4 ರಾಜ್ಯದ 19 ಸ್ಥಳಗಳಲ್ಲಿ ಎನ್​ಐಎ ದಾಳಿ: ಮುಖ್ಯಸ್ಥ ಸೇರಿದಂತೆ 8 ಜನರ ಬಂಧನ

ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ನಡೆದ ಎನ್​​ಐಎ ದಾಳಿಯಲ್ಲಿ ಐಸಿಸ್ ಬಳ್ಳಾರಿ ಮಾಡ್ಯೂಲ್​ನ ಸ್ಪೋಟದ ಸಂಚು ರೂಪಿಸಿದ್ದ ಯೋಜನೆಯ ಮುಖ್ಯಸ್ಥ ಸೇರಿದಂತೆ 8 ಜನರನ್ನು ಎನ್​ಐಎ ಅಧಿಕಾರಿಗಳು ಬಂಧಿಸಿದ್ದಾರೆ. ದಾಳಿ ವೇಳೆ ಬಂಧಿಸಲ್ಪಟ್ಟ 8 ಜನರು ಐಸಿಸ್ ಎಜೆಂಟ್​ಗಳಾಗಿದ್ದು, ನಿಷೇಧಿತ ಸಂಘಟನೆಯಲ್ಲಿ ಸಕ್ರಿಯವಾಗಿದ್ದರು.

4 ರಾಜ್ಯದ 19 ಸ್ಥಳಗಳಲ್ಲಿ ಎನ್​ಐಎ ದಾಳಿ: ಮುಖ್ಯಸ್ಥ ಸೇರಿದಂತೆ 8 ಜನರ ಬಂಧನ
ಪ್ರಾತಿನಿಧಿಕ ಚಿತ್ರ
Updated By: ಗಂಗಾಧರ​ ಬ. ಸಾಬೋಜಿ

Updated on: Dec 18, 2023 | 8:11 PM

ಬೆಂಗಳೂರು, ಡಿಸೆಂಬರ್​​ 18: ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ನಡೆದ ಎನ್​​ಐಎ (NIA Raid) ದಾಳಿಯಲ್ಲಿ ಐಸಿಸ್ ಬಳ್ಳಾರಿ ಮಾಡ್ಯೂಲ್​ನ ಸ್ಪೋಟದ ಸಂಚು ರೂಪಿಸಿದ್ದ ಯೋಜನೆಯ ಮುಖ್ಯಸ್ಥ ಸೇರಿದಂತೆ 8 ಜನರನ್ನು ಎನ್​ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಬಳ್ಳಾರಿಯಲ್ಲಿ ಮಿನಾಜ್ ಅಲಿಯಾಸ್ ಎಂಡಿ ಸುಲೈಮಾನ್, ಸೈಯದ್ ಸಮೀರ್​​, ಮುಂಬೈನಲ್ಲಿ ಅನಾಸ್ ಇಕ್ಬಾಲ್ ಶೇಖ್, ಬೆಂಗಳೂರಿನಲ್ಲಿ ಮೊಹಮದ್ ಮುನಿರುದ್ದೀನ್, ಸೈಯದ್ ಸಮೀವುಲ್ಲಾ ಅಲಿಯಾಸ್ ಸಮಿ, ಎಂಡಿ ಮುಝಮ್ಮಿಲ್​​ ಮತ್ತು ದೆಹಲಿಯಲ್ಲಿ ಶಯಾನ್ ರಹಮಾನ್ ಅಲಿಯಾಸ್ ಹುಸೇನ್, ಎಂಡಿ ಶಹಬಾಜ್ ಅಲಿಯಾಸ್ ಜುಲ್ಫಿಕರ್ ಅಲಿಯಾಸ್ ಗುಡ್ಡು ಬಂಧಿತರು.

ದಾಳಿ ವೇಳೆ ಬಂಧಿಸಲ್ಪಟ್ಟ 8 ಜನರು ಐಸಿಸ್ ಎಜೆಂಟ್​ಗಳಾಗಿದ್ದು, ನಿಷೇಧಿತ ಸಂಘಟನೆಯಲ್ಲಿ ಸಕ್ರಿಯವಾಗಿದ್ದರು. ಭಯೋತ್ಪಾದನಾ ಕೃತ್ಯ ಉತ್ತೇಜಿಸುವ ಚಟುವಟಿಕೆಯಲ್ಲಿ ತೊಡಗಿದ್ದರು. ಮಿನಾಜ್ ಅಲಿಯಾಸ್ ಎಂಡಿ ಸುಲೈಮಾನ್ ಅಣತೆಯಂತೆ ಬಾಕಿ ಜನರು ಕಾರ್ಯ ನಿರ್ವಹಿಸುತಿದ್ದರು.

