ನಂಜನಗೂಡಿನಲ್ಲಿ ಅಂಧಕಾಸುರ ಸಂಹಾರ ಆಚರಣೆ: ಮಹಿಷ ರಂಗೋಲಿ ತುಳಿದಿದಕ್ಕೆ FIR ದಾಖಲು
ಮಹಿಷಾಸುರನ ವಿಚಾರವಾಗಿ ನಂಜನಗೂಡಿನಲ್ಲಿ ಮತ್ತೆ ಸಂಘರ್ಷ ಶುರುವಾಗಿದೆ. ನಂಜನಗೂಡಿನಲ್ಲಿ ಅಂಧಕಾಸುರ ಸಂಹಾರ ಆಚರಣೆಯಲ್ಲಿ ಮಹಿಷ ರಂಗೋಲಿ ತುಳಿದಿದಕ್ಕೆ 6 ಮಂದಿ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಅದೇ ರೀತಿಯಾಗಿ ಅಂಧಕಾಸುರ ಸಂಹಾರ ಆಚರಣೆ ತಡೆದವರ ವಿರುದ್ಧವೂ ಎಫ್ಐಆರ್ ದಾಖಲು ಮಾಡಲಾಗಿದೆ.
ಮೈಸೂರು, ಡಿಸೆಂಬರ್ 27: ಜಿಲ್ಲೆಯ ನಂಜನಗೂಡಿನಲ್ಲಿ ಅಂಧಕಾಸುರ ಸಂಹಾರ ಆಚರಣೆಯಲ್ಲಿ ಮಹಿಷ ರಂಗೋಲಿ ತುಳಿದಿದಕ್ಕೆ 6 ಮಂದಿ ವಿರುದ್ಧ ಎಫ್ಐಆರ್ (FIR) ದಾಖಲು ಮಾಡಲಾಗಿದೆ. ಮೌಢ್ಯಾಚರಣೆ ಆಚರಿಸಿದ್ದಾರೆಂದು ನಂಜನಗೂಡು ಠಾಣೆಗೆ ಮಾಲೇಶ್ ಎಂಬುವರ ದೂರಿನನ್ವಯ ಕಪಿಲೇಶ್, ಅನಂತ್, ಕಿರಣ್, ರಾಜು, ರವಿ, ಗಿರೀಶ್ ಹಾಗೂ ಇತರರ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ.
ಆಚರಣೆ ತಡೆದವರ ವಿರುದ್ಧವೂ ಎಫ್ಐಆರ್
ನಂಜನಗೂಡು ಶ್ರೀಕಂಠೇಶ್ವರ ದೇಗುಲ ಬಳಿ ನಿನ್ನೆ ಮಹಿಷನ ಚಿತ್ರದ ಫ್ಲೆಕ್ಸ್ ಅಳವಡಿಸಿ ರಂಗೋಲಿ ಬಿಡಿಸಿ ಬಳಿಕ ಸಂಹಾರ ಮಾಡಲಾಗಿದೆ. ಮಹಿಷ ಚಿತ್ರ ತುಳಿಯುವ ವೇಳೆ ವಿರೋಧಿಸಿದಾಗ ಹಲ್ಲೆಗೆ ಯತ್ನ ಆರೋಪ ಸಹ ಮಾಡಲಾಗಿದೆ. ಅಂಧಕಾಸುರ ಸಂಹಾರ ಆಚರಣೆ ತಡೆದವರ ವಿರುದ್ಧವೂ ಎಫ್ಐಆರ್ ಹಾಕಲಾಗಿದೆ.
ಇದನ್ನೂ ಓದಿ: ಅಂದಕಾಸುರ ಸಂಹಾರ: ನಂಜುಂಡೇಶ್ವರ ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿರುವ ಆರೋಪ
ದೇಗುಲದ ಇಒ ಜಗದೀಶ್ ದೂರಿನನ್ವಯ ಐಪಿಸಿ ಸೆಕ್ಷನ್ 143, 298, 295/A 149 ಹಾಗೂ 34ರ ಅಡಿ ಬಸವರಾಜು, ಮೆಲ್ಲಹಳ್ಳಿ ನಾರಾಯಣ್, ಅಭಿ ನಾಗಭೂಷಣ್, ನಟೇಶ್, ಅಭಿ ಪವಾರ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಸಂಪ್ರದಾಯದ ಆಚರಣೆಗೆ ತಡೆ, ಶ್ರೀಕಂಠೇಶ್ವರ ಉತ್ಸವಮೂರ್ತಿ ಮೇಲೆ ನೀರು ಎರಚಿ, ಭಕ್ತರ ಧಾರ್ಮಿಕ ಭಾವನೆ ಆಚರಣೆಗೆ ಅಡ್ಡಿ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಮೈಸೂರಿನಲ್ಲಿ ಮಹಿಷಾಸುರ ವಿಚಾರವಾಗಿ ಮತ್ತೆ ಸಂಘರ್ಷ: ದಲಿತ ಸಮಿತಿ, ಭಕ್ತರ ನಡುವೆ ಮಾತಿನ ಚಕಮಕಿ
ತಾಂಡವೇಶ್ವರ ಹಾಗೂ ಪಾರ್ವತಿ ದೇವಿಯ ಉತ್ಸವ ಮೂರ್ತಿಯನ್ನ ರಂಗೋಲಿ ಬಳಿ ತರುವಾಗ ಕಿಡಿಗೇಡಿಗಳು ಬಾಟಲಿನಿಂದ ನೀರನ್ನ ಎರೆಚ್ಚಿದ್ದರು. ಇದರಿಂದ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿ ಪೊಲೀಸರು ಜನರನ್ನ ಜದುರಿಲು ಲಘು ಲಾಠಿ ಪ್ರಹಾರ ನಡೆಸುವ ಮೂಲಕ ಜನರನ್ನ ಸ್ಥಳದಿಂದ ಚದುರಿಸಿದ್ದರು.
ಉತ್ಸವ ಮೂರ್ತಿಗೆ ನೀರು ಎರಚ್ಚಿದನ್ನ ವಿರೋಧಿಸಿ ನಂಜುಂಡೇಶ್ವರನ ಭಕ್ತರು ಪ್ರತಿಭಟನೆ ಮಾಡಿದ್ದಾರೆ. ಕೂಡಲೇ ಕಿಡಿಗೇಡಿಗಳನ್ನ ಬಂಧಿಸುವಂತೆ ಪಟ್ಟು ಹಿಡಿದಿದ್ದರು. ಈ ವೇಳೆ ದೇವಾಲಯದ ಇಒ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ತಹಸಿಲ್ದಾರ್, ಡಿವೈಎಸ್ಪಿ ಪ್ರತಿಭಟನಾಕರನ್ನ ಮನವೊಲಿಸಲು ಯತ್ನಿಸಿದರು. ಈ ವೇಳೆ ಇಂದು ಸಂಜೆಯೊಳಗೆ ಸೂಕ್ತ ಕ್ರಮ ಕೈಗೊಳ್ಳವ ಭರವಸೆ ನೀಡಿದರು. ನಂತರ ಭಕ್ತರು ಪ್ರತಿಭಟನೆ ವಾಪಸ್ ಪಡೆದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.