AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಾಫಿಕ್ ನಿಯಂತ್ರಣಗೊಳಿಸಲು ಕೆಲ ಬದಲಾವಣೆಗೆ ಮುಂದಾದ ಬೆಂಗಳೂರು ಟ್ರಾಫಿಕ್ ಪೊಲೀಸರು

ಬೆಂಗಳೂರಿನ ಟ್ರಾಫಿಕ್ ನಿಯಂತ್ರಣಗೊಳಿಸಲು ಕೆಲ ಬದಲಾವಣೆಗಳನ್ನು ಮಾಡಲು ಸ್ಪೆಷಲ್ ಕಮಿಷನರ್ ಮುಂದಾಗಿದ್ದಾರೆ. ಹೆಬ್ಬಾಳದ ಫ್ಲೈಓವರ್ ಬಳಿ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಕಳೆದ ಒಂದು ವಾರದಿಂದ ಗೂಡ್ಸ್ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಟ್ರಾಫಿಕ್ ನಿಯಂತ್ರಣಗೊಳಿಸಲು ಕೆಲ ಬದಲಾವಣೆಗೆ ಮುಂದಾದ ಬೆಂಗಳೂರು ಟ್ರಾಫಿಕ್ ಪೊಲೀಸರು
ಬೆಂಗಳೂರಿನ ಟ್ರಾಫಿಕ್ ನಿಯಂತ್ರಣಗೊಳಿಸಲು ಕೆಲ ಬದಲಾವಣೆಗೆ ಮುಂದಾಗಿರುವ ನಗರ ಸಂಚಾರ ಪೊಲೀಸರು Image Credit source: FILE PHOTO
TV9 Web
| Edited By: Rakesh Nayak Manchi|

Updated on:Nov 25, 2022 | 2:42 PM

Share

ಬೆಂಗಳೂರು: ನಗರದಲ್ಲಿ ಟ್ರಾಫಿಕ್ ನಿಯಂತ್ರಣ (Bengaluru traffic)ಗೊಳಿಸಲು ಕೆಲ ಬದಲಾವಣೆಗೆ ಮುಂದಾಗಿರುವ ನಗರ ಸಂಚಾರ ಪೊಲೀಸ್ ವಿಭಾಗವು ಹೆವಿ ಮತ್ತು ಲಘು ಗೂಡ್ಸ್ ವಾಹನಗಳ ನಿರ್ಬಂಧ ವಿಧಿಸಲು ಮುಂದಾಗಿದೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ವಿಶೇಷ ಆಯುಕ್ತ ಡಾ.ಎಂ.ಎ. ಸಲೀಂ (Dr.M.A.Salim) ಅವರು, ಹೆಬ್ಬಾಳದ ಫ್ಲೈಓವರ್ ಬಳಿ ಟ್ರಾಫಿಕ್ (Hebbal Traffic) ದಟ್ಟಣೆ ಹಿನ್ನಲೆ ಕಳೆದ ಒಂದು ವಾರದಿಂದ ಗೂಡ್ಸ್ ವಾಹನಗಳ ನಿರ್ಬಂಧ ವಿಧಿಸಲಾಗಿದೆ. ಹೆವಿ ಮತ್ತು ಲಘು ಗೂಡ್ಸ್ ವಾಹನಗಳ ನಿರ್ಬಂಧದಿಂದ ಟ್ರಾಫಿಕ್ ಸುಧಾರಣೆಯಾಗಲಿದೆ ಎಂದರು.

