Namma Metro: ನೇರಳೆ ಮಾರ್ಗದಲ್ಲಿ ಒಂದೇ ದಿನ 3.35ಲಕ್ಷ ಜನ ಸಂಚಾರ; ಜನಸಂದಣಿಯಿಂದ ರೋಸಿಹೋದ ಟೆಕ್ಕಿ

| Updated By: ವಿವೇಕ ಬಿರಾದಾರ

Updated on: Oct 10, 2023 | 10:03 AM

ನಮ್ಮ ಮೆಟ್ರೋದ ಸಂಪೂರ್ಣ ನೇರಳೆ ಮಾರ್ಗ ಚಲ್ಲಘಟ್ಟ-ವೈಟ್‌ಫೀಲ್ಡ್ (43.49ಕಿಮೀ) ಪೂರ್ಣಪ್ರಮಾಣದಲ್ಲಿ ಆರಂಭವಾಗಿರುವುದಕ್ಕೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಸೋಮವಾರದಿಂದ ಮೆಟ್ರೋ ರೈಲು ಸೇವೆ ಪ್ರಾರಂಭವಾಗಿದ್ದು, ಬೆಳಗ್ಗೆ 5 ಗಂಟೆಗೆ ಮೊದಲ ರೈಲು ವೈಟ್ ಫೀಲ್ಡ್​​ನಿಂದ ಚಲ್ಲಘಟ್ಟಕ್ಕೆ ಪ್ರಯಾಣಿಸಿತು.

Namma Metro: ನೇರಳೆ ಮಾರ್ಗದಲ್ಲಿ ಒಂದೇ ದಿನ 3.35ಲಕ್ಷ ಜನ ಸಂಚಾರ; ಜನಸಂದಣಿಯಿಂದ ರೋಸಿಹೋದ ಟೆಕ್ಕಿ
ನಮ್ಮ ಮೆಟ್ರೋ
Follow us on

ಬೆಂಗಳೂರು ಅ.10: ನಮ್ಮ ಮೆಟ್ರೋದ ಸಂಪೂರ್ಣ ನೇರಳೆ ಮಾರ್ಗ (Purple Line) ಚಲ್ಲಘಟ್ಟ-ವೈಟ್‌ಫೀಲ್ಡ್ (43.49ಕಿಮೀ) (Challaghatta-Whitefield) ಪೂರ್ಣಪ್ರಮಾಣದಲ್ಲಿ ಆರಂಭವಾಗಿರುವುದಕ್ಕೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಸೋಮವಾರದಿಂದ ಮೆಟ್ರೋ (Namma Metro) ರೈಲು ಸೇವೆ ಪ್ರಾರಂಭವಾಗಿದ್ದು, ಬೆಳಗ್ಗೆ 5 ಗಂಟೆಗೆ ಮೊದಲ ರೈಲು ವೈಟ್ ಫೀಲ್ಡ್​​ನಿಂದ ಚಲ್ಲಘಟ್ಟಕ್ಕೆ ಪ್ರಯಾಣಿಸಿತು. ಮೊದಲ ದಿನ ರಾತ್ರಿ 9 ಗಂಟೆವರೆಗೆ ಹೆಚ್ಚುವರಿ 40-50 ಸಾವಿರ ಪ್ರಯಾಣಿಕರು ಸಂಚರಿಸಿದ್ದಾರೆ.

ಸಂಜೆ ಆರು ಗಂಟೆವರೆಗೆ ನೇರಳೆ ಮಾರ್ಗದಲ್ಲಿ ಸೋಮವಾರ 3.35ಲಕ್ಷ ಜನ ಸಂಚರಿಸಿದ್ದು, ಎಂದಿಗಿಂತ 25 ಸಾವಿರ ಹೆಚ್ಚಿನ ಜನರು ಪ್ರಯಾಣಿಸಿದ್ದಾರೆ. ಸೋಮವಾರ ರಾತ್ರಿ 9 ಗಂಟೆವರೆಗೆ ನೇರಳೆ ಮಾರ್ಗದಲ್ಲಿ 2,89,105 ಹಾಗೂ ಹಸಿರು ಮಾರ್ಗದಲ್ಲಿ 2,18,211 ಸೇರಿ 5,07,316 ಜನ ಪ್ರಯಾಣಿಸಿದ್ದಾರೆ. ರೀಚ್1ಇ ಅಂದರೆ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ ವರೆಗೆ 54,428 ಪ್ರಯಾಣಿಕರು ಸಂಚರಿಸಿದ್ದಾರೆ.

