ಬೆಂಗಳೂರು, ಡಿಸೆಂಬರ್ 31: 2024ನ್ನ ಸ್ವಾಗತಿಸಲು ಕ್ಷಣಗಣನೆ ಆರಂಭವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ (New Year) ಸಕಲ ತಯಾರಿ ಮಾಡಿಕೊಳ್ಳಲಾಗಿದ್ದು, ಸಿಟಿ ಮಂದಿ ಕುಣಿದು ಕುಪ್ಪಳಿಸಲು ಸಜ್ಜಾಗಿದ್ದಾರೆ. ನಗರದ ಬಹುತೇಕ ಪಬ್ಗಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ. ವಾರಕ್ಕೂ ಮೊದಲೇ ಸಿಲಿಕಾನ್ ಸಿಟಿಯ ಬಹುತೇಕ ಪಬ್ಗಳಲ್ಲಿ ಹೌಸ್ ಫುಲ್ ಆಗಿದ್ದು, ಈ ವರ್ಷ ಕಪಲ್ ಟಿಕೆಟ್ಗೆ ಮಾತ್ರ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಸರಾಸರಿ ಶೇ 25% ದರ ಏರಿಕೆ ಮಾಡಲಾಗಿದೆ.
ಎಂಜಿ ರಸ್ತೆ, ಇಂದಿರಾನಗರ, ಕೋರಮಂಗಲ, ಬ್ರಿಗೇಡ್ ರೋಡ್ ಸೇರಿ ಹಲವು ಹ್ಯಾಪನಿಂಗ್ ಸ್ಥಳಗಳಲ್ಲಿ ಕಪಲ್ ಟಿಕೆಟ್ ಬುಕ್ಕಿಂಗ್ ಮಾಡಲಾಗಿದೆ.
ಕಪಲ್ ಟಿಕೆಟ್ ಮಾತ್ರವಲ್ಲದೇ ಕೇಕ್ಗಳಿಗೂ ಡಿಮ್ಯಾಂಡ್ ಹೆಚ್ಚಿದೆ. ಅದರಲ್ಲೂ ಪೇಸ್ಟ್ರಿ ಕೇಕ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಪರ್ಪಲ್, ವೆಲ್ವೆಟ್, ಚಾಕೋ ಟ್ರಫಲ್, ಟ್ರಿ ಬಾಯ್, ಬ್ಲ್ಯಾಕ್ ಫಾರೆಸ್ಟ್, ಹನಿ ಕೇಕ್ಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ.
ಇದನ್ನೂ ಓದಿ: ಹೊಸ ವರ್ಷ ಆಚರಣೆಗೆ ಬೆಂಗಳೂರು ಸೇರಿ ಹಲವೆಡೆ ಭರ್ಜರಿ ಸಿದ್ದತೆ; ಇಲ್ಲಿದೆ ವಿವರ
ಹನುಮಂತನಗರದ ಕಗ್ಗೀಸ್ ಬೇಕರಿಯಲ್ಲಿ ವಿವಿಧ ಬಗೆಯ ಕೇಕ್ಗಳು ತಯಾರು ಮಾಡಲಾಗಿದೆ. ಹೊಸ ವರ್ಷಾಚರಣೆ ಬರಮಾದಿಕೊಳ್ಳಲು ಸಿಟಿ ಮಂದಿ ಕೇಕ್ ಖರೀದಿಸುತ್ತಿದ್ದಾರೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಬೇಕರಿ ಮಾಲೀಕರು ಕೇಕ್ ತಯಾರಿ ಮಾಡಿಕೊಡುತ್ತಿದ್ದಾರೆ.
ಇತ್ತ ಪೀಪಿ, ಹೇರ್ ಬ್ಯಾಂಡ್, ಕಲರ್ ಫುಲ್ ಲೈಟ್ಗಳ ಮಾರಾಟ ಮಾಡಲಾಗುತ್ತಿದ್ದು, ನ್ಯೂ ಇಯರ್ಗೆ ಮತ್ತಷ್ಟು ರಂಗು ತುಂಬಲು ಸಜ್ಜಾಗಿವೆ. ತಮ್ಮ ಪ್ರೀತಿ ಪಾತ್ರರು, ಗೆಳೆಯ, ಗೆಳತಿಯರೊಂದಿಗೆ ಯೂತ್ಸ್ ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:36 pm, Sun, 31 December 23