ಆರೋಗ್ಯ ಸಚಿವರು ನಿರ್ದೇಶನ ನೀಡಿ ಒಂದು ತಿಂಗಳಾದರೂ ರಾತ್ರಿ 8 ಗಂಟೆವರೆಗೆ ಕಾರ್ಯ ನಿರ್ವಹಿಸದ ನಮ್ಮ ಕ್ಲಿನಿಕ್​

|

Updated on: Sep 03, 2023 | 3:12 PM

ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು 100 ನಮ್ಮ ಕ್ಲಿನಿಕ್​ಗಳನ್ನು ರಾತ್ರಿ 8 ಗಂಟೆಯವರೆಗೆ ಕಾರ್ಯ ನಿರ್ವಹಿಸುವಂತೆ ನಿರ್ದೇಶನ ನೀಡಿದ್ದಾರೆ. ಆದರೂ, ನಿರ್ದೇಶನ ಪಾಲನೆ ಆಗುತ್ತಿಲ್ಲ. ಆದರೆ, ಕ್ಲಿನಿಕ್‌ಗಳು ರಾತ್ರಿ 8 ಗಂಟೆಯವರೆಗೆ ಕಾರ್ಯನಿರ್ವಹಿಸಲು ರಾಜ್ಯ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಬಿಬಿಎಂಪಿ ಮುಖ್ಯ ಆರೋಗ್ಯ ಕಚೇರಿ ಎಎಸ್ ಬಾಲಸುಂದರ್ ಹೇಳಿದರು.

ಆರೋಗ್ಯ ಸಚಿವರು ನಿರ್ದೇಶನ ನೀಡಿ ಒಂದು ತಿಂಗಳಾದರೂ ರಾತ್ರಿ 8 ಗಂಟೆವರೆಗೆ ಕಾರ್ಯ ನಿರ್ವಹಿಸದ ನಮ್ಮ ಕ್ಲಿನಿಕ್​
ಆರೋಗ್ಯ ಸಚಿವರು ನಿರ್ದೇಶನ ನೀಡಿದರೂ ರಾತ್ರಿ 8 ಗಂಟೆವರೆಗೆ ಕಾರ್ಯ ನಿರ್ವಹಿಸದ ನಮ್ಮ ಕ್ಲಿನಿಕ್​
Follow us on

ಬೆಂಗಳೂರು, ಸೆ.3: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅವರು 100 ‘ನಮ್ಮ ಕ್ಲಿನಿಕ್​ಗಳನ್ನು (Namma Clinic) ರಾತ್ರಿ 8 ಗಂಟೆಯವರೆಗೆ ಕಾರ್ಯ ನಿರ್ವಹಣೆ ಮಾಡುವಂತೆ ನಿರ್ದೇಶನ ನೀಡಿ ಸುಮಾರು ಒಂದು ತಿಂಗಳು ಕಳೆದರೂ ಅದು ಇನ್ನೂ ಜಾರಿಯಾಗಿಲ್ಲ.

ಈ ಬಗ್ಗೆ ಮಾತನಾಡಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆರೋಗ್ಯ ಕಚೇರಿ ಎಎಸ್ ಬಾಲಸುಂದರ್, 100 ಕ್ಲಿನಿಕ್‌ಗಳು ರಾತ್ರಿ 8 ಗಂಟೆಯವರೆಗೆ ಕಾರ್ಯನಿರ್ವಹಿಸಲು ರಾಜ್ಯ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆರೋಗ್ಯ ವ್ಯವಸ್ಥೆಯಲ್ಲಿ ಪ್ರಸ್ತುತ ಮಾನವಶಕ್ತಿಯ ಕೊರತೆಯಿಂದಾಗಿ ನಗರದ ಎಲ್ಲಾ 243 ನಮ್ಮ ಕ್ಲೀನಿಕ್​ಗಳಲ್ಲಿ ಈ ವ್ಯವಸ್ಥೆಯನ್ನು ವಿಸ್ತರಿಸಲು ಕಷ್ಟವಾಗುತ್ತದೆ ಎಂದು ಹೇಳಿದರು.

