ಬೆಂಗಳೂರು: ಹೊಸ ಶಿಕ್ಷಣ ನೀತಿ ಜಾರಿಯಾದರೆ ದೊಡ್ಡ ಅಪಾಯ ಎದುರಾಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ (National Education Policy) ಬಡ ಮಕ್ಕಳಿಗೆ ಮಾರಕವಾಗಿದ್ದು, ಬಡವರನ್ನು ಬಡವರನ್ನಾಗಿಯೇ ಉಳಿಸುತ್ತದೆ ಎಂದು ಕೆಪಿಸಿಸಿ ಶಿಕ್ಷಣ ಸಮಿತಿ ಅಧ್ಯಕ್ಷ ಪ್ರೊ.ಕೆ.ಇ. ರಾಧಾಕೃಷ್ಣ ಮತ್ತು ವಿ.ಟಿ.ಯು ನಿವೃತ್ತ ಕುಲಪತಿ ಡಾ. ಮಹೇಶಪ್ಪ ಜಂಟಿ ಸುದ್ದಿಗೋಷ್ಟಿ ನಡೆಸಿ ಕೇಂದ್ರ ಸರ್ಕಾರ ಜಾರಿಗೊಳಿಸಹೊರಟಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರೋಧ ವ್ಯಕ್ತಪಡಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಾನು ವಿರೋಧಿಸುತ್ತೇನೆ. ಶಿಕ್ಷಣ ತಜ್ಞರು, ನ್ಯಾಯಾಧೀಶರು ಕೂಡ ಹೊಸ ನೀತಿಯನ್ನು ವಿರೋಧಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಕೇವಲ ನಾಮಕರಣ ಸೇನಾಪತಿ ಮಾತ್ರ. ಘೋಷಣೆ ಮಾಡುತ್ತಾರೆಯೇ ವಿನಃ ಅದರ ಜಾರಿಯ ಬಗ್ಗೆ ಯೋಚನೆ ಮಾಡುವುದಿಲ್ಲ ಎಂದು ಸಹ ಪ್ರೊ.ರಾಧಾಕೃಷ್ಣ ಟೀಕಿಸಿದರು.
ಪ್ರಸಕ್ತ ವರ್ಷದಿಂದಲೇ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ನಿರ್ಧಾರ; ವಿಷಯವಾರು ತಜ್ಞರ ನೇಮಕ
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಸಕ್ತ ವರ್ಷದಿಂದಲೇ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಉದ್ದೇಶದಿಂದ ವಿಷಯವಾರು ತಜ್ಞರ ಸಮಿತಿಗಳನ್ನು ರಚಿಸಲಾಗಿದೆ ಎಂದು ಈ ಹಿಂದೆ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದರು. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದ ಅವರು, ಈ ಎಲ್ಲ ಸಮಿತಿಗಳು ಜೂನ್ 30ರೊಳಗೆ ವರದಿಗಳನ್ನು ಸರಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ ಎಂದಿದ್ದರು.
ವಿಷಯವಾರು ತಜ್ಞರ ಸಮಿತಿಯ ಮುಖ್ಯಸ್ಥರ ವಿವರ ಹೀಗಿದೆ:
ಸಾಮಾಜಿಕ ವಿಜ್ಞಾನ:
ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ (ಅಧ್ಯಕ್ಷರು), ಪ್ರೊ.ಬಿ.ಪಿ.ವೀರಭದ್ರಪ್ಪ, ಪ್ರೊ.ಬಿ.ಕೆ.ತುಳಸೀಮಾಲಾ, ಪ್ರೊ.ಎನ್.ಆರ್.ಭಾನುಮೂರ್ತಿ, ಪ್ರೊ.ಹರೀಶ್ ರಾಮಸ್ವಾಮಿ, ಪ್ರೊ.ಜಿ.ಸರ್ವಮಂಗಳ, ಪ್ರೊ.ವಿ.ಎ.ಅಮಿನಾಭಾವಿ, ಪ್ರೊ.ಎ.ರಾಮೇಗೌಡ, ಪ್ರೊ.ಸಂಗೀತಾ ಮನೆ, ಪ್ರೊ.ಎನ್.ನರಸಿಂಹಮೂರ್ತಿ, ಪ್ರೊ.ನಿರಂಜನ, ಪ್ರೊ.ಆರ್.ಆನ್. ಮನಗೊಳಿ, ಪ್ರೊ.ಗೋಪಾಲಕೃಷ್ಣ ಜೋಶಿ ಸದಸ್ಯರು.
