಿದೆ. ಜೊತೆಗೆ 58 ರಿಂದ 97 ಕೆ.ಜಿ. ತೂಕದವರೆಗೆ ವಿಂಗಡನೆ ಮಾಡಿ ಇದನ್ನು ನಡೆಸಲಾಗುತ್ತಿದೆ.‌ ಸದ್ಯ ರಾಜ್ಯದ ಮೂಲೆ‌ ಮೂಲೆಗಳಿಂದ ಕುಸ್ತಿಪಟುಗಳು ಆಗಮಿಸಿ ಕುಸ್ತಿ ಅಖಾಡದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ.

wrestling

ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಅಡಿಯಲ್ಲಿ ಕುಸ್ತಿ ಕ್ರೀಡೆ ಆರಂಭ

ಒಟ್ಟಾರೆ ಮೈಯಲ್ಲಿ ಕುಸ್ತಿ ಆಡುವ ಶಕ್ತಿ ಇದ್ದರೂ 30 ವರ್ಷಕ್ಕೆ ಕುಸ್ತಿ ಪಟುಗಳ ಕ್ರೀಡಾ ಜೀವನ ಕೊನೆಯಾಗುತ್ತಿತ್ತು. ಆದರೆ ಇದೀಗಾ ನಡೆಯುತ್ತಿರುವ ಮಾಸ್ಟರ್ ಕುಸ್ತಿ ಚಾಂಪಿಯನ್ ಶಿಫ್ ಹಿರಿಯ ಕುಸ್ತಿ ಪಟುಗಳಿಗೂ ಟಾನಿಕ್​ನಂತಾಗಿದೆ. ಸದ್ಯ ಇದನ್ನ ಇಲ್ಲಿಗೆ ಕೊನೆ ಮಾಡದೆ‌ ಮುಂದೆಯು ಇದನ್ನ ನಡೆಸಿಕೊಂಡು‌ ಹೋಗಲಿ ಎಂಬುವುದೇ ನಮ್ಮ ಆಶಯ.

ಇದನ್ನೂ ಓದಿ:

ಫೈನಲ್​ನಲ್ಲಿ ಸೋಲು: ಆತ್ಮಹತ್ಯೆಗೆ ಶರಣಾದ ದಂಗಲ್​ ಕುಸ್ತಿಪಟು ಗೀತಾ- ಬಬಿತಾ ಫೋಗಾಟ್ ಸೋದರಸಂಬಂಧಿ ರಿತಿಕಾ ಫೋಗಾಟ್

ಲೋಕಲ್​ ‘ದಂಗಲ್’ನಿಂದ ಕೊಂಚ ಬ್ರೇಕ್ ಪಡೆದು.. ಕುಸ್ತಿ ಪಂದ್ಯಾವಳಿಗೆ ಚಾಲನೆ ಕೊಟ್ಟ ಹೊನ್ನಾಳಿ ಶಾಸಕ M.P.ರೇಣುಕಾಚಾರ್ಯ

‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್