ಪ್ರಸ್ತುತ ‘ನಮ್ಮ ಕ್ಲಿನಿಕ್​ಗಳು’ ಬೆಳಿಗ್ಗೆ 9 ರಿಂದ ಸಂಜೆ 4 ರ ನಡುವೆ ಕಾರ್ಯನಿರ್ವಹಿಸುತ್ತಿವೆ ಮತ್ತು ನಗರದ ಎಲ್ಲಾ 243 ಚಿಕಿತ್ಸಾಲಯಗಳನ್ನು ರಾತ್ರಿ 8 ರವರೆಗೆ ಕಾರ್ಯನಿರ್ವಹಿಸುವಂತೆ ಮಾಡಲು ನಮಗೆ ಪ್ರಸ್ತುತ ಇರುವ ಸಿಬ್ಬಂದಿಗಿಂತ ದುಪ್ಪಟ್ಟು ಅಗತ್ಯವಿದೆ ಎಂದು ಬಾಲಸುಂದರ್ ಹೇಳಿದರು.

ಇದನ್ನೂ ಓದಿ: Namma Clinics: ಬೆಂಗಳೂರಿನ ಕೆಲ ನಮ್ಮ ಕ್ಲೀನಿಕ್​​ಗಳ ಸಮಯ ಬದಲಿಸಲು ಚಿಂತನೆ: ದಿನೇಶ್ ಗುಂಡೂರಾವ್

ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ. ಕೆವಿ ತ್ರಿಲೋಕ್ ಚಂದ್ರ ಅವರು ಹೊಸ ಸಮಯವನ್ನು ಜಾರಿಗೊಳಿಸಲು ಯಾವುದೇ ಮಾತುಕತೆ ನಡೆದಿಲ್ಲ ಎಂದು ಹೇಳಿದರು. ಆಗಸ್ಟ್ 4 ರಂದು ದೆಹಲಿಯಲ್ಲಿ ಎಎಪಿ ನೇತೃತ್ವದ ಸರ್ಕಾರದ ‘ಮೊಹಲ್ಲಾ ಕ್ಲಿನಿಕ್’ಗೆ ಭೇಟಿ ನೀಡಿದ ನಂತರ ಆರೋಗ್ಯ ಸಚಿವರಿಂದ ಈ ನಿರ್ಧಾರ ಹೊರಬಿದ್ದಿದೆ ಎಂದರು.

ಮರುದಿನ ‘ನಮ್ಮ ಕ್ಲಿನಿಕ್’ಗಳ ಸಮಯವನ್ನು ವಿಸ್ತರಿಸುವ ಕುರಿತು ಅವರು ಘೋಷಣೆ ಮಾಡಿದ್ದರು. ‘ಮೊಹಲ್ಲಾ ಕ್ಲಿನಿಕ್’ಗಳನ್ನು ‘ಓವರ್ಹೈಪ್ಡ್’ ಎಂದೂ ಕರೆದಿದ್ದರು. 2015-16 ರಲ್ಲಿ ಪ್ರಾರಂಭವಾದ ‘ಮೊಹಲ್ಲಾ ಕ್ಲಿನಿಕ್’ಗಳಿಂದ ‘ನಮ್ಮ ಕ್ಲಿನಿಕ್​’ ಸ್ಫೂರ್ತಿ ಪಡೆದಿವೆ. ತಮ್ಮ ಪ್ರಕಟಣೆಯ ಸಮಯದಲ್ಲಿ ದಿನೇಶ್ ಗುಂಡೂರಾವ್ ಅವರು ಮಧ್ಯಾಹ್ನ 12 ರಿಂದ ರಾತ್ರಿ 8 ರವರೆಗೆ ಸಮಯವನ್ನು ಬದಲಾಯಿಸಲು ಶಿಫಾರಸು ಮಾಡಿದರು ಎಂದು ವಿವರಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:10 pm, Sun, 3 September 23