ಭಾಷೆ ಮತ್ತು ಭಾಷಾಶಾಸ್ತ್ರ:
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಬಿ.ನಾಯಕ್ (ಅಧ್ಯಕ್ಷರು), ಪ್ರೊ.ಎಸ್.ಸಿ.ರಮೇಶ್, ಪ್ರೊ.ಕೆ.ಇ,ದೇವನಾಥನ್, ಪ್ರೊ.ಲಿಂಗರಾಜ ಗಾಂಧಿ, ಪ್ರೊ.ರಚೇಲ್ ಕುರಿಯನ್, ಪ್ರೊ.ಗಂಗಾಧರಯ್ಯ, ಪ್ರೊ.ಗೋಪಾಲಕೃಷ್ಣ ಜೋಶಿ ಸದಸ್ಯರು.
ಲಲಿತ ಕಲೆ ಮತ್ತು ದೃಶ್ಯ ಮಾಧ್ಯಮ:
ಸಂಗೀತ ಮತ್ತು ಕಲಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ (ಅಧ್ಯಕ್ಷರು), ಪ್ರೊ.ಜಯಕುಮಾರ್ ರೆಡ್ಡಿ, ಪ್ರೊ.ಎಸ್.ಎನ್.ಸುಶೀಲ, ಪ್ರೊ.ಕೆ.ರಾಮಕೃಷ್ಣಯ್ಯ, ಪ್ರೊ.ಗೋಪಾಲಕೃಷ್ಣ ಜೋಶಿ ಸದಸ್ಯರು.
ವಿಜ್ಞಾನ ಮತ್ತು ಗಣಿತಶಾಸ್ತ್ರ:
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ (ಅಧ್ಯಕ್ಷರು), ಪ್ರೊ.ಟಿ.ಡಿ.ಕೆಂಪರಾಜು, ಪ್ರೊ.ಎಸ್.ವಿ.ಹಲಸೆ, ಪ್ರೊ.ಸಿದ್ದು ಪಿ.ಹಲಗೂರು, ಪ್ರೊ..ಎಸ್.ಎಂ.ಶಿವಪ್ರಸಾದ್, ಪ್ರೊ.ಶ್ರೀಧರ್, ಪ್ರೊ.ಮಂಜುನಾಥ ಪಟ್ಟಾಭಿ, ಪ್ರೊ.ಯು.ಎಸ್.ಮಹಾಬಲೇಶ್ವರ್, ಪ್ರೊ.ಪಿ.ಎಂ.ಪಾಟೀಲ್, ಪ್ರೊ.ಪರಮೇಶ್ವರ್ ವಿ.ಪಂಡಿತ್, ಪ್ರೊ.ಗೋಪಾಲಕೃಷ್ಣ ಜೋಶಿ (ಸದಸ್ಯರು).
