ಬೆಂಗಳೂರು, ಡಿಸೆಂಬರ್ 30: ಹೊಸ ವರ್ಷ (New Year) ಮತ್ತು 25ನೇ ವರ್ಷ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ (BMTC) ತನ್ನ ಚಾಲಕ ಮತ್ತು ನಿರ್ವಾಹಕರಿಗೆ ಸಿಹಿಸುದ್ದಿ ನೀಡಿದೆ. ಬಿಎಂಟಿಸಿಯ ಚಾಲಕರ ಮತ್ತು ನಿರ್ವಾಹಕರ ಕೇಸ್ಗಳು ಖುಲಾಸೆ ಮಾಡಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ (Satyavati) ಆದೇಶ ಹೊರಡಿಸಿದ್ದಾರೆ. ಇದು ಇಂದಿನಿಂದಲೇ ಜಾರಿಯಾಗಲಿದೆ.
ಡಿಸ್ಮಿಸ್, ಸಸ್ಪೆಂಡ್, ಐದು ಸಾವಿರ ರುಪಾಯಿ ದಂಡ ಕಟ್ಟಬೇಕಿದ್ದ, ಇನ್ಕ್ರಿಮೆಂಟ್ ಕಟ್ ಆಗುವ ಭಯದಲ್ಲಿದ್ದ 6960 ನೌಕರರಿಗೆ ಬಿಗ್ ರಿಲೀಫ್ ಸಿಕ್ಕಿದೆ. ತಮ್ಮ ಮಾತು ಕೇಳಲಿಲ್ಲ, ಸಣ್ಣಪುಟ್ಟ ತಪ್ಪುಗಳಿಗೂ ಶಿಕ್ಷೆಗೆ ಒಳಗಾಗಿದ್ದ ಡ್ರೈವರ್ ಮತ್ತು ಕಂಡಕ್ಟರ್ಗಳ ಕೇಸ್ಗಳು ವಜಾ ಆಗಿವೆ.
ಇದನ್ನೂ ಓದಿ: ಬಿಎಂಟಿಸಿ ಬಸ್ಗಳಲ್ಲಿ ಮುಂಬರುವ ನಿಲ್ದಾಣದ ಹೆಸರು ಹೇಳುವ ಆಡಿಯೋ ಅಳವಡಿಕೆಗೆ ಹೈಕೋರ್ಟ್ ಗಡುವು
ಚಾಲನೆ ವೇಳೆ ಮೊಬೈಲ್ ಬಳಕೆ, ಟಿಕೆಟ್ ಸರಿಯಾಗಿ ನೀಡದಿರುವುದು, ಗೈರು ಹಾಜರಿ, ಸಂಚಾರಿ ನಿಯಮ ಉಲ್ಲಂಘನೆ, ಬಸ್ಗಳನ್ನು ಎಲ್ಲಂದರಲ್ಲಿ ನಿಲ್ಲಿಸುವುದು, ಡೋರ್ ಹಾಕದೆ ಬಸ್ ಚಾಲನೆ ಮಾಡಿದ್ದು, ಯೂನಿಫಾರಂ ಹಾಕದೆ ಡ್ಯೂಟಿ ಮಾಡಿರುವುದು ಇಂತಹ ಎಲ್ಲಾ ತಪ್ಪುಗಳಿಂದ ಶಿಕ್ಷೆಗೆ ಒಳಗಾಗಿದ್ದ ಚಾಲಕರ ಮತ್ತು ನಿರ್ವಾಹಕರ ಕೇಸ್ಗಳನ್ನು ಬಿಎಂಟಿಸಿ ವಜಾ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