ಫೈನಲ್‌ನಲ್ಲಿ ಸೋಲು: ಆತ್ಮಹತ್ಯೆಗೆ ಶರಣಾದ ದಂಗಲ್ ಕುಸ್ತಿಪಟು ಗೀತಾ- ಬಬಿತಾ ಫೋಗಾಟ್ ಸೋದರಸಂಬಂಧಿ ರಿತಿಕಾ ಫೋಗಾಟ್
17 ವರ್ಷದ ರಿತಿಕಾ ಫೋಗಾಟ್ ಅವರು ಕುಸ್ತಿ ಪಂದ್ಯಾವಳಿಯ ಫೈನಲ್‌ನಲ್ಲಿ ಸೋತಿದ್ದರಿಂದ ಖಿನ್ನತೆಗೊಳಗಾಗಿ ಆತ್ಮಹತ್ಯೆ ದಾರಿ ಹಿಡಿದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ದೆಹಲಿ: ಚಾಂಪಿಯನ್ ಕುಸ್ತಿಪಟುಗಳಾದ ಗೀತಾ ಮತ್ತು ಬಬಿತಾ ಫೋಗಾಟ್ ಅವರ ಸೋದರಸಂಬಂಧಿ ರಿತಿಕಾ ಫೋಗಾಟ್ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹರಿಯಾಣ ಪೊಲೀಸರು ತಿಳಿಸಿದ್ದಾರೆ. 17 ವರ್ಷದ ರಿತಿಕಾ ಫೋಗಾಟ್ ಅವರು ಕುಸ್ತಿ ಪಂದ್ಯಾವಳಿಯ ಫೈನಲ್‌ನಲ್ಲಿ ಸೋತಿದ್ದರಿಂದ ಖಿನ್ನತೆಗೊಳಗಾಗಿ ಆತ್ಮಹತ್ಯೆ ದಾರಿ ಹಿಡಿದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಮಾರ್ಚ್ 12 ಮತ್ತು 14 ರ ನಡುವೆ ಭರತ್‌ಪುರದಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ರಿತಿಕಾ ಫೋಗಾಟ್ ಫೈನಲ್‌ನಲ್ಲಿ ಸೋಲನುಭವಿಸಿದ್ದರು.
ಮಾರ್ಚ್ 17 ರಂದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿ ಪೊಲೀಸರ ಪ್ರಕಾರ, ರಿತಿಕಾ ಫೋಗಾಟ್, ಚಿಕ್ಕಪ್ಪ ಮಹಾವೀರ್ ಸಿಂಗ್ ಫೋಗಟ್ ಅವರ ಮನೆಯಲ್ಲಿ ಸೋಮವಾರ ತಡರಾತ್ರಿ ಶವವಾಗಿ ಪತ್ತೆಯಾಗಿದ್ದಾರೆ. ಬಬಿತಾ ಫೋಗಾಟ್ ಅವರ ಸೋದರಸಂಬಂಧಿ ರಿತಿಕಾ ಮಾರ್ಚ್ 17 ರಂದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಅವರ ಸೋಲು ಈ ಆತ್ಮಹತ್ಯೆಗೆ ಕಾರಣ ಇರಬಹುದೆಂದು ಶಂಕಿಸಲಾಗಿದೆ.
ಆತ್ಮಹತ್ಯೆಯ ಬಗ್ಗೆ ಹೆಚ್ಚಿನ ತನಿಖೆ ಮೂಲಗಳ ಪ್ರಕಾರ ಫೈನಲ್‌ನಲ್ಲಿ ಸೋತ ಬಳಿಕ ಆಕೆ ಖಿನ್ನತೆಗೆ ಒಳಗಾಗಿದ್ದರು. ಪಂದ್ಯಾವಳಿಯಲ್ಲಿ ಆಕೆಯ ತಂದೆ ಮತ್ತು ಮಹಾವೀರ್ ಫೋಗತ್ ಇಬ್ಬರೂ ಹಾಜರಿದ್ದರು. ಕ್ರೀಡಾ ಅಕಾಡೆಮಿ ನಡೆಸುತ್ತಿರುವ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಮಹಾವೀರ್ ಫೋಗಾಟ್ ಅವರ ಬಳಿ ರಿತಿಕಾ ತರಬೇತಿ ಪಡೆದಿದ್ದರು ಎಂದು ವರದಿಯಾಗಿದೆ. ಈ ಆತ್ಮಹತ್ಯೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಚಾರ್ಖಿಯ ಉಪ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಸಿಂಗ್ ಬಿಷ್ಣೋಯ್ ದಾದ್ರಿ ತಿಳಿಸಿದರು.
ದಂಗಲ್ ಸಿನಿಮಾಕ್ಕೆ ಸ್ಫೂರ್ತಿ ರಿತಿಕಾ ಫೋಗಾಟ್, ಚಿಕ್ಕಪ್ಪ ಮಹಾವೀರ್ ಸಿಂಗ್ ಫೋಗಟ್ ಅವರ ಜೀವನ ಮತ್ತು ಹೆಣ್ಣುಮಕ್ಕಳಾದ ಗೀತಾ ಮತ್ತು ಬಬಿತಾ ಅವರು ಹೇಗೆ ತರಬೇತಿ ಪಡೆದರು ಎಂಬ ಕಥೆಯು 2016 ರ ಅಮೀರ್ ಖಾನ್ ಬ್ಲಾಕ್ಬಸ್ಟರ್ ದಂಗಲ್ ಸಿನಿಮಾಕ್ಕೆ ಸ್ಫೂರ್ತಿ ನೀಡಿತು. ಬಾಕ್ಸ್ಆಫೀಸ್ನಲ್ಲೂ ಕೂಡ ಈ ಸಿನಿಮಾ ಭಾರಿ ಸದ್ದು ಮಾಡಿತ್ತು. ಈ ಸಿನಿಮಾದ ನಂತರ ಸೋದರಿಯರಿಬ್ಬರು ದೇಶದಾದ್ಯಂತ ಅಪಾರ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ.
ಗೀತಾ ಫೋಗಾಟ್ ಅವರು 2010 ರ ಕಾಮನ್ವೆಲ್ತ್ ಕ್ರೀಡಾಕೂಟದ ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದುಕೊಟ್ಟರು. ಹಾಗೆಯೇ 2012 ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರ ಸಹೋದರಿ ಬಬಿತಾ 2010 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಗೆಲ್ಲುವುದರೊಂದಿಗೆ 2012 ರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಮತ್ತು 2014 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಸಹ ಗೆದಿದ್ದಾರೆ.