ಇಲ್ಲಿ ಸಾಮಾನ್ಯ ನಿತ್ಯ 25-30 ಸಾವಿರ ಪ್ರಯಾಣಿಕರು ಸಂಚರಿಸುತ್ತಿದ್ದರು. ಸಹಜವಾಗಿ ಮೆಟ್ರೋದಲ್ಲಿ ಪ್ರತಿದಿನ 6.30ಲಕ್ಷ ಜನ ಸಂಚರಿಸುತ್ತಿದ್ದು, ಸೋಮವಾರ ಅಂದಾಜು 6.15 ಲಕ್ಷ ಜನ ಸಂಚರಿಸಿದ್ದಾರೆ ಮುಂದಿನ ವಾರದ ಹೊತ್ತಿಗೆ ಪ್ರಯಾಣಿಕರ ಸಂಖ್ಯೆ ನಿಮಿಷಕ್ಕೆ ಒಂದು ಲಕ್ಷ ಮೀರುವ ನಿರೀಕ್ಷೆಯಿದ್ದು, ವಾರಾಂತ್ಯದಲ್ಲಿ ಮತ್ತಷ್ಟು ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸಲಿದ್ದಾರೆ ಎಂದು ಎಂದು ಬಿಎಂ ಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ತಿಳಿಸಿದ್ದಾರೆ.

ಇದನ್ನೂ ಓದಿ: ಉದ್ಘಾಟನಾ ಕಾರ್ಯಕ್ರಮವಿಲ್ಲದೇ ಚಲ್ಲಘಟ್ಟ-ವೈಟ್‌ಫೀಲ್ಡ್‌ ನಮ್ಮ ಮೆಟ್ರೋ ಆರಂಭ: ಇಲ್ಲಿದೆ ವೇಳಾಪಟ್ಟಿ

ಭಾನುವಾರದವರೆಗೆ ಕೆಂಗೇರಿಯಿಂದ ಬೈಯಪ್ಪನಹಳ್ಳಿ ಮತ್ತು ಕೆಆರ್​ಪುರದಿಂದ ವೈಟ್‌ಫೀಲ್ಡ್ ವರೆಗೆ ನೇರಳೆ ಮಾರ್ಗದಲ್ಲಿ ಮೆಟ್ರೊ ರೈಲು ಓಡಿಸಲಾಗಿತ್ತು. ಕೆಆರ್​ಪುರಗೆ ಹೋಗುವ ಮತ್ತು ಮುಂದೆ ವೈಟ್​​ಫೀಲ್ಡ್​​ಗೆ ಹೋಗುವ ಪ್ರಯಾಣಿಕರು ಬೈಯಪ್ಪನಹಳ್ಳಿಯಲ್ಲಿ ಇಳಿದುಕೊಂಡು ಬಸ್​​, ಕ್ಯಾಬ್​ ಅಥವಾ ಇನ್ನಿತರ ಸಾರಿಗೆ ವ್ಯವಸ್ತೆ ಮೂಲಕ ಹೋಗುತ್ತಿದ್ದರು. ಇದರಿಂದ ಜನರು ಹೆಣಗಾಡುತ್ತಿದ್ದರು. ನಾಲ್ಕು ಕಿಮೀ ಪ್ರಯಾಣಿಸಲು 20-30 ನಿಮಿಷ ಸಮಯ ಬೇಕಾಗಿತ್ತು.