ರಾಸಾಯನಿಕ ಮತ್ತು ಜೀವವಿಜ್ಞಾನ ಶಾಸ್ತ್ರ:
ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಬಿ.ಗುಡಸಿ (ಅಧ್ಯಕ್ಷರು), ಪ್ರೊ.ಎಲ್.ಗೋಮತಿ ದೇವಿ, ಪ್ರೊ.ದಯಾನಂದ ಅಗಸರ್, ಪ್ರೊ.ಜಿ.ಆರ್.ನಾಯಕ್, ಪ್ರೊ.ವಿ.ಆರ್.ದೇವರಾಜ್, ಪ್ರೊ.ಬಾಲಕೃಷ್ಣ ಕಲ್ಲೂರಾಯ, ಪ್ರೊ.ಎಚ್.ಎಸ್.ಭೋಜನಾಯಕ್, ಪ್ರೊ.ಲಕ್ಷ್ಮೀ ಇನಾಂದಾರ್, ಪ್ರೊ.ವಿ.ಕೃಷ್ಣ, ಪ್ರೊ.ಗೋಪಾಲಕೃಷ್ಣ ಜೋಶಿ (ಸದಸ್ಯರು)
ಭೂ ವಿಜ್ಞಾನ:
ಕೆಬಿಎನ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಎಂ.ಪಠಾಣ್ (ಅಧ್ಯಕ್ಷರು), ಪ್ರೊ.ಅಶೋಕ್ ಅಂಜಗಿ, ಪ್ರೊ.ಪಿ.ಮಾದೇಶ್, ಪ್ರೊ.ಆಸ್ಪ್ಯಾಕ್ ಅಹಮದ್, ಪ್ರೊ.ಎಸ್.ವಿ.ಕೃಷ್ಣಮೂರ್ತಿ, ಪ್ರೊ.ಎನ್.ನಂದಿನಿ, ಪ್ರೊ.ಗೋಪಾಲಕೃಷ್ಣ ಜೋಶಿ (ಸದಸ್ಯರು)
ವಾಣಿಜ್ಯ ಮತ್ತು ನಿರ್ವಹಣೆ:
ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿಎಸ್.ಯಡಪಡಿತ್ತಾಯ (ಅಧ್ಯಕ್ಷರು), ಪ್ರೊ.ಎಂ.ರಾಮಚಂದ್ರಗೌಡ, ಪ್ರೊ.ಆರ್.ಎಲ್.ಹೈದರಾಬಾದ್, ಪ್ರೊ.ಎಚ್.ಎಸ್.ಅನಿತಾ, ಪ್ರೊ..ಡಿ.ಆನಂದ್, ಪ್ರೊ.ವಿಜಯ್ ಬೂತಪುರ್, ಪ್ರೊ.ಸಿಂಥಿಯಾ ಮೆನೇಜಸ್, ಪ್ರೊ.ಮುಸ್ತೈರಿ ಬೇಗಂ, ಪ್ರೊ.ಸುದರ್ಶನ್ ರೆಡ್ಡಿ, ಡಾ.ಅಲೋಯಿಸಿಸ್ ಎಡ್ವರ್ಡ್, ಪ್ರೊ.ಗೋಪಾಲಕೃಷ್ಣ ಜೋಶಿ (ಸದಸ್ಯರು).
ಎಂಜಿನಿಯರಿಂಗ್:
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ (ಅಧ್ಯಕ್ಷರು), ಪ್ರೊ.ಕೆ.ಆರ್.ವೇಣುಗೋಪಾಲ್, ಪ್ರೊ.ಕೆ.ಎನ್.ಬಿ.ಮೂರ್ತಿ, ಪ್ರೊ.ಎಸ್.ವಿದ್ಯಾಶಂಕರ್, ಪ್ರೊ.ಪುಟ್ಟರಾಜು, ಪ್ರೊ.ಶ್ರೀನಿವಾಸ ಬಲ್ಲಿ, ಪ್ರೊ.ಗೋಪಾಲಕೃಷ್ಣ ಜೋಶಿ (ಸದಸ್ಯರು).
ಪ್ರೊ.ಗೋಪಾಲಕೃಷ್ಣ ಜೋಶಿ ಅವರು ಎಲ್ಲ ವಿಷಯ ಸಮಿತಿಗಳಿಗೆ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ.
ಇದನ್ನೂ ಓದಿ:
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದ್ದ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಎಡವಿದ್ದೆಲ್ಲಿ?
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಕರ್ನಾಟಕದಲ್ಲಿ ಸಕಲ ಸಿದ್ಧತೆ
(National Education Policy will make poor will remain poor accused Prof Radhakrishna)