ಹೊಸ ವರ್ಷ ಸಂಭ್ರಮ: ಕ್ಲಬ್,‌ ಪಬ್, ರೆಸ್ಟೋರೆಂಟ್​ಗೆ ಎಂಟ್ರಿಯಾಗಲು ಬೇಕು ಆಧಾರ್! ಕಾರಣ ಇಲ್ಲಿದೆ

| Updated By: Ganapathi Sharma

Updated on: Dec 28, 2023 | 12:21 PM

New year 2024 Celebration: ಹೊಸ ವರ್ಷಚಾರಣೆ ಪಾರ್ಟಿಯಲ್ಲಿ ಅಮಲೇರಿಸಿಕೊಂಡು ಅಸ್ವಸ್ಥರಾಗುವ ಗ್ರಾಹಕರನ್ನು ಮನೆಗೆ ತಲುಪಿಸಲು ಬೆಂಗಳೂರಿನ ಕ್ಲಬ್, ಪಬ್, ರೆಸ್ಟೋರೆಂಟ್​​​​ಗಳು ಹೊಸ ಯೋಜನೆ ಹಮ್ಮಿಕೊಂಡಿವೆ! ಆ ಕುರಿತ ವಿವರ ಇಲ್ಲಿದೆ.

ಹೊಸ ವರ್ಷ ಸಂಭ್ರಮ: ಕ್ಲಬ್,‌ ಪಬ್, ರೆಸ್ಟೋರೆಂಟ್​ಗೆ ಎಂಟ್ರಿಯಾಗಲು ಬೇಕು ಆಧಾರ್! ಕಾರಣ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಡಿಸೆಂಬರ್ 28: ನೂತನ ವರ್ಷಚಾರಣೆ ಸಂಭ್ರಮಕ್ಕೆ (New year 2024 Celebration) ಬೆಂಗಳೂರು ರಂಗೇರುತ್ತಿದೆ. ಕ್ಲಬ್, ಪಬ್, ರೆಸ್ಟೋರೆಂಟ್​​​​ಗಳು ಈಗಾಗಲೇ ಜಗಮಗಿಸುತ್ತಿವೆ. ಜೊತೆಗೆ ಗ್ರಾಹಕರಿಗೆ ಬಗೆ ಬಗೆಯ ಆಫರ್ ನೀಡುತ್ತಿವೆ. ಈ ಬಾರಿ ಗ್ರಾಹಕರ ಸುರಕ್ಷತೆಗೆ ಒತ್ತು ನೀಡಲಾಗಿದ್ದು, ಆಧಾರ್ (Aadhaar Card) ಕಾರ್ಡ್ ಸಂಗ್ರಹಿಸಿ ಪಾಸ್ ನೀಡಿ, ಸಂಭ್ರಮಾಚರಣೆಗೆ ಅವಕಾಶ ಮಾಡಿಕೊಡುತ್ತಿದೆ. ಇದಕ್ಕೆ ಕಾರಣವಿದೆ.

ಕ್ಲಬ್, ಪಬ್, ರೆಸ್ಟೋರೆಂಟ್​​​​ಗಳು ಹೊಸ ವರ್ಷದ ಪಾರ್ಟಿಗೆ ಬರುಗ ಗ್ರಾಹಕರ ಆಧಾರ್ ಕಾರ್ಡ್, ಅಡ್ರೆಸ್ ಫ್ರೂಫ್ ಪಡೆದು ಪಾಸ್ ನೀಡಲಿವೆ. ಪಾರ್ಟಿಯಲ್ಲಿ ಅಮಲೇರಿಸಿಕೊಂಡು ಅಸ್ವಸ್ಥರಾಗುವ ಗ್ರಾಹಕರನ್ನು ಮನೆಗೆ ತಲುಪಿಸಲು ಈ ಯೋಜನೆ ಹಮ್ಮಿಕೊಳ್ಳಲಾಗಿದೆ.

ತಡರಾತ್ರಿ 1 ಗಂಟೆವರೆಗೂ ನ್ಯೂ ಇಯರ್ ಸೆಲೆಬ್ರೆಷನ್​ಗೆ ಅವಕಾಶ ನೀಡಲಾಗಿದೆ. ಅಷ್ಟೇ ಅಲ್ಲದೇ, ಟಫ್ ರೂಲ್ಸ್ ಜಾರಿ ಮಾಡಿ ಗೈಡ್​​ಲೈನ್ಸ್ ನೀಡಿರುವ ಪೊಲೀಸರು, ರೂಲ್ಸ್ ತಪ್ಪದೇ ಫಾಲೋ ಮಾಡವಂತೆ ಕಟ್ಟುನಿಟ್ಟಿನ ಸೂಚಿಸಿದ್ದಾರೆ. ಗ್ರಾಹಕರ ಸುರಕ್ಷತೆಗೆ ಆದ್ಯತೆ ವಹಿಸುವಂತೆ ಎಚ್ಚರಿಸಿದ್ದಾರೆ. ಜೊತೆಗೆ ಡ್ರಗ್ಸ್ ಮತ್ತು ರೇವ್ ಪಾರ್ಟಿಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ‌.

ಸುರಕ್ಷತೆ ಕಣ್ಗಾವಲಿಗೆ ಡ್ರೋನ್ ಕ್ಯಾಮರಾ

ಸುರಕ್ಷತೆಗೆ ಡ್ರೋನ್ ಕ್ಯಾಮರಾ ಕಾವಲು ಇರಲಿದ್ದು, ನಗರದಾದ್ಯಂತ 6 ಸಾವಿರಕ್ಕೂ ಅಧಿಕ ಸಿಸಿ ಕ್ಯಾಮರಾಗಳು ಕಣ್ಣಿಡಲಿವೆ. ನಗರಾದಾದ್ಯಂತ ಭದ್ರತೆಗೆಂದೇ 7 ಸಾವಿರಕ್ಕೂ ಅಧಿಕ ಸಿಬ್ಬಂದಿ ನಿಯೋಜಿಸಲಾಗಿದೆ.

ಇದನ್ನೂ ಓದಿ: ನಂಜನಗೂಡಿನಲ್ಲಿ ಅಂಧಕಾಸುರ ಸಂಹಾರ ಆಚರಣೆ: ಮಹಿಷ ರಂಗೋಲಿ ತುಳಿದಿದಕ್ಕೆ FIR ದಾಖಲು

ಹೊಸ ವರ್ಷಾಚರಣೆ ವೇಳೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದಕ್ಕೆ ಬ್ರೇಕ್ ಹಾಕಲು ಪೊಲೀಸರು ಸಜ್ಜಾಗಿದ್ದಾರೆ. ಡ್ರಿಂಕ್ ಆ್ಯಂಡ್ ಡ್ರೈವ್ ಕಂಡುಬಂದಲ್ಲಿ ವೆಹಿಕಲ್ ಸೀಜ್ ಮಾಡಿ, ಕೇಸ್ ಮಾಡೋದು ಪಕ್ಕಾ ಎನ್ನಲಾಗ್ತಿದೆ. ಆದಾಗ್ಯೂ ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ ಐ ಲ್ಯಾಂಡ್​​​ಗಳನ್ನು ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾ ನಗರ 100 ಫೀಟ್ ರಸ್ತೆಗಳಲ್ಲಿ ನಿರ್ಮಿಸಲಿದ್ದು, ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ಕಲ್ಪಿಸಲಾಗಿದೆ‌‌.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:31 am, Thu, 28 December 23