ಈ ಬಗ್ಗೆ ಪ್ರಯಾಣಿಕ ತರುಣಿಮಾ ವರ್ಮಾ ಎಂಬುವರು ಮಾತನಾಡಿ ” ಸಂಪೂರ್ಣ ನೇರಳೆ ಮಾರ್ಗವನ್ನು ತೆರೆಯುವುದರಿಂದ ದೈನಂದಿನ ಪ್ರಯಾಣಿಕರಿಗೆ ದೊಡ್ಡ ರೀತಿಯಲ್ಲಿ ಸಹಾಯವಾಗುತ್ತದೆ. ನಾನು ಆಗಾಗ್ಗೆ ನಗರ ಹೃದಯಭಾಗಕ್ಕೆ ಪ್ರಯಾಣಿಸುತ್ತೇನೆ. ಈ ವೇಳೆ ರಸ್ತೆಯ ಮೂಲಕ ಪ್ರಯಾಣಿಸುವುದು ಹೆಚ್ಚು ಆಯಾಸ ಮತ್ತು ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಇದೀಗ ಈ ಸಂಪರ್ಕದಿಂದ ನಮಗೆ ಅನುಕೂಲವಾಗಿದೆ ಎಂದರು.

ಮಾನಸಾ ಎಂಬುವರು ಮಾತನಾಡಿ ” ಹಲಸೂರಿನಿಂದ ಬೆನ್ನಿಗಾನಹಳ್ಳಿಗೆ ಪ್ರಯಾಣಿಸಲು ಆಟೊದಲ್ಲಿ 240 ರೂ. ವ್ಯಯಿಸುತ್ತಿದ್ದೆ. ಕೆ.ಆರ್.ಪುರ-ಬೈಯಪ್ಪನಹಳ್ಳಿ ಮಾರ್ಗ ಆರಂಭವಾದ ನಂತರ ಬೆನ್ನಿಗಾನಹಳ್ಳಿಯಿಂದ ಹಲಸೂರಿಗೆ ದಿನಕ್ಕೆ 34 ರೂ.ಗೆ ಪ್ರಯಾಣಿಸಬಹುದು. ಉಳಿತಾಯದ ಜತೆಗೆ ಪ್ರಯಾಣ, ಸಂಚಾರ ದಟ್ಟಣೆ ಮತ್ತು ಮಾಲಿನ್ಯವನ್ನು ತಪ್ಪಿಸಬಹುದು ಎಂದರು.

ಕೂರಲು ಸಹಿತ ಸಾಧ್ಯವಾಗದಷ್ಟು ಜಸಂದಣಿ ಇದೆ

 

ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ವಿಭಾಗದಲ್ಲಿ ಜನಸಂದಣಿಯ ಸಮಯದಲ್ಲಿ ರೈಲುಗಳು ತುಂಬಿ ತುಳುಕುತ್ತಿದ್ದವು. “ನಾನು ಸಾಮಾನ್ಯವಾಗಿ ಕೆಆರ್​ಪುರ ಮತ್ತು ವೈಟ್‌ಫೀಲ್ಡ್ ನಡುವೆ ಪ್ರಯಾಣಿಸುತ್ತೇನೆ. ಆವಾಗ ನನಗೆ ಕೂರಲು ಸೀಟ್​​ ಸಿಗುತ್ತಿತ್ತು. ಆದರೆ ಮೊದಲ ಬಾರಿಗೆ ಸೋಮವಾರ ಸಂಜೆ ನಾನು ನಿಂತುಕೊಂಡು ಪ್ರಯಾಣಿಸಿದ್ದೇನೆ. ಇದು ಮುಂಬರುವ ದಿನಗಳಲ್ಲಿ ವೈಟ್‌ಫೀಲ್ಡ್ ಲೈನ್‌ಗೆ ಹೆಚ್ಚಿನ ಪ್ರೋತ್ಸಾಹದ ಸಂಕೇತವಾಗಬಹುದು.” ಎಂದು ಟೆಕ್ಕಿ ವಿಘ್ನೇಶ್ ಎಸ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:02 am, Tue, 10 October 23