ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಚಿಲ್ಲರೆ ಗಲಾಟೆಗೆ ಮುಕ್ತಿ: ಯುಪಿಐ ಸ್ಕ್ಯಾನ್ ಮಾಡಿ ಟಿಕೆಟ್ ತಗೊಳ್ಳಿ
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC)ದಲ್ಲಿ ಯುಪಿಐ ಆಧಾರಿತ ಪಾವತಿಯ ಪ್ರಾಯೋಗಿಕ ಹಂತ ನಡೆಯುತ್ತಿದೆ. ಎಲ್ಲಾ KSRTC ಬಸ್‌ಗಳಲ್ಲಿಯೂ ಯುಪಿಐ ಆಧಾರಿತ ಪಾವತಿಯನ್ನು ಪರಿಚಯಿಸಲು ಸಿದ್ಧತೆ ನಡೆದಿದೆ. NWKRTC ಪ್ರಾಯೋಗಿಕ ಹಂತದಲ್ಲಿ ಎದುರಾಗುವ ಗೊಂದಲ ಸಮಸ್ಯೆಗಳನ್ನು ಬಗೆಹರಿಸಿ ಉಳಿದ ರಸ್ತೆ ಸಾರಿಗೆಗಳಲ್ಲಿ ಯುಪಿಐ ಪೇಮೆಂಟ್ ಅಳವಡಿಸಲು ಸಿದ್ಧತೆ ನಡೆದಿದೆ.
ಬೆಂಗಳೂರು, ಸೆ.03: ಪ್ರಯಾಣಿಕರಿಗೆ ಸಹಾಯವಾಗಲೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) UPI ಆಧಾರಿತ ಪಾವತಿಗಳನ್ನು ಪರಿಚಯಿಸಲು ಮುಂದಾಗಿದೆ. 5ಜಿ ಯುಗದಲ್ಲಿ ಪಾರ್ಸ್ನಲ್ಲಿ ಹಣ ಇಟ್ಟುಕೊಂಡು ಓಡಾಡುವವರ ಸಂಖ್ಯೆ ಕಡಿಮೆ. ಹೀಗಾಗಿ ಪ್ರಯಾಣಿಕರಿಗೆ ತೊಂದರೆ ಆಗಬಾರದೆಂದು ಕೆಎಸ್‌ಆರ್‌ಟಿಸಿ ಹೊಸ ಪ್ರಯೋಗಕ್ಕಿಳಿದಿದೆ. ಇನ್ಮುಂದೆ ಕರ್ನಾಟಕದ ಸರ್ಕಾರಿ ಬಸ್ಗಳಲ್ಲಿ UPI ಬಳಸಿ ಟಿಕೆಟ್ ಖರೀದಿಸಬಹುದು.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC)ದಲ್ಲಿ ಯುಪಿಐ ಆಧಾರಿತ ಪಾವತಿಯ ಪ್ರಾಯೋಗಿಕ ಹಂತ ನಡೆಯುತ್ತಿದೆ. ಪ್ರಯಾಣಿಕರು ಟಿಕೆಟ್ ಖರೀದಿಸುವಾಗ ಚಿಲ್ಲರೆ ಸಮಸ್ಯೆ ಹಾಗೂ ಹಾರ್ಡ್ ಕ್ಯಾಶ್ ಸಮಸ್ಯೆಗಳನ್ನು ಎದುರಿಸುತ್ತಾರೆ. ಹೀಗಾಗಿ ಪ್ರಯಾಣಿಕರಿಗೆ ಗೊಂದಲ ಅಥವಾ ತೊಂದರೆ-ಮುಕ್ತ ಅನುಭವ ನೀಡಲು NWKRTC ಯುಪಿಐ ಪೇಮೆಂಟ್ಗೆ ಚಾಲನೆ ಕೊಟ್ಟಿದೆ. ಇನ್ನು ಎಲ್ಲಾ KSRTC ಬಸ್‌ಗಳಲ್ಲಿಯೂ ಯುಪಿಐ ಆಧಾರಿತ ಪಾವತಿಯನ್ನು ಪರಿಚಯಿಸಲು ಸಿದ್ಧತೆ ನಡೆದಿದೆ. NWKRTC ಪ್ರಾಯೋಗಿಕ ಹಂತದಲ್ಲಿ ಎದುರಾಗುವ ಗೊಂದಲ ಸಮಸ್ಯೆಗಳನ್ನು ಬಗೆಹರಿಸಿ ಉಳಿದ ರಸ್ತೆ ಸಾರಿಗೆಗಳಲ್ಲಿ ಯುಪಿಐ ಪೇಮೆಂಟ್ ಅಳವಡಿಸಲು ಸಿದ್ಧತೆ ನಡೆದಿದೆ.
