AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Odisha Train Accident: ಕರ್ನಾಟಕದ ಪ್ರಯಾಣಿಕರು ಸೇಫ್​​, ಘಟನಾ ಸ್ಥಳಕ್ಕೆ ರಾಜ್ಯ ರೈಲ್ವೆ ಇಲಾಖೆ ಅಧಿಕಾರಿಗಳು ಭೇಟಿ

ಒಡಿಶಾದ ಬಾಲಸೋರ್​ ಜಿಲ್ಲೆ ಬಹನಾಗ ಬಳಿ ಸಂಭವಿಸಿದ ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲಿನಲ್ಲಿದ್ದ ಕರ್ನಾಟಕದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ರೈಲ್ವೆ ಡಿಐಜಿ ಶಶಿಕುಮಾರ್ ಹೇಳಿದ್ದಾರೆ.

ವಿವೇಕ ಬಿರಾದಾರ
|

Updated on: Jun 03, 2023 | 8:56 AM

Share

ಬೆಂಗಳೂರು: ಒಡಿಶಾದ ಬಾಲಸೋರ್ (Balasore)​ ಜಿಲ್ಲೆ ಬಹನಾಗ ಬಳಿ ಸಂಭವಿಸಿದ ರೈಲು ಅಪಘಾತ (Odish Train Accident) ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲಿನಲ್ಲಿದ್ದ ಕರ್ನಾಟಕದ (Karnataka) ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಕರ್ನಾಟಕದಿಂದ ಹೋಗಿರುವ ರೈಲಿಗೂ ಸಹ ಹಾನಿಯಾಗಿದೆ. 23 ರೈಲ್ವೆ ಬೋಗಿಗಳ ಪೈಕಿ 3 ಬೋಗಿಗೆ ಮಾತ್ರ ಹಾನಿಯಾಗಿದೆ. ಹಾನಿಯಾದ ಬೋಗಿಯಲ್ಲಿ ಕರ್ನಾಟಕದವರು ಇದ್ದ ಮಾಹಿತಿ ಇಲ್ಲ. ನಿನ್ನೆಯಿಂದಲೂ ರೈಲ್ವೆ ಇಲಾಖೆ ಅಧಿಕಾರಿಗಳು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ರೈಲ್ವೆ ಡಿಐಜಿ ಶಶಿಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಟಿವಿ9 ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ನಾಲ್ಕು ಕಡೆ ಹೆಲ್ಪ್​​ಲೈನ್​ ಪ್ರಾರಂಭ ಮಾಡಿದ್ದೇವೆ. ರಾಜ್ಯದ ಪ್ರಯಾಣಿಕರು ಮೃತಪಟ್ಟ, ಗಾಯಗೊಂಡಿರುವ ಬಗ್ಗೆ ಮಾಹಿತಿ ಇಲ್ಲ. ಕರ್ನಾಟಕದ ಪ್ರಯಾಣಿಕರು ಇದ್ದ ಬೋಗಿಗೆ ಯಾವ ತೊಂದರೆಯಾಗಿಲ್ಲ. ಕರ್ನಾಟಕದ ಯಾವ ಪ್ರಯಾಣಿಕರಿಗೆ ಏನು ಆಗಿಲ್ಲ ಘಟನಾ ಸ್ಥಳಕ್ಕೆ ರಾಜ್ಯದಿಂದ ಡಿವೈಎಸ್​ಪಿ, ಅಧಿಕಾರಿಗಳನ್ನು ಕಳಿಸಲಾಗುತ್ತದೆ ಎಂದರು.

ಇದನ್ನೂ ಓದಿ: ಬೆಂಗಳೂರಿನಿಂದ ಹೌರಾ ಎಕ್ಸ್​ಪ್ರೆಸ್​ನಲ್ಲಿ ಪ್ರಯಾಣಿಸುತ್ತಿದ್ದ110 ಕನ್ನಡಿಗರು ಪಾರಾಗಿದ್ದೇಗೆ?

ನಾಲ್ಕು ಹೆಲ್