ಬೆಂಗಳೂರು: ನಗರದಲ್ಲಿ ಸುಮಾರು 12 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಕೊಲೆ ಆರೋಪಿ ನೂತನ ತಂತ್ರಜ್ಞಾನ M.CCTNS ಆ್ಯಪ್ ಮುಖಾಂತರ ಅರೆಸ್ಟ್ ಆಗಿದ್ದಾನೆ. ಇತ್ತೀಚೆಗೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಎಂ-ಸಿಸಿಟಿಎನ್‌ಎಸ್ (M.CCTNS) ಎಂಬ ಮೊಬೈಲ್ ಆ್ಯಪ್ ಮೂಲಕ ಬೆರಳು ಮುದ್ರೆ ಪರಿಶೀಲನೆಗಾಗಿ ಚಿಕ್ಕ ಬೆರಳು ಮುದ್ರೆ ಡಿವೈಸ್ ಅನ್ನು ವಿತರಣೆ ಮಾಡಲಾಗಿದೆ. ಈ ಡಿವೈಸನ್ನು ಉಪಯೋಗಿಸಿಕೊಂಡು ಮೊಬೈಲ್ ಅಪ್ಲಿಕೇಷನ್ ಮುಖಾಂತರ ಅನುಮಾನಾಸ್ಪದ ವ್ಯಕ್ತಿಗಳ ಬೆರಳು ಮುದ್ರೆಯನ್ನು ಪರಿಶೀಲಿಸಿದರೆ ಆ ವ್ಯಕ್ತಿಯು ಈ ಹಿಂದೆ ಯಾವುದಾದರೂ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ಮಾಹಿತಿ ಸಿಗುತ್ತದೆ.
ಇದರಲ್ಲಿ ಪ್ರತಿ ಆರೋಪಿಯ ಫಿಂಗರ್ ಪ್ರಿಂಟ್ ಜೊತೆಗೆ ಆತನ ಮಾಹಿತಿ ಇರುತ್ತೆ. ಇದೇ ಆ್ಯಪ್ ಮುಖಾಂತರ ಯಶವಂತಪುರ ಪೊಲೀಸ್ ಠಾಣೆಯ ಪಿಎಸ್ಐ ರಾಜು ಅವರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಅನುಮಾನ ಬಂದು ಆತನ ಫಿಂಗರ್ ಪ್ರಿಂಟ್ ಕಲೆಕ್ಟ್ ಮಾಡಿ ಮೊಬೈಲ್ ಆಫ್ ಮೂಲಕ ಡಿವೈಸ್ ಬಳಸಿಕೊಂಡು ಆ ವ್ಯಕ್ತಿಯ ಬೆರಳು ಮುದೆಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಆ ವ್ಯಕ್ತಿ ಕೊಲೆ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಹಿಂದೆ ನಡೆದ ಕೊಲೆ ಪ್ರಕರಣದ ಆರೋಪಿಯ ಫಿಂಗರ್ ಪ್ರಿಂಟ್ಗೆ ಈ ವ್ಯಕ್ತಿಯ ಫಿಂಗರ್ ಪ್ರಿಂಟ್ ಮ್ಯಾಚ್ ಆಗಿದೆ.
