ನೆಲಮಂಗಲ: ಚೀಟಿ ಹೆಸರಲ್ಲಿ ದಂಪತಿ ಸೇರಿ ಕುಟುಂಬಸ್ಥರಿಂದ ಕೋಟ್ಯಾಂತರ ರೂಪಾಯಿ ವಂಚನೆ: ದೂರು ದಾಖಲು

ಚೀಟಿ ಹೆಸರಲ್ಲಿ ದಂಪತಿ ಸೇರಿ ಕುಟುಂಬಸ್ಥರಿಂದ ಕೋಟ್ಯಾಂತರ ಹಣ ಮೋಸ ಮಾಡಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಕೆರೆಗುಡ್ಡದಹಳ್ಳಿಯಲ್ಲಿ ನಡೆದಿದೆ. ವಿಶ್ವನಾಥ್ ಹಾಗೂ ವನಿತಾ ವಂಚಿಸಿದ ದಂಪತಿಗಳು. ಇದೀಗ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ನೆಲಮಂಗಲ: ಚೀಟಿ ಹೆಸರಲ್ಲಿ ದಂಪತಿ ಸೇರಿ ಕುಟುಂಬಸ್ಥರಿಂದ ಕೋಟ್ಯಾಂತರ ರೂಪಾಯಿ ವಂಚನೆ: ದೂರು ದಾಖಲು
ಪ್ರಾತಿನಿಧಿಕ ಚಿತ್ರ
Edited By:

Updated on: Sep 03, 2023 | 7:32 PM

ಬೆಂಗಳೂರು ಉತ್ತರ, ಸೆ.03: ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ ಎಂಬ ಮಾತಿಗೆ ತಕ್ಕ ಉದಾಹರಣೆ ಇಲ್ಲಿದೆ. ಹೌದು, ಚೀಟಿ ಹೆಸರಲ್ಲಿ ದಂಪತಿ ಸೇರಿ ಕುಟುಂಬಸ್ಥರಿಂದ ಕೋಟ್ಯಾಂತರ ಹಣ ಮೋಸ ಮಾಡಿದ ಘಟನೆ ಬೆಂಗಳೂರು ಉತ್ತರ (Bengaluru North) ತಾಲೂಕಿನ ಕೆರೆಗುಡ್ಡದಹಳ್ಳಿಯಲ್ಲಿ ನಡೆದಿದೆ. ವಿಶ್ವನಾಥ್ ಹಾಗೂ ವನಿತಾ ವಂಚಿಸಿದ ದಂಪತಿಗಳು. ಇವರು ಸ್ವಂತ ಐಶಾರಾಮಿ ಮನೆ, ವಾಣಿಜ್ಯ ಮಳಿಗೆ ತೋರಿಸಿ ಚೀಟಿ ಹಾಕಿಸಿಕೊಂಡು ಬರೋಬ್ಬರಿ 6 ಕೋಟಿಗೂ ಹೆಚ್ಚಿನ ಹಣ ವಂಚನೆ ಮಾಡಿದ್ದಾರೆ. ಇದೀಗ ಚೀಟಿ ಹಾಕಿದ ಜನರು ಅವರ ಮನೆ ಬಳಿ ಬಂದು ಗೋಳಾಟ ನಡೆಸಿದ್ದಾರೆ.

ದೊಡ್ಡ ಅಧಿಕಾರಿಗಳನ್ನೆ ಟಾರ್ಗೆಟ್ ಮಾಡಿದ್ದ ದಂಪತಿ

ಇನ್ನು ಇವರು ವಕೀಲರು, ಡಾಕ್ಟರ್, ಉದ್ಯಮಿಗಳನ್ನು ಸೇರಿದಂತೆ ದೊಡ್ಡ ಅಧಿಕಾರಿಗಳನ್ನೇ ಟಾರ್ಗೆಟ್​ ಮಾಡಿದ ದಂಪತಿ. ಅವರಿಂದ ಚೀಟಿ ಹಾಕಿಸಿಕೊಂಡು ಇದೀಗ ತಿಂಗಳಿಂದ ಮನೆಗೆ ಬೀಗ ಜಡಿದು ಪರಾರಿಯಾಗಿದ್ದಾರೆ. ಕುಟುಂಬದ ವಿಶ್ವನಾಥ್, ವನಿತಾ, ಮಂಜುನಾಥ್‌, ಮುನಿಸ್ವಾಮಿ, ಲಕ್ಷ್ಮಿ ನಾರಾಯಣ, ವೆಂಕಟರಮಣಪ್ಪ, ವಸಂತರಾಜ್ ಮತ್ತು ಬಾಲಾಜಿ ಸೇರಿದಂತೆ ಒಟ್ಟು 8ಜನ ಕುಟುಂಬಸ್ಥರ ಮೇಲೆ ಇದೀಗ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ:Chit Cheat: ವರಮಹಾಲಕ್ಷ್ಮಿ ಹಬ್ಬಕ್ಕೆ ಷಾಕ್! ಚೀಟಿ ಹೆಸರಿನಲ್ಲಿ 3 ಕೋಟಿ ಪಂಗನಾಮ, ಹಣ ಕಳೆದುಕೊಂಡು ಚಿಂತಾಮಣಿ ಪೊಲೀಸರ ಮೊರೆ ಹೋದ 40 ಮಹಿಳೆಯರು

ನೀರು ಪೂರೈಕೆ ಮತ್ತು ವಿದ್ಯುತ್ ಗಾಗಿ ಅಗ್ರಹಿಸಿ ರಸ್ತೆ ತಡೆದು ರೈತರ ಪ್ರತಿಭಟನೆ

ಶಿವಮೊಗ್ಗ: ನೀರು ಪೂರೈಕೆ ಮತ್ತು ವಿದ್ಯುತ್​ಗಾಗಿ ಅಗ್ರಹಿಸಿ ರಸ್ತೆ ತಡೆದು ರೈತರು ಪ್ರತಿಭಟನೆ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಗಾಮಾ ಕ್ರಾಸ್ ಬಳಿ ನಡೆದಿದೆ. ಹೌದು, ಅಂಜನಾಪುರ ಡ್ಯಾಂ ನಿಂದ ನಾಲೆಗೆ ನೀರು ಬಿಡುಗಡೆ ಮತ್ತು ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ, ಸಾಗರ-ಶಿಕಾರಿಪುರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ತಾಲೂಕಿನ ಅತ್ಯಂತ ವಾಡಿಕೆಯಂತೆ ಮಳೆ ಬಾರದ ಹಿನ್ನೆಲೆ ಮೆಕ್ಕೆಜೋಳ ಭತ್ತದ ನಾಟಿ ಮಾಡಿರುವ ರೈತರ ಜಮೀನುಗಳಿಗೆ ನೀರಿನ ಕೊರತೆ ಎದಿರಾಗಿದೆ. ಹೀಗಾಗಿ ಕಂಗಲಾಗಿರುವ ಗ್ರಾಮದ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