ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳ ವಿರುದ್ಧದ ಅವಿಶ್ವಾಸ ಮಂಡನೆ ಮಾಡಿರುವುದು ಕಾನೂನಾತ್ಮಕವಾಗಿಲ್ಲ ಎಂದು ಸಂಘದ ಅಧ್ಯಕ್ಷ ಸಿಎಂ ಬಾಲಕೃಷ್ಣ (CN Balakrishna) ಆರೋಪಿಸಿದ್ದಾರೆ. ನಮ್ಮ ನೋಟಿಸ್ಗೆ ಸರಿಯಾದ ಉತ್ತರ ನೀಡಿಲ್ಲ. ಕೆಂಪೇಗೌಡ ಭವನಕ್ಕೆ ಬಂದು ಸಭೆ ನಡೆಸಲು ಒತ್ತಾಯ ಮಾಡಿದ್ದಾರೆ. ಅವರು ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಾರೆ. ಅವರಿಗೆ ತಿಳುವಳಿಕೆ ಮೂಲಕ ಪತ್ರದ ಮುಖೇನ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.
ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳ ವಿರುದ್ಧ 21 ಸಹಿಗಳು ಆಗಿವೆ. ಈ ಬಗ್ಗೆ ಮೇ 21 ರಂದು ಅವಿಶ್ವಾಸ ಮಂಡನೆ ಮಾಡಿ ಪತ್ರ ನೀಡಿದ್ದಾರೆ. ಅದಾದ 7 ದಿನಗಳ ಒಳಗೆ ನಾವು ಪತ್ರ ನೀಡಬೇಕಿತ್ತು. ಆ ವೇಳೆ ಪದಾಧಿಕಾರಿ ಒಬ್ಬರು ರಾಜೀನಾಮೆ ನೀಡಿದರು. ನಮ್ಮ ಆಡಳಿತ ಮಂಡಳಿಯಲ್ಲಿ ಅನೇಕ ಗೌರ್ನಿಂಗ್ ಕೌನ್ಸಿಲ್ ಇವೆ. ಇಲ್ಲಿ ಯಾರೂ ಕೂಡ ರಾಜೀನಾಮೆ ಪತ್ರ ಸಲ್ಲಿಸದೆ ಅವಿಶ್ವಾಸ ಮಂಡಿಸಿದ್ದಾರೆ. ಈ ಬಗ್ಗೆ ನೀಡಿರುವ ನೊಟೀಸ್‌ಗಳಿಗೆ ಅವರು ಉತ್ತರ ನೀಡಿಲ್ಲ ಎಂದರು.
ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾನೂನು ರದ್ದತಿ ಸುಳಿವು; ರಾಜ್ಯದಾದ್ಯಂತ ಮುಂದುವರಿದ ಬಿಜೆಪಿ ಪ್ರತಿಭಟನೆ
ಜೂನ್ 7 ರಂದು ಕೋ ಆಪರೇಟಿವ್ ಸೊಸೈಟಿ ರಿಜಿಸ್ಟ್ರಾರ್ ಅವರಿಗೆ ಅಧೀಕೃತವಾಗಿ ತಿಳಿಸಿದ್ದೆವು. ಈ ದಿನ ಏಕಾಏಕಿ ಕೆಂಪೇಗೌಡ ಭವನಕ್ಕೆ ಬಂದು ಸಭೆ ನಡೆಸಲು ಒತ್ತಾಯ ಮಾಡಿದ್ದಾರೆ. ಅವರು ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಾರೆ. ಅವರಿಗೆ ತಿಳುವಳಿಕೆ ಮೂಲಕ ಪತ್ರದ ಮುಖೇನ ತಿಳಿಸಿದ್ದೇವೆ. ಅವರಿಗೆ ನೀಡಿರುವ ನೊಟೀಸ್‌ಗೆ ಉತ್ತರ ನೀಡಿಲ್ಲ ಅಂತ ಸಹಕಾರಿ ಇಲಾಖೆಗೆ ತಿಳಿಸಿದ್ದೇವೆ ಎಂದು ಹೇಳಿದರು.
ನಾವು ಸಹಕಾರ ಇಲಾಖೆಯು ಸೂಚಿಸುವಂತೆ ಕಾನೂನಾತ್ಮಕವಾಗಿ ನಡೆದುಕೊಳ್ಳುತ್ತೇವೆ. ಅವರು ನಡೆಸಿರುವ ಸಭೆ ಬೈ ಲಾ ವಿರುದ್ಧವಾಗಿದೆ. ಅವಿಶ್ವಾಸ ಮಂಡನೆಗೆ 24 ನಿರ್ದೇಶಕರು ಸಭೆಯಲ್ಲಿ ಭಾಗಿಯಾಗಬೇಕು. ಆದರೇ ಸಭೆಯಲ್ಲಿ 19 ಜನ ಮಾತ್ರ ಇದ್ದರು. ಇದು ಕಾನೂನಾತ್ಮಕವಾಗಿಲ್ಲ ಎಂದು ಬಾಲಕೃಷ್ಣ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