2005 ರಲ್ಲಿ ಶಂಕರಪ್ಪ ಕೊಲೆ ಮಾಡಿದ್ದ ಆರೋಪಿ ರಮೇಶ್ನನ್ನು ಅಂದೇ ತಾವರೆಕೆರೆ ಪೊಲೀಸರು ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಬಳಿಕ ಬಿಡುಗಡೆ ಆಗಿ 2010 ರಿಂದಲೂ ಕೋರ್ಟ್ ಗೆ ಹಾಜರಾಗದೆ ಆರೋಪಿ ರಮೇಶ್ ತಲೆ ಮರೆಸಿಕೊಂಡಿದ್ದ. ಆದ್ರೆ ಮೊನ್ನೆ ಯಶವಂತಪುರದಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ರಮೇಶ್ನನ್ನು ಪೊಲೀಸರು M.CCTNS ಆ್ಯಪ್ ಮುಖಾಂತರ ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Most Common Passwords: ಭಾರತದಲ್ಲಿ ಜನರು ಹೆಚ್ಚಾಗಿ ಬಳಸುವ ಪಾಸ್ವರ್ಡ್ ಯಾವುದು ಗೊತ್ತೇ?: ಶಾಕಿಂಗ್ ವಿಚಾರ ಬಹಿರಂಗ
ಪ್ರೇಯಸಿ ಜೊತೆ ಏಕಾಂತದಲ್ಲಿದ್ದ ಪ್ರಿಯಕರ, ಪ್ರೇಯಸಿ ಗಂಡನಿಂದ ತಪ್ಪಿಸಿಕೊಳ್ಳಲು ಹೋಗಿ ಅರೆಸ್ಟ್
ಬೆಂಗಳೂರಿನ ಹೆಚ್ಎಎಲ್ ಬಳಿ ಪ್ರೇಯಸಿಯ ಗಂಡನನ್ನು ನೋಡಿ ಪ್ರಿಯತಮ ಓಡಿ ಹೋಗಿ ಪೊಲೀಸರ ಅತಿಥಿಯಾದ ಘಟನೆ ನಡೆದಿದೆ. ಅಸ್ಸಾಂ ಮೂಲದ ಮುಕುಂದ್ ಖೌಂದ್(36) ಎಂಬಾತ ಪೂರ್ವಿ ಡೋಲೈ ಎಂಬಾಕೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಪೂರ್ವಿ ಡೋಲೈ ಪತಿ ಬಿಪುಲ್ ಡೋಲೈ ಹೆಎಚ್ಎಲ್ನ ಖಾಸಗಿ ಕಂಪನಿಯಲ್ಲಿ ಆಫಿಸ್ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದಾನೆ. ಒಮ್ಮೆ ಪೂರ್ವಿ ಮತ್ತು ಮುಕುಂದ್ ಕೆ.ಆರ್.ಪುರಂ ರೈಲ್ವೇ ನಿಲ್ದಾಣದಲ್ಲಿರೋದು ಪತಿಗೆ ಗೊತ್ತಾಗಿದೆ. ಹೀಗಾಗಿ ಇಬ್ಬರನ್ನೂ ಪತ್ತೆ ಹಚ್ಚಿ ಯಮಲೂರುನಲ್ಲಿರುವ ಮನೆಗೆ ಕರೆತಂದಿದ್ದಾನೆ. ನವಂಬರ್ 9 ರ ರಾತ್ರಿ ಈ ಬಗ್ಗೆ ಮನೆಯಲ್ಲಿ ಜಗಳವಾಗಿದೆ. ಬಿಪುಲ್ ಈ ಘಟನೆ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಲು ಮುಂದಾಗಿದ್ದಾನೆ. ಈ ವೇಳೆ ಹೆದರಿ ಮನೆಯಿಂದ ಓಡಲು ಶುರುಮಾಡಿದ ಮುಕುಂದ್ ಭಯದಲ್ಲಿ ತಪ್ಪಿಸಿಕೊಳ್ಳಲು ಹೆಚ್ಎಎಲ್ ಗೇಟ್ ಜಂಪ್ ಮಾಡಿದ್ದಾನೆ. ಹೆಚ್ಎಎಲ್ ಒಳಗೆ ನುಗ್ಗುತ್ತಿದ್ದಂತೆ. ಹೆಚ್ಎಲ್ ಸೆಕ್ಯೂರಿಟಿ ಗಾರ್ಡ್ ಗಳು ಆತನನ್ನ ವಶಕ್ಕೆ ಪಡೆದಿದ್ದಾರೆ. ಮೊದಲು ಕಳ್ಳ ಇರಬಹುದು ಎಂದು ಕೊಂಡಿದ್ದವರಿಗೆ ಆತನ ಅಸಲಿಯತ್ತು ಗೊತ್ತಾಗಿದೆ.
ನಂತರ ಮುಕುಂದ್ ವಿರುದ್ಧ ದೂರು ದಾಖಲಿಸಿದ್ದ ಹೆಎಚ್ಎಎಲ್ ಸೆಕ್ಯೂರಿಟಿ ಇನ್ಸ್ ಪೆಕ್ಟರ್ ಆರೋಪಿಯನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಪ್ರಧಾನಿ ಮೋದಿ ಬೆಂಗಳೂರಿಗೆ ಬಂದಿದ್ದರ ಎರಡು ದಿನ ಮುಂಚಿತವಾಗಿ ಘಟನೆ ನಡೆದಿದೆ.
Published On - 1:16 pm, Thu, 17 November 22