AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ವರ್ಷ ಆಚರಣೆಗೆ ಬೆಂಗಳೂರು ಸೇರಿ ಹಲವೆಡೆ ಭರ್ಜರಿ ಸಿದ್ದತೆ; ಇಲ್ಲಿದೆ ವಿವರ

ಹೊಸ ವರ್ಷ ಆಚರಣೆಗೆ ರಾಜ್ಯದ ಹಲವೆಡೆ ಭರ್ಜರಿ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಅದರಂತೆ ಬೆಂಗಳೂರಿನ ಹೊರವಲಯದ ರೆಸಾರ್ಟ್​ಗಳು ಈಗಾಗಲೇ ಫುಲ್​ ಆಗಿವೆ. ಇನ್ನು ಮೈಸೂರು, ಉತ್ತರ ಕನ್ನಡ ಸೇರಿದಂತೆ ಹಲವೆಡೆ ಬರದ ಸಿದ್ದತೆ ನಡೆಯುತ್ತಿದ್ದು, ಇಲ್ಲಿದೆ ಸಂಪೂರ್ಣ ವಿವರ.

ಹೊಸ ವರ್ಷ ಆಚರಣೆಗೆ ಬೆಂಗಳೂರು ಸೇರಿ ಹಲವೆಡೆ ಭರ್ಜರಿ ಸಿದ್ದತೆ; ಇಲ್ಲಿದೆ ವಿವರ
ಹೊಸ ವರ್ಷಾಚರಣೆ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:Dec 31, 2023 | 2:55 PM

ಬೆಂಗಳೂರು ಗ್ರಾಮಾಂತರ, ಡಿ.31: ಹೊಸ ವರ್ಷ ಆಚರಣೆಗೆ ರಾಜ್ಯದ ಹಲವೆಡೆ ಭರ್ಜರಿ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಅದರಂತೆ ಬೆಂಗಳೂರಿನ ಹೊರವಲಯದ ನಂದಿಬೆಟ್ಟದ ತಪ್ಪಲಿನ ಹಲವು ರೆಸಾರ್ಟ್​ ಹಾಗೂ ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಬಳಿಯ ಹ್ಯಾಂಗ್ ಔಟ್ ರೆಸಾರ್ಟ್​ನಲ್ಲಿ ನ್ಯೂ ಇಯರ್(New Year)​ ಫುಲ್​ ಸೆಲೆಬ್ರೆಷನ್​ಗೆ ರೆಡಿಯಾಗಿದೆ. ಈಗಾಗಲೇ 250 ಕ್ಕೂ ಹೆಚ್ಚು ಮಂದಿ ಬುಕ್ಕಿಂಗ್ ಆಗಿದ್ದು, ಇಲ್ಲಿ ಅನ್ ಲಿಮಿಟೆಟ್ ಪುಡ್ ಹಾಗೂ ಡ್ರಿಂಕ್ಸ್ ಜೊತೆಗೆ ಒಪನ್‌ ಏರಿಯಾದಲ್ಲಿ 50 ಕ್ಕೂ ವಿವಿಧ ಬಗೆಯ ಊಟದ ಮೆನುವನ್ನು ರೆಸಾರ್ಟ್ ಸಿಬ್ಬಂದಿ ರೆಡಿ ಮಾಡಿಕೊಂಡಿದ್ದಾರೆ.

ಪಾರ್ಟಿ ಮಾಡಲು ಬರುವ ಜನರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ

ಇನ್ನು ಕುಡಿದು ಟೈಟ್ ಆದವರು ಮನೆಗೆ ತೆರಳಲು ಸಾಧ್ಯವಾಗದವರಿಗೆ 100 ಟೆಂಟ್​ಗಳನ್ನು ನಿರ್ಮಿಸಲಾಗಿದೆ. ಒಂದು ಟೆಂಟ್​ನಲ್ಲಿ ಇಬ್ಬರು ಮಲಗಬಹುದಾಗಿದೆ. ಡಿಜೆ ಪಾರ್ಟಿ ಒ‌ಂದು ಕಡೆ, ಮತ್ತೊಂದು ಕಡೆ ಪೈರ್ ಕ್ಯಾಂಪ್ ಕೂಡ ಆಯೋಜಿಸಲಾಗಿದೆ. ಹೊಸ ವರ್ಷದ ಹಿನ್ನಲೆ ಹ್ಯಾಂಗ್ ಔಟ್ ರೆಸಾರ್ಟ್ ಒಂದು ದಿನದ ಮಟ್ಟಿಗೆ ಬಾರ್ ಲೈಸನ್ಸ್ ಪಡೆದಿದೆ. ಯಾವುದೇ ಅಹಿತಕರ ಘಟನೆ ಆಗದಂತೆ ಅನುಮತಿ ಪಡೆದಿರುವ ರೆಸಾರ್ಟ್​ಗಳಿಗೆ ಪೋಲೀಸರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ಹೊಸ ವರ್ಷಾಚರಣೆ: ಮಧ್ಯರಾತ್ರಿ 2 ಗಂಟೆವರೆಗೂ ಓಡಲಿವೆ ಬಿಎಂಟಿಸಿ ಬಸ್‌ಗಳು