NWKRTCಯಲ್ಲಿ ಶುಕ್ರವಾರ ಪ್ರಾರಂಭಿಸಲಾದ ಪ್ರಾಯೋಗಿಕ ಚಾಲನೆಯಲ್ಲಿ, ಪ್ರಯಾಣಿಕರು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಟಿಕೆಟ್ ಹಣವನ್ನು ಪಾವತಿಸುತ್ತಿದ್ದಾರೆ. ಈ ಹಿಂದೆ ಅನೇಕ ಬಾರಿ ಅನೇಕ ಪ್ರಯಾಣಿಕರು ಬಸ್ಗಳಲ್ಲಿ ಆನ್ಲೈಲ್ ಪೇಮೆಂಟ್ ಸೇವೆ ಪರಿಚಯಿಸಲು ಬಸ್ ನಿಗಮಗಳಿಗೆ ಡಿಮ್ಯಾಂಡ್ ಮಾಡಿದ್ದರು. ಕಳಪೆ ಇಂಟರ್ನೆಟ್ ಸಂಪರ್ಕ ಮತ್ತು ಇತರ ತಾಂತ್ರಿಕ ದೋಷಗಳಿಂದ ಇದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಸದ್ಯ ಈಗ ಈ ಸಮಸ್ಯೆಗೆ ಪರಿಹಾರ ಸಿಕ್ಕಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಬರಗಾಲ..ಇತ್ತ ಮಂತ್ರಾಲಯಕ್ಕೂ ತಟ್ಟಿದ ಬಿಸಿ! ತುಂಗಭದ್ರಾ ನದಿ ಖಾಲಿ, ಪುಣ್ಯ ಸ್ನಾನವಿಲ್ಲದೇ ಭಕ್ತರು ಬೇಸರ!
ಪರ್ಸ್ನಲ್ಲಿ ಹಾರ್ಡ್ ಕ್ಯಾಶ್ ಇಲ್ಲದ ಕಾರಣ ಟಿಕೆಟ್ ಖರೀದಿಸಿಲ್ಲ ಎಂದು ಬಸ್ ಹತ್ತಿದ್ದ ಪ್ರಯಾಣಿಕರನ್ನು ರಸ್ತೆ ಮಧ್ಯೆಯೇ ಇಳಿಸಿ ಹೋದ ನಿದರ್ಶನಗಳು ಅನೇಕ. ತಳ್ಳುಗಾಡಿ, ತರಕಾರಿ ಮಾರಾಟಗಾರರು ಅಥವಾ ರಸ್ತೆಬದಿಯ ಪಾನಿ ಪುರಿ ಅಂಗಡಿಯವನ ಬಳಿಯೂ ಫೋನ್ ಪೇ, ಗೂಗಲ್ ಪೇ ಇರುತ್ತೆ. ಆದ್ರೆ ಸರ್ಕಾರಿ ಬಸ್ಗಳಲ್ಲಿ ಮಾತ್ರ ಈ ಸೌಲಭ್ಯವಿರಲಿಲ್ಲ. ಸದ್ಯ ಈಗ ಈ ಬಗ್ಗೆ ಸಾರಿಗೆ ನಿಗಮ ತಲೆ ಕೆಡಿಸಿಕೊಂಡಿದ್ದು ಪ್ರಯೋಗಿಕ ಹಂತವನ್ನು ಆರಂಭಿಸಿದೆ.
ಇನ್ನು ಈ ಬಗ್ಗೆ ಮಾತನಾಡಿದ ಕೆಎಸ್‌ಆರ್‌ಟಿಸಿ ಎಂಡಿ ಅನ್ಬು ಕುಮಾರ್, ನಾವು ಯುಪಿಐ ಆಯ್ಕೆಗಳನ್ನು ಅಧ್ಯಯನ ಮಾಡುತ್ತಿದ್ದೇವೆ. NWKRTC ಈಗಾಗಲೇ ಪ್ರಾಯೋಗಿಕ ಆಧಾರದ ಮೇಲೆ UPI ಪಾವತಿ ಆಯ್ಕೆಯನ್ನು ಪ್ರಾರಂಭಿಸಿದೆ. ಮುಂದಿನ ದಿನಗಳಲ್ಲಿ KSRTC ಯಲ್ಲೂ ಯುಪಿಐ ಪೇಮೆಂಟ್ ಪರಿಚಯಿಸುತ್ತೇವೆ ಎಂದರು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