
ಬೆಂಗಳೂರು, ಜ.12: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಬೆಂಗಳೂರು-ಕಡಪ-ವಿಜಯವಾಡವನ್ನು ಸಂಪರ್ಕಿಸುವ ಆರ್ಥಿಕ ಕಾರಿಡಾರ್ (NH-544G) ನಿರ್ಮಾಣ ಮಾಡುವ ಕಾರ್ಯದಲ್ಲಿ ಮಹತ್ವ ಮೈಲಿಗಲ್ಲು ಸಾಧಿಸಿದೆ. ಈ ಮೂಲಕ ವಿಶ್ವ ದಾಖಲೆಯ ಪುಟ ಸೇರಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಟ್ಟು ನಾಲ್ಕು ಗಿನ್ನೆಸ್ ದಾಖಲೆಗಳನ್ನು ಮಾಡಿದೆ. ಜನವರಿ 6 ರಂದು ಆಂಧ್ರಪ್ರದೇಶದ ಪುಟ್ಟಪರ್ತಿ ಬಳಿ ಎರಡು ಗಿನ್ನೆಸ್ ವಿಶ್ವ ದಾಖಲೆ ಮಾಡಿತ್ತು. ಇದೀಗ ತನ್ನದೇ ದಾಖಲೆಗಳನ್ನು ಮುರಿದು ಮತ್ತೆರಡು ದಾಖಲೆಗಳನ್ನು ಮಾಡಿದೆ. ಇದೀಗ ಈ ದಾಖಲೆ ಮೂಲಕ ದೇಶದಲ್ಲಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ಎಷ್ಟು ನಿಷ್ಠೆಯನ್ನು ಹಾಗೂ ವೇಗವನ್ನು ಹೊಂದಿದೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಿದ ಮೊದಲ ದಾಖಲೆ ಪ್ರಕಾರ, 24 ಗಂಟೆಯಲ್ಲಿ 9.63 ಕಿಮೀ ಉದ್ದದ 3 ಲೇನ್ ಅಗಲದ ಬಿಟುಮಿನಸ್ ಕಾಂಕ್ರೀಟ್ ಅನ್ನು ನಿರಂತರವಾಗಿ ಹಾಕಿದ್ದಾರೆ. ಎರಡನೇ ದಾಖಲೆ 24 ಗಂಟೆಗಳಲ್ಲಿ 10,655 ಮೆಟ್ರಿಕ್ ಟನ್ ನಿರಂತರವಾಗಿ ಬಿಟುಮಿನಸ್ ಕಾಂಕ್ರೀಟ್ ಹಾಕಿರುವುದು. ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಆರ್ಥಿಕ ಕಾರಿಡಾರ್ ಜಾಗತಿಕವಾಗಿ ಮೊದಲ ಬಾರಿಗೆ ವಿಶ್ವ ದಾಖಲೆಯನ್ನು ಮಾಡಿದೆ. ಇದೀಗ ಜನವರಿ 11ರಂದು ಮತ್ತೆರಡು ದಾಖಲೆಗಳು ಇದಕ್ಕೆ ಸೇರಿಕೊಂಡಿದೆ. 57,500 ಮೆಟ್ರಿಕ್ ಟನ್ ಬಿಟುಮಿನಸ್ ಕಾಂಕ್ರೀಟ್ ಹಾಕುವ ಮೂಲಕ ಮೂರನೇ ದಾಖಲೆಯನ್ನು ಮಾಡಿದೆ. 156 ಕಿ.ಮೀ. ನಿರಂತರ ಡಾಂಬರು ಹಾಕುವ ಮೂಲಕ ನಾಲ್ಕನೇ ದಾಖಲೆಯನ್ನು ಮಾಡಿದೆ. ಈ ಎರಡು ದಾಖಲೆಗಳು ಈ ಹಿಂದಿನ ದಾಖಲೆಯನ್ನು ಮುರಿದಿದೆ.
ಇದನ್ನೂ ಓದಿ: ಟ್ರಾಫಿಕ್ ಕಿರಿಕಿರಿಗೆ ಗುಡ್ ಬೈ ಹೇಳಲು ಬೆಂಗಳೂರಿನ 5 ಕಡೆ ನಿರ್ಮಾಣವಾಗಲಿದೆ ಎಲಿವೇಟೆಡ್ ಕಾರಿಡಾರ್: ಎಲ್ಲೆಲ್ಲಿ ಗೊತ್ತಾ?
Setting new global benchmarks in highway engineering 🛣️, NHAI has created history by achieving two more Guinness World Records in continuous Bituminous Concrete paving.
A record 156 lane-km of paving and 57,500 MT of Bituminous Concrete were laid continuously, surpassing the… pic.twitter.com/L1qP1R1f0B
— Nitin Gadkari (@nitin_gadkari) January 11, 2026
ಬೆಂಗಳೂರು-ಕಡಪ-ವಿಜಯವಾಡ ಆರ್ಥಿಕ ಕಾರಿಡಾರ್‌ನ ಪ್ಯಾಕೇಜ್ -2 ಮತ್ತು ಪ್ಯಾಕೇಜ್ -3 ರಲ್ಲಿ ಈ ವೇಗ ನಿರ್ಮಾಣ ಕಾರ್ಯವನ್ನು ಮಾಡಲಾಗಿದೆ. ಮೆಸರ್ಸ್ ರಾಜ್‌ಪಥ್ ಇನ್ಫ್ರಾಕಾನ್ ಪ್ರೈವೇಟ್ ಲಿಮಿಟೆಡ್‌ನ ಸಹಯೋಗದೊಂದಿಗೆ ಈ ಸಾಧನೆಯನ್ನು ಮಾಡಲಾಗಿದೆ. ಈ ವೇಗದ ನಿರ್ಮಾಣ ಕಾರ್ಯಕ್ಕೆ 70 ಟಿಪ್ಪರ್‌ಗಳು, 5 ಹಾಟ್ ಮಿಕ್ಸ್ ಪ್ಲಾಂಟ್, ಡಾಂಬರು ಪೇವರ್, 17 ರೋಲರುಗಳನ್ನು ಬಳಸಿಕೊಳ್ಳಲಾಗಿದೆ. ಇನ್ನು ಈ ನಿರ್ಮಾಣ ಕಾರ್ಯಕ್ಕೆ ಬೇಕಾದ ಸಲಕರಣೆಗಾಗಿ ಬೇರೆ ಬೇರೆ ಕಂಪನಿಗಳ ಜತೆಗೆ ಒಪ್ಪಂದವನ್ನು ಕೂಡ ಮಾಡಲಾಗಿದೆ. ಈ ಕಂಪನಿಗಳ ಮೂಲಕ ನಿರ್ಮಾಣ ಕಾರ್ಯದ ಮೇಲ್ವಿಚಾರಣೆ ಮಾಡಲಾಗುತ್ತದೆ. ಇದರ ಜತೆಗೆ ಸುರಂಗ, ಅರಣ್ಯ ಪ್ರದೇಶ, ಇತರ ಸೌಲಭ್ಯಗಳಿಗಾಗಿ ಸುರಕ್ಷಿತ ಕ್ರಮಗಳನ್ನು ಕೂಡ ತೆಗೆದುಕೊಳ್ಳಲಾಗಿದೆ. ಈ ಯೋಜನೆ ಬೆಂಗಳೂರು ಮತ್ತು ವಿಜಯವಾಡ ನಡುವಿನ ಸಂಪರ್ಕಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡಲಿದೆ ಎಂದು ಹೇಳಲಾಗಿದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:32 pm, Mon, 12 January 26