ಇದನ್ನೂ ಓದಿ: Bengaluru NIA Raid: ಶಂಕಿತ ಉಗ್ರ ಅಲಿ ಅಬ್ಬಾಸ್ ಬಂಧನ ಪ್ರಕರಣ; ಮತ್ತೆ ಬೆಂಗಳೂರಿನಲ್ಲಿ ಎನ್​ಐಎ ದಾಳಿ

ದಾಳಿ ವೇಳೆ ಬಂಧಿತರ ಬಳಿ ಸ್ಪೋಟಕ ಕಚ್ಚಾ ವಸ್ತುಗಳು ಸೇರಿದಂತೆ ಸಲ್ಫರ್, ಪೊಟ್ಯಾಸಿಯಂ, ನೈಟ್ರೇಟ್, ಇದ್ದಿಲು, ಗನ್ ಪೌಡರ್, ಸಕ್ಕರೆ ಮತ್ತು ಎಥೆನಾಲ್ ಪತ್ತೆ ಆಗಿದ್ದವು. ಜೊತೆಗೆ ಹರಿತವಾದ ಆಯುಧಗಳು, ಲೆಕ್ಕವಿಲ್ಲದಷ್ಟು ನಗದು ಸಹ ಪತ್ತೆ ಮಾಡಲಾಗಿದೆ.

ಇದನ್ನೂ ಓದಿ: ದೇಶದ 41 ಕಡೆ NIA ದಾಳಿ, ಬೆಂಗಳೂರಿನಲ್ಲಿ ಸ್ಫೋಟಕ ತಯಾರಿಕೆಗೆ ಬಳಸುವ 7 ಕೆಜಿ ಸೋಡಿಯಂ ನೈಟ್ರೇಟ್ ಪತ್ತೆ

ಇದೇ ವೇಳೆ ಸ್ಮಾರ್ಟ್ ಫೋನ್​ಗಳು ಮತ್ತು ಕೆಲ ಡಿಜಿಟಲ್ ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ. ಕಚ್ಚಾ ವಸ್ತುಗಳ ಬಳಸಿ ಐಇಡಿ ತಯಾರಿಸಿ ಸ್ಪೋಟಕ್ಕೆ ಸಂಚು ರೂಪಿಸಿದ್ದಾಗಿ ತನಿಖೆ ವೇಳೆ ರಹಸ್ಯ ಬಯಲಾಗಿದೆ. ಈ ಮೂಲಕ ಭಯೋತ್ಪಾದಕ ಕೃತ್ಯ ನಡೆಸಲು ಮುಂದಾಗಿದ್ದರು. ಆರೋಪಿಗಳು ಹಿಂಸಾತ್ಮಕ ಜಿಹಾದ್, ಖಿಲಾಫತ್, ಐಸಿಸ್ ಮಾರ್ಗಗಳ ಅನುಸರಿಸುತಿದ್ದರು. ಜೊತೆಗೆ ಎನ್ ಕ್ರಿಪ್ಟ್ ಅಪ್ಲಿಕೇಶನ್ ಮೂಲಕ ಪರಸ್ಪರ ಸಂಪರ್ಕ ಹೊಂದಿದ್ದರೆಂಬುದು ತನಿಖೆ ವೇಳೆ ಬಹಿರಂಗವಾಗಿದೆ.

ಸಂಘಟನೆಗಾಗಿ ನಿರ್ದಿಷ್ಟ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿದ್ದು ಪತ್ತೆ ಆಗಿದೆ. ಜಿಹಾದ್ ಉದ್ದೇಶಕ್ಕಾಗಿ ಮುಜಾಹಿದ್​ಗಳ ನೇಮಕಾತಿಗೆ ಸಂಬಂಧಿಸಿದ ದಾಖಲೆಗಳು ಸಹ ಹೊಂದಿರುವುದು ಕೂಡ ಪತ್ತೆ ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.