ಬೆಳಗ್ಗೆ 8.30ರ ನಂತರ ಶಾಲಾ ವಾಹನ ಸಂಚಾರ ಬಂದ್: ರಾಜಧಾನಿ ಟ್ರಾಫಿಕ್ ಸಮಸ್ಯೆಗೆ ಮತ್ತೊಂದು ಸಲೀಂ ಅಸ್ತ್ರ

| Updated By: ಸಾಧು ಶ್ರೀನಾಥ್​

Updated on: Dec 05, 2022 | 11:25 AM

ಬೆಳಗ್ಗೆ 8.30 ರ ನಂತರ ಯಾವುದೇ ಶಾಲಾ ವಾಹನಗಳನ್ನು ಶಾಲೆಗಳ ಬಳಿ ನಿಲ್ಲಿಸಲು ಅನುಮತಿ ಇಲ್ಲ.  ನಿಲ್ಲಿಸಿದರೆ ದಂಡವನ್ನು ಪಾವತಿಸಬೇಕಾಗುತ್ತದೆ.

ಬೆಳಗ್ಗೆ 8.30ರ ನಂತರ ಶಾಲಾ ವಾಹನ ಸಂಚಾರ ಬಂದ್: ರಾಜಧಾನಿ  ಟ್ರಾಫಿಕ್ ಸಮಸ್ಯೆಗೆ ಮತ್ತೊಂದು ಸಲೀಂ ಅಸ್ತ್ರ
ಟ್ರಾಫಿಕ್ ವಿಭಾಗದ ವಿಶೇಷ ಕಮಿಷನರ್ ಎಂ.ಎ.ಸಲೀಂ
Follow us on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಾದ ಟ್ರಾಫಿಕ್ ಸಮಸ್ಯೆಯನ್ನು(Bengaluru Traffic) ನಿಯಂತ್ರಿಸಲು ಪೊಲೀಸ್ ಇಲಾಖೆಯು((Bengaluru Traffic Police) ಮತ್ತೊಂದು ಹೊಸ ಬದಲಾವಣೆಯನ್ನು ತಂದಿದೆ. ಬೆಳಿಗ್ಗೆ 8.30 ರ ನಂತರ ಶಾಲಾ ಬಸ್‌ಗಳ ಸಂಚಾರವನ್ನು ನಿಷೇಧಿಸಲು ನಿರ್ಧರಿಸಿದೆ(School Bus). ಈ ಮೂಲಕ ನಗರದಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಬೆಳಗ್ಗೆ 8.15ರ ನಂತರ ಶಾಲೆಗಳ ಸಮೀಪವೇ ವಿದ್ಯಾರ್ಥಿಗಳನ್ನು ಇಳಿಸಿ ಮತ್ತು ಅಲ್ಲೇ ಪಾರ್ಕಿಂಗ್ ಮಾಡುವ ಶಾಲಾ ಬಸ್‌ಗಳಿಗೆ ದಂಡ ವಿಧಿಸುವ ಮೂಲಕ ಹೊಸ ಕಾನೂನನ್ನು ಜಾರಿಗೆ ತರಲು ನಗರದ ನೂತನ ಸಂಚಾರ ಆಯುಕ್ತ ಐಪಿಎಸ್ ಅಧಿಕಾರಿ ಎಂ.ಎ.ಸಲೀಂ(Bengaluru New Traffic Commissioner MA Saleem) ನಿರ್ದೇಶನ ನೀಡಿದ್ದಾರೆ.

ಬೆಳಗ್ಗೆ 8.30 ರ ನಂತರ ಯಾವುದೇ ಶಾಲಾ ವಾಹನಗಳನ್ನು ಶಾಲೆಗಳ ಬಳಿ ನಿಲ್ಲಿಸಲು ಅನುಮತಿ ಇಲ್ಲ.  ನಿಲ್ಲಿಸಿದರೆ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಸಂಚಾರ ಪೊಲೀಸ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತರಗತಿಗಳನ್ನು ಬೇಗ ಆರಂಭಿಸುವಂತೆ ಶಾಲಾ ಆಡಳಿತ ಮಂಡಳಿಗೆ ಈಗಾಗಲೇ ಸೂಚನೆ ನೀಡಿದ್ದೇವೆ. ಮಕ್ಕಳು ಸುರಕ್ಷಿತವಾಗಿ ಶಾಲೆಗೆ ಹೋಗುವುದನ್ನು ಖಚಿತಪಡಿಸಿಕೊಳ್ಳಲು ಸಂಚಾರ ಪೊಲೀಸ್ ಇಲಾಖೆಯು “ಮೀಸಲಾದ ಕ್ಯಾರೇಜ್‌ವೇ(Dedicated Carriageway)” ಮತ್ತು “ಸುರಕ್ಷಿತ ಮಾರ್ಗ(Safe Passage Way)” ವನ್ನು ಜಾರಿಗೊಳಿಸುತ್ತದೆ ಎಂದು ಎಂ.ಎ.ಸಲೀಂ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್ ನಿಯಂತ್ರಣಗೊಳಿಸಲು ಕೆಲ ಬದಲಾವಣೆಗೆ ಮುಂದಾದ ಬೆಂಗಳೂರು ಟ್ರಾಫಿಕ್ ಪೊಲೀಸರು