ಇದನ್ನೂ ಓದಿ: ಓಲಾ, ಊಬರ್​ ಆಟೋಗಳಿಗೆ ದರ ನಿಗದಿ ಪಡಿಸಿದ ಸಾರಿಗೆ ಇಲಾಖೆ, ಪ್ರಯಾಣಿಕರೇ ಗಮನಿಸಿ

ಸಂಚಾರ ದಟ್ಟಣೆಯಿಂದ ವಾಹನ ಸವಾರರ ಸುಮಾರು 20 ನಿಮಿಷ ವ್ಯರ್ಥವಾಗುತ್ತಿತ್ತು. ಸಮಯ ವ್ಯರ್ಥವಾಗದಂತೆ ನೋಡಿಕೊಳ್ಳಲು ಹಾಗೂ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಹೆವಿ ಮತ್ತು ಲಘು ಗೂಡ್ಸ್ ವಾಹನಗಳನ್ನು ನಿರ್ಬಂಧಿಸಲಾಗಿದೆ. ಈ ಕ್ರಮದಿಂದಾಗಿ ಶೇಕಡಾ 25ರಷ್ಟು ಸಂಚಾರ ದಟ್ಟಣೆ ಕಡಿಮೆಯಾಗಿದೆ. ಈಗ ವ್ಯರ್ಥವಾಗುತ್ತಿದ್ದ 20 ನಿಮಿಷವು ಏಳು ನಿಮಿಷಕ್ಕೆ ಇಳಿದಿದೆ. ಅದನ್ನ ಇನ್ನೂ ಕಡಿಮೆ ಮಾಡಲು ಪ್ರಯತ್ನ ಮಾಡಲಾಗುತ್ತದೆ ಎಂದು ಸಲೀಂ ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಗೆ ಬಂದಿದ್ದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರುಗೆ ಹೃದಯಘಾತ, ಆಸ್ಪತ್ರೆಯಲ್ಲಿ ನಿಧನ

ಹೆಬ್ಬಾಳ ರೀತಿಯಲ್ಲಿ ನಗರದ ಬೇರೆ ಭಾಗಗಳ ಟ್ರಾಫಿಕ್ ದಟ್ಟಣೆ ಬಗ್ಗೆ ಅಧ್ಯಯನ ಮಾಡಲಾಗುವುದು. ಕೆಲವು ಟ್ರಾಫಿಕ್ ಮ್ಯಾನೇಜ್ಮೆಂಟ್‌ ಸಂಬಂಧ ಸಮಸ್ಯೆ ಇದೆ. ಇನ್ನೂ ಕೆಲವು ಇಂಜಿನಿಯರಿಂಗ್ ಸಂಬಂಧಿತ ಸಮಸ್ಯೆ ಇದೆ. ಅದನ್ನ ಸರಿಪಡಿಸುವ ಕೆಲಸಕ್ಕೆ ಚರ್ಚೆ ನಡೆಸಲಾಗಿದೆ. ನಗರದಲ್ಲಿ ಅಲ್ಲಿನ ಸ್ಥಳೀಯ ಟ್ರಾಫಿಕ್ ಅಧ್ಯಯನ ಮಾಡಿ ಅಲ್ಲಿ ಬದಲಾವಣೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಮಾನ ನಿಲ್ದಾಣ ಮತ್ತು ನಗರದ ನಡುವಿನ ಪ್ರಯಾಣವನ್ನು ಸುಲಭಗೊಳಿಸಲು ಸಾದಹಳ್ಳಿ ಜಂಕ್ಷನ್​ನಿಂದ ಹೆಬ್ಬಾಳ ಫ್ಲೈಓವರ್ (hebbal flyover) ವರೆಗೆ ಪೀಕ್ ಅವರ್​ನಲ್ಲಿ ಭಾರೀ (ಸರಕು ಸಾರಿಗೆ) ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶಿಸಲಾಗಿತ್ತು.  ಪ್ರತಿದಿನ ಬೆಳಗ್ಗೆ 8.30 ರಿಂದ ಬೆಳಗ್ಗೆ 10.30ರ ವರೆಗೆ (ಎರಡು ಗಂಟೆ) ಭಾರೀ (ಸರಕು ಸಾರಿಗೆ) ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಈ ನಿಯಮ 18/11/2022ರಿಂದ ಒಂದು ತಿಂಗಳ ವರೆಗೆ ಜಾರಿಯಲ್ಲಿರುತ್ತದೆ. ಬೆಂಗಳೂರು ನಗರದ ರಾಷ್ಟ್ರೀಯ ಹೆದ್ದಾರಿ-7ನಲ್ಲಿ ಪ್ರತಿದಿನ ಲಕ್ಷಾಂತರ ಸರಕು ಸಾರಿಗೆ ವಾನಗಳು ಸಂಚರಿಸುತ್ತಿದ್ದು, ಇದರಿಂದಾಗಿ ದೈನಂದಿನ ಪೀಕ್ ಅವರ್​ನಲ್ಲಿ ಸಂಚಾರದಲ್ಲಿ ವ್ಯತ್ಯಯವಾಗುತ್ತಿದೆ. ಇದನ್ನು ಗಮನಿಸಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಡಾ.ಎಂ.ಎ.ಸಲೀಂ ಆದೇಶದಲ್ಲಿ ತಿಳಿಸಿದ್ದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:34 pm, Fri, 25 November 22

Follow Us
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು