ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇನಲ್ಲಿ ಪೊಲೀಸರ ದಿಟ್ಟ ಕ್ರಮ ಯಶಸ್ವಿ: ಅಪಘಾತ ಸಂಖ್ಯೆ ಇಳಿಮುಖ

ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​​ವೇ (Bengaluru Mysuru Expressway) ಹೆದ್ದಾರಿಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವುದನ್ನು ತಡೆಗಟ್ಟುವುದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹಾಗೂ ಸಂಚಾರ ಪೊಲೀಸರು ಕೈಕೊಂಡಿರುವ ಹಲವಾರು ಕಟ್ಟುನಿಟ್ಟಿನ ಕ್ರಮಗಳು ವರ್ಕೌಟ್ ಆಗಿದೆ. ಪೊಲೀಸರ ಕಟ್ಟುನಿಟ್ಟಿನ ಕ್ರಮದಿಂದಾಗಿ ಅಪಘಾತಗಳು ಸಂಖ್ಯೆ ಇಳಿಮುಖವಾಗಿದೆ.

ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇನಲ್ಲಿ ಪೊಲೀಸರ ದಿಟ್ಟ ಕ್ರಮ ಯಶಸ್ವಿ: ಅಪಘಾತ ಸಂಖ್ಯೆ ಇಳಿಮುಖ
ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​​ವೇ
Follow us
ರಮೇಶ್ ಬಿ. ಜವಳಗೇರಾ
|

Updated on: Sep 03, 2023 | 4:32 PM

ಬೆಂಗಳೂರು, (ಸೆಪ್ಟೆಂಬರ್ 03): ಬೆಂಗಳೂರು-ಮೈಸೂರು ದಶಪಥ ರಸ್ತೆಯಲ್ಲಿ (Bangalore Mysore Expressway) ಅಪಘಾತಗಳ(Accidents) ಸಂಖ್ಯೆ ಹೆಚ್ಚಳವಾಗಿ ಸಾವು ನೋವುಗಳ ಸಂಖ್ಯೆ ಕೂಡ ಹೆಚ್ಚಳವಾಗಿದ್ದರಿಂದ ಪೊಲೀಸರು ಇತ್ತೀಚೆಗೆ ತೆಗೆದುಕೊಂಡ ದಿಟ್ಟ ಕ್ರಮ ಯಶಸ್ವಿಯಾಗಿದೆ. ಅಪಘಾತಗಳನ್ನ ತಡೆಗಟ್ಟಲು ಎನ್​ಹೆಚ್​ಎಐ ಹಾಗೂ ಪೊಲೀಸ್ ಇಲಾಖೆ ಹಲವು ಸುರಕ್ಷತಾ ಕ್ರಮಗಳನ್ನ ವಹಿಸಿದೆ. ಹೀಗಾಗಿ ಅಪಘಾತಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಆಗಸ್ಟ್​ನಲ್ಲಿ ಅಪಘಾತ ಸಂಖ್ಯೆ ಇಳಿಮುಖಗೊಂಡು ಒಂದಂಕಿಗೆ ತಲುಪಿದೆ.

ಮೇ ತಿಂಗಳಲ್ಲಿ 29, ಜೂನ್​-28, ಜುಲೈ- 8 ಹಾಗೂ ಕಳೆದ ತಿಂಗಳು ಆಗಸ್ಟ್​ನಲ್ಲಿ ಕೇವಲ ಆರು ಜನರು ಈ ಎಕ್ಸ್​ಪ್ರೆಸ್​ವೇ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇನ್ನು ಈ ಬಗ್ಗೆ ಇಂದು (ಸೆಪ್ಟೆಂಬರ್ 03) ಕರ್ನಾಟಕ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ಸುರಕ್ಷತೆ) ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದು, ಪೊಲೀಸ್​ ಸಿಬ್ಬಂದಿ ಕೈಗೊಂಡ ಕ್ರಮಗಳ ಬಗ್ಗೆ ಅಭಿನಂಧಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ ತಡೆಗೆ ಮತ್ತೊಂದು ಕ್ರಮ; 24 ಕಡೆಗಳಲ್ಲಿ ನಿರ್ಮಾಣವಾಗಲಿದೆ ಸ್ಕೈವಾಕ್‌

ಕಳೆದ ಮೂರ್ನಾಲ್ಕು ತಿಂಗಳಲ್ಲಿ ಅಪಘಾತಗಳಲ್ಲಿ ಸಂಭವಿಸಿದ ಸಾವಿನ ಸಂಖ್ಯೆ ಹಾಗೂ ಆಗಸ್ಟ್ ತಿಂಗಳ ಅಂಕಿಸಂಖ್ಯೆಯನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೇ ಎಕ್ಸ್‌ಪ್ರೆಸ್‌ವೇಯಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಪ್ರಯಾಣಿಕರ ಮೇಲೆ ಕಠಿಣ ಕಾನೂನು ಕ್ರಮವನ್ನು ಕೈಗೊಂಡಿರುವ ಪೊಲೀಸರಿ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಸ್ಕೈವಾಕ್‌ ನಿರ್ಮಾಣ

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಗಳ ತಡೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಇದೀಗ ರಸ್ತೆ ದಾಟುವವರಿಗೆ ಸಮಸ್ಯೆಯಾಗದಂತೆ ಮತ್ತು ರಸ್ತೆಯಲ್ಲಿ ಜನ ಅಡ್ಡದಾಟುವ ಪರಿಣಾಮ ಸಂಭವಿಸುವ ಅಪಘಾತಗಳನ್ನು ತಪ್ಪಿಸುವ ಸಲುವಾಗಿ ಮತ್ತೊಂದು ಕ್ರಮಕ್ಕೆ ಮುಂದಾಗಿದೆ. ಎಕ್ಸ್‌ಪ್ರೆಸ್‌ವೇಯಲ್ಲಿ 24 ಕಡೆಗಳಲ್ಲಿ ಪ್ರಾಧಿಕಾರವು ಸ್ಕೈವಾಕ್‌ಗಳನ್ನು ನಿರ್ಮಿಸಲಿದೆ ಎಂದು ವರದಿಯಾಗಿದೆ. ಒಂದು ವರ್ಷದೊಳಗೆ ಸ್ಕೈವಾಕ್‌ಗಳನ್ನು ನಿರ್ಮಿಸುವ ಗುರಿ ಹಾಕಿಕೊಳ್ಳಲಾಗಿದೆ. ಮಾರ್ಚ್ 2023 ರಲ್ಲಿ ಸಂಚಾರಕ್ಕೆ ಮುಕ್ತವಾದ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಗಳು ಹೆಚ್ಚಾದ ನಂತರ ಸ್ಕೈವಾಕ್‌ಗಳನ್ನು ನಿರ್ಮಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇನಲ್ಲಿ ದಿನದಿಂದ ದಿನಕ್ಕೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದರಿಂದ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ, ಹಲವು ಬಾರಿ ಪರಿಶೀಲನೆ ಮಾಡಿದ್ದು, ಕೊನೆ ವೇಗ ಮಿತಿ ಹಾಗೂ ಬೈಕ್​, ಆಟೋ, ಟ್ರ್ಯಾಕ್ಟರ್​ಗಳ ಸಂಚಾರವನ್ನು ಆಗಸ್ಟ್ 01ರಿಂದ ನಿಷೇಧಿಸಲಾಗಿತ್ತು.