ಸಿಎಂ ಸಭೆಯಲ್ಲಿ ಮಹತ್ವದ ನಿರ್ಣಯ: ಮಾನದಂಡ ಪಾಲಿಸದೆ ಮನೆ ಕಟ್ಟಿದವರಿಗೆ ಗುಡ್​ ನ್ಯೂಸ್​

ಸಿಸಿ, ಓಸಿ ಪಡೆಯದೇ ಕಟ್ಟಿರುವ ಮನೆಗಳ ಮಾಲಕರ ಸಮಸ್ಯೆ ಆಲಿಸಿ ಅವುಗಳಿಗೆ ಮುಕ್ತಿ ಕೊಡಲು ರಾಜ್ಯ ಸರ್ಕಾರ ಮುಂದಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಬಗ್ಗೆ ಮಹತ್ವದ ಸಭೆ ನಡೆದಿದ್ದು, ಹಲವು ನಿರ್ಣಯಗಳನ್ನ ಈ ವೇಳೆ ಕೈಗೊಳ್ಳಲಾಗಿದೆ. ಸಚಿವ ಸಂಪುಟ ಸಭೆ ಬಳಿಕ ಇವುಗಳಿಗೆ ಅಂತಿಮ ಮುದ್ರೆ ಬೀಳಬೇಕಿದೆ.

ಸಿಎಂ ಸಭೆಯಲ್ಲಿ ಮಹತ್ವದ ನಿರ್ಣಯ: ಮಾನದಂಡ ಪಾಲಿಸದೆ ಮನೆ ಕಟ್ಟಿದವರಿಗೆ ಗುಡ್​ ನ್ಯೂಸ್​
ಮಹತ್ವದ ಸಭೆಯಲ್ಲಿ ಸಿಎಂ, ಡಿಸಿಎಂ ಭಾಗಿ
Updated By: ಪ್ರಸನ್ನ ಹೆಗಡೆ

Updated on: Oct 08, 2025 | 7:37 PM

ಬೆಂಗಳೂರು, ಅಕ್ಟೋಬರ್​ 08: ಸಿಸಿ, ಓಸಿ ಪಡೆಯದೇ ಮನೆಗಳ ಕಟ್ಟಿರುವ ಮಾಲೀಕರಿಗೆ ರಾಜ್ಯ ಸರ್ಕಾರದಿಂದ ಗುಡ್​ ನ್ಯೂಸ್ ಸಿಕ್ಕಿದೆ. ನೂತನ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ, ನೀರು ಸರಬರಾಜು ವಿಚಾರ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ವಿದ್ಯುತ್ ಸಂಪರ್ಕ ಸಿಗದೆ ತೊಂದರೆ ಅನುಭವಿಸುತ್ತಿರುವ ಕಟ್ಟಡದ ಮಾಲೀಕರ ಅಳಲು ಆಲಿಸಿ, ಅವರ ಸಮಸ್ಯೆಗಳ ಬಗ್ಗೆ ಸಂಕ್ಷಿಪ್ತವಾಗಿ ಚರ್ಚಿಸಿ ಬಗೆಹರಿಸಲು ಸಿಎಂ ಮುಂದಾಗಿದ್ದಾರೆ. ಸಾಧಕ-ಬಾಧಕಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.

1200 ಅಡಿಯಲ್ಲಿ ಕಟ್ಟಿರುವ ಮನೆಗೆ ಮಾತ್ರ ವಿದ್ಯುತ್, ನೀರು ಸರಬರಾಜಿಗೆ ನಿರ್ಧರಿಸಲಾಗಿದ್ದು, 30X40 ಸೈಟ್​​ನಲ್ಲಿ ಕಟ್ಟಿರುವ ಮನೆಗಳಿಗೆ ಅನುಮತಿ ನೀಡುವ ಬಗ್ಗೆ ಸರ್ಕಾರ ಚಿಂತಿಸಿದೆ. 1200 ಅಡಿಗಿಂತ ಮೇಲ್ಪಟ್ಟ ಕಟ್ಟಡಗಳಿಗೆ ಸುಗ್ರೀವಾಜ್ಞೆ ಮೂಲಕ ಅನುಮತಿ ನೀಡುವ ಬಗ್ಗೆಯೂ ತೀರ್ಮಾನಿಸೋದಾಗಿ ಸಭೆಯಲ್ಲಿ ತಿಳಿಸಲಾಗಿದ್ದು, ಈ ಬಗ್ಗೆ ಅಂತಿಮ ನಿರ್ಧಾರ ಸಚಿವ ಸಂಪುಟ ಸಭೆಯಲ್ಲಿ ಆಗಬೇಕಿದೆ. ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾರ್ಜ್, ಜಿಬಿಎ ಅಧಿಕಾರಿಗಳು, ಇಂಧನ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದು, ಕಾನೂನು‌ ಅಡೆತಡೆಗಳ ಬಗ್ಗೆಯೂ ಈ ವೇಳೆ ಸಮಾಲೋಚನೆ ನಡೆಸಲಾಗಿದೆ.

ಮಹತ್ವದ ಸಭೆಯಲ್ಲಿ ಸಿಎಂ, ಡಿಸಿಎಂ ಭಾಗಿ

ಡಿಸಿಎಂ ಡಿಕೆಶಿ ಹೇಳಿದ್ದೇನು?

ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್​, 30X40ವರೆಗೆ ಅನುಮತಿ ಕೊಡಲು ತೀರ್ಮಾನ ಮಾಡಿದ್ದೇವೆ. 30X40 ಅಂದರೆ 1200 ಚ.ಮೀ.ಗೆ ಅನುಮತಿ ನೀಡಲಾಗುವುದು. ಇಂಧನ ಇಲಾಖೆಗೆ ಅನುಷ್ಠಾನಗೊಳಿಸಲು ಅಡೆತಡೆಗಳು ಇದ್ದು, ಅದನ್ನು ನಿವಾರಿಸಿ ಅನುಮತಿಗೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.

ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.