ಕೋರಮಂಗಲ ಪಬ್​ಗಳಲ್ಲಿ ಭರದ ಸಿದ್ದತೆ

ಹೊಸವರ್ಷಾಚರಣೆ ಸಂಭ್ರಮಾಚರಣೆಗೆ ಸಿದ್ದತೆ ಕೋರಮಂಗಲ ಪಬ್​ಗಳಲ್ಲಿ ಭರದ ಸಿದ್ದತೆ ಮಾಡಿಕೊಂಡಿದೆ. ಈ ಕುರಿತು ಮಾತನಾಡಿದ ಜಿಪ್ಸಿ ಟವರ್ ಪಬ್ ಮಾಲೀಕ್ ಪ್ರಕಾಶ್ ನಾಯಕ್‘ ಸೆಲೆಬ್ರೇಷನ್ ಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಪೋಲಿಸರು ಗೈಡ್ ಲೈನ್ಸ್ ಫಾಲೋ ಮಾಡ್ತಿದ್ದೇವೆ. ವ್ಯಾಲಿಡ್ ಐಡಿ ಕಾರ್ಡ್ ಗಳನ್ನು ಪರಿಶೀಲನೆ ಮಾಡಿ ಒಳಗೆ ಬಿಡಲಾಗುತ್ತೆ. ಹೊಸ ಪಬ್ ಇದಾಗಿದ್ದು, ಹಾಗಾಗಿ ನಮಗೆ ಇದು ನಮಗೆ ಮೊದಲ ನ್ಯೂ ಇಯರ್. ಸುಮಾರು 1 ಸಾವಿರ ಜನ ಬರುವ ನಿರೀಕ್ಷೆ ಇದೆ. ಯುವತಿಯರಿಗೆ, ಕಪಲ್ಸ್ ಗೆ ಬೇರೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ 21 ವರ್ಷ ಮೇಲ್ಪಟ್ಟವರಿಗೆ ಮಾತ್ರ ಪಬ್ ಒಳಗೆ ಪ್ರವೇಶ ಎಂದರು.

ಕಾರವಾರದ ರವೀಂದ್ರನಾಥ್ ಠಾಗೋರ ಕಡಲ ತೀರದಲ್ಲಿ ಪ್ರವಾಸಿಗರ ಎಂಜಾಯ್

ಉತ್ತರ ಕನ್ನಡ: ಹೊಸ ವರ್ಷ ಎಂಜಾಯ್ ಮಾಡಲು ಬೆಂಗಳೂರು, ದಾವಣಗೆರೆ, ಮೈಸೂರು, ಮಹಾರಾಷ್ಟ್ರ ಭಾಗದಿಂದ ಜಿಲ್ಲೆಗೆ ಪ್ರವಾಸಿಗರು ಆಗಮಿಸಿದ್ದಾರೆ. ಕಾರವಾರದ ರವೀಂದ್ರನಾಥ್ ಠಾಗೋರ ಕಡಲ ತೀರದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಮಹಿಳೆಯರು ಹಾಗೂ ಚಿಕ್ಕ ಮಕ್ಕಳು ಸೇರಿದಂತೆ ಜಲಸಾಹಸ ಕ್ರೀಡೆಯಲ್ಲಿ ತೊಡಗಿದ್ದಾರೆ.

ಮೈಸೂರಿನ ಕಾಸ್ಮೋಪಾಲಿಟಾನ್ ಕ್ಲಬ್​ನಲ್ಲಿ ಹೊಸ ವರ್ಷ ಸಂಭ್ರಮಕ್ಕೆ ಬರದ ಸಿದ್ದತೆ

ಮೈಸೂರು: ಸಾಂಸ್ಕೃತೀಕ ನಗರಿ ಮೈಸೂರಿನ ಕಾಸ್ಮೋಪಾಲಿಟಾನ್ ಕ್ಲಬ್​ನಲ್ಲಿ ಹೊಸ ವರ್ಷ ಸಂಭ್ರಮಕ್ಕೆ ಬರದ ಸಿದ್ದತೆ ಮಾಡಿಕೊಳ್ಳಲಾಗಿದೆ. ರೆಡ್ ಕಾರ್ಪೆಟ್ ಥೀಮ್​​ನಲ್ಲಿ ಬೆಂಗಳೂರಿನ ಕಲಾವಿದರಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಪೂರ್ಣ ಕ್ಲಬ್​ನ್ನು ಕೆಂಪು ಮತ್ತು ಕಪ್ಪು ಬಣ್ಣದಿಂದ ಶೃಂಗಾರ ಮಾಡಲಾಗಿದ್ದು, ಬರುವಂತಹ ಕ್ಲಬ್ ಸದಸ್ಯರು ಹಾಗೂ ಗ್ರಾಹಕರಿಗೆ ರೌಂಡ್ ಟೇಬಲ್ ವ್ಯವಸ್ಥೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:51 pm, Sun, 31 December 23

ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ
Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ
‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?
‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?
VIDEO: ಏಟಿಗೆ ಎದಿರೇಟು... ಆಕ್ರೋಶಭರಿತರಾಗಿ ಸಂಭ್ರಮಿಸಿದ ವಿರಾಟ್ ಕೊಹ್ಲಿ
VIDEO: ಏಟಿಗೆ ಎದಿರೇಟು... ಆಕ್ರೋಶಭರಿತರಾಗಿ ಸಂಭ್ರಮಿಸಿದ ವಿರಾಟ್ ಕೊಹ್ಲಿ