ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಪಾಡದವರಿಗೆ ದಂಡದ ಬಿಸಿ; ಬೆಂಗಳೂರಿನಲ್ಲಿ ₹4.63 ಲಕ್ಷ ದಂಡ ವಸೂಲಿ

| Updated By: ganapathi bhat

Updated on: Jan 08, 2022 | 10:33 PM

ನೈಟ್​​ಕರ್ಫ್ಯೂ ಉಲ್ಲಂಘಿಸಿ ಅನಗತ್ಯವಾಗಿ ಓಡಾಟ ಹಿನ್ನೆಲೆ, ನೈಟ್​ ಕರ್ಫ್ಯೂ ಶುರುವಾದಾಗಿನಿಂದ 1338 ವಾಹನ ಜಪ್ತಿ ಮಾಡಲಾಗಿದೆ. ಇದುವರೆಗೆ 1,338 ವಾಹನ ಜಪ್ತಿ ಮಾಡಿದ ಪೊಲೀಸರು, 1199 ದ್ವಿಚಕ್ರ ವಾಹನ, 49 ಆಟೋ, 90 ಕಾರು ಸೀಜ್​​ ಮಾಡಿದ್ದಾರೆ.

ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಪಾಡದವರಿಗೆ ದಂಡದ ಬಿಸಿ; ಬೆಂಗಳೂರಿನಲ್ಲಿ ₹4.63 ಲಕ್ಷ ದಂಡ ವಸೂಲಿ
ನೈಟ್​ ಕರ್ಫ್ಯೂ ವೇಳೆ ಪೊಲೀಸರು ರಸ್ತೆಗೆ ಬ್ಯಾರಿಕೇಡ್ ಹಾಕುತ್ತಿದ್ದಾರೆ
Follow us on

ಬೆಂಗಳೂರು: ಮಾಸ್ಕ್​ ಧರಿಸದೇ, ಅಂತರ ಕಾಪಾಡದವರಿಗೆ, ಕೊರೊನಾ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸದವರಿಗೆ ದಂಡದ ಬಿಸಿ ಮುಟ್ಟಿದೆ. ಇಂದು (ಜನವರಿ 8) ಮಾಸ್ಕ್​ ಧರಿಸದ 1,855 ಪ್ರಕರಣಗಳು ದಾಖಲು ಮಾಡಲಾಗಿದೆ. 1,855 ಕೇಸ್​ ದಾಖಲಿಸಿ ₹4.63 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಅಂತರ ಕಾಯ್ದುಕೊಳ್ಳದ ಹಿನ್ನೆಲೆ 19 ಪ್ರಕರಣ ದಾಖಲು ಮಾಡಲಾಗಿದೆ. 19 ಕೇಸ್​ ದಾಖಲಿಸಿ 4,750 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ನೈಟ್​​ಕರ್ಫ್ಯೂ ಉಲ್ಲಂಘಿಸಿ ಅನಗತ್ಯವಾಗಿ ಓಡಾಟ ಹಿನ್ನೆಲೆ,, ನೈಟ್​ ಕರ್ಫ್ಯೂ ಶುರುವಾದಾಗಿನಿಂದ 1338 ವಾಹನ ಜಪ್ತಿ ಮಾಡಲಾಗಿದೆ. ಇದುವರೆಗೆ 1,338 ವಾಹನ ಜಪ್ತಿ ಮಾಡಿದ ಪೊಲೀಸರು, 1199 ದ್ವಿಚಕ್ರ ವಾಹನ, 49 ಆಟೋ, 90 ಕಾರು ಸೀಜ್​​ ಮಾಡಿದ್ದಾರೆ. ವೀಕೆಂಡ್​ ಕರ್ಫ್ಯೂ ಉಲ್ಲಂಘಿಸಿ ಅನಗತ್ಯ ಸಂಚಾರ ಹಿನ್ನೆಲೆ ಬೆಂಗಳೂರು ನಗರದಲ್ಲಿ ಇಂದು 829 ವಾಹನಗಳು ಸೀಜ್ ಆಗಿವೆ. 755 ದ್ವಿಚಕ್ರ ವಾಹನ, 25 ಆಟೋ, 49 ಕಾರುಗಳು ಜಪ್ತಿ ಮಾಡಲಾಗಿದೆ. ಚಿತ್ರದುರ್ಗದಲ್ಲಿ ವೀಕೆಂಡ್​ ಕರ್ಫ್ಯೂ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗಿದೆ. ಜಿಲ್ಲೆಯಲ್ಲಿ 175 ಕೇಸ್​ ದಾಖಲಿಸಿ ₹17,500 ದಂಡ ವಸೂಲಿ ಮಾಡಲಾಗಿದೆ.

ರಾಜ್ಯದಲ್ಲಿ ಕೊವಿಡ್ ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿ ಮನೀಶ್ ಮೌದ್ಗಿಲ್ ಮತ್ತು ತಂಡಕ್ಕೆ ಇ-ಗವರ್ನೆನ್ಸ್​​ ಪ್ರಶಸ್ತಿ ಲಭಿಸಿದೆ. ಮೌದ್ಗಿಲ್-ರಾಜ್ಯ ಕೊವಿಡ್ ವಾರ್ ರೂಮ್​​​ ಮುಖ್ಯಸ್ಥ ಆಗಿದ್ದಾರೆ. ಕೊವಿಡ್ ನಿರ್ವಹಣೆಯಲ್ಲಿ ತಾಂತ್ರಿಕತೆ ಬಳಕೆ ಮತ್ತು ಡಿಜಿಟಲೀಕರಣಕ್ಕೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಪ್ರಶಸ್ತಿ ಲಭಿಸಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್​ರಿಂದ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಕಳೆದ 1 ವಾರದಲ್ಲಿ ಬೆಂಗಳೂರಿನಲ್ಲಿ 60 ಪೊಲೀಸರಿಗೆ ಕೊರೊನಾ
ಕಳೆದ 1 ವಾರದಲ್ಲಿ ಬೆಂಗಳೂರಿನಲ್ಲಿ 60 ಪೊಲೀಸರಿಗೆ ಕೊರೊನಾ ದೃಢವಾಗಿದೆ. ಇಂದು ಒಂದೇ 30 ಪೊಲೀಸ್​ ಸಿಬ್ಬಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಇದುವರೆಗೆ 90 ಪೊಲೀಸ್​ ಸಿಬ್ಬಂದಿಗೆ ಕೊರೊನಾ ಪಾಸಿಟಿವ್​​ ಆಗಿದೆ.

ಇದನ್ನೂ ಓದಿ: Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 8,906 ಜನರಿಗೆ ಕೊರೊನಾ ದೃಢ; 4 ಮಂದಿ ಸಾವು

ಇದನ್ನೂ ಓದಿ: Weekend Curfew Updates: ಬೆಂಗಳೂರಿನ ರಸ್ತೆಗಳಲ್ಲಿ ಡೆಲಿವರಿ ಬಾಯ್ಸ್ ಓಡಾಟ; ಸಿಟಿ ರೌಂಡ್ಸ್​ಗೆ ಮುಂದಾದ ಆರಗ ಜ್ಞಾನೇಂದ್ರ

Published On - 10:33 pm, Sat, 8 January 22