ಈ ಬಗ್ಗೆ ಮಾಹಿತಿ ನೀಡಿದ ಮತ್ತೊಬ್ಬ ಟ್ರಾಫಿಕ್ ಪೊಲೀಸ್, ಮಕ್ಕಳನ್ನು ಶಾಲೆಗೆ ಪಿಕ್ ಮತ್ತು ಡ್ರಾಪ್ ಮಾಡಲು ಫೋಷಕರಿಗೆ ಪ್ರವೇಶ ಮತ್ತು ನಿರ್ಗಮನವನ್ನು ನಿಯೋಜಿಸಲಾಗುವುದು. ಆ ಮೀಸಲಾದ ಜಾಗದಿಂದಲೇ ಪೋಷಕರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವುದು, ಬರುವುದು ಮಾಡಬಹುದು. ಪೋಷಕರಿಗೆ ನೀಡಲಾದ ಎಂಟ್ರಿ ಪಾಯಿಟ್​ನಿಂದ ವಾಹನ ಚಲಾಯಿಸಿ ಮಕ್ಕಳನ್ನು ಆಟದ ಮೈದಾನದಲ್ಲಿ ಬಿಟ್ಟು ಮತ್ತೆ ಎಗ್ಸಿಟ್ ಪಾಯಿಟ್​ಗೆ ಹಿಂತಿರುಗಬೇಕು. ಇದರಿಂದ ರಸ್ತೆಯಲ್ಲಿ ಪೋಷಕರ ವಾಹನಗಳು ನಿಂತು ಟ್ರಾಫಿಕ್ ಉಂಟಾಗುತ್ತಿದ್ದ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ ಎಂದರು.

ಈ ಹಿಂದೆ ಹಲವಾರು ಬಾರಿ ಶಾಲಾ ಬಸ್‌ಗಳು ವಿದ್ಯಾರ್ಥಿಗಳನ್ನು ಮನೆಗೆ ಬಿಡುವವರೆಗೆ ದಿನವಿಡೀ ಆಯಾ ಶಾಲೆಗಳ ಹೊರಗೆ ಪಾರ್ಕ್ ಮಾಡುತ್ತವೆ ಮತ್ತು ಆ ಮೂಲಕ ರಸ್ತೆಯ ಒಂದು ಭಾಗವನ್ನು ಶಾಲಾ ವಾಹನವೇ ಆಕ್ರಮಿಸಿಕೊಂಡಿರುತ್ತದೆ. ಇದರಿಂದ ಪ್ರಯಾಣಿಕರಿಗೆ, ಬೇರೆ ವಾಹನ ಸವಾರರಿಗೆ ಕಿರಿಕಿರಿಯಾಗುತ್ತದೆ. ರೆಸಿಡೆನ್ಸಿ ರಸ್ತೆ, ಬ್ರಿಗೇಡ್‌ ರಸ್ತೆಯಿಂದ ರಿಚ್‌ಮಂಡ್‌ ರಸ್ತೆಯ ಮೇಲ್ಸೇತುವೆ, ಎಚ್‌ಎಸ್‌ಆರ್‌ ಲೇಔಟ್‌ ಸೇರಿದಂತೆ ಇತರೆ ಪ್ರದೇಶಗಳನ್ನು ಈ ರೀತಿಯ ಸಮಸ್ಯೆಗಳ ಪ್ರದೇಶವೆಂದು ಗುರುತಿಸಲಾಗಿದೆ.

ಪ್ರಸ್ತುತ ಶಾಲೆಗಳಲ್ಲಿ ಸುರಕ್ಷಿತ ಮಾರ್ಗಗಳನ್ನು ಪುನಃಸ್ಥಾಪಿಸಲಾಗುತ್ತಿದೆ ಮತ್ತು ಈ ಮಾದರಿಯು ಈ ಹಿಂದೆ ಅಸ್ತಿತ್ವದಲ್ಲಿದ್ದರೂ, ಅದನ್ನು ಕಟ್ಟುನಿಟ್ಟಾಗಿ ಅನ್ವಯಿಸಲಾಗಿಲ್ಲ ಎಂದು ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಾಲಾಗಳು ಬಸ್‌ ಮತ್ತು ವ್ಯಾನ್‌ಗಳನ್ನು ತಮ್ಮ ಮೈದಾನದಲ್ಲಿ ನಿಲ್ಲಿಸುವಂತೆ ಟ್ರಾಫಿಕ್ ಪೊಲೀಸರು ಕಟ್ಟುನಿಟ್ಟಾಗಿ ಸೂಚನೆಗಳನ್ನು ನೀಡಿದ್ದಾರೆ.

Published On - 10:10 am, Mon, 5 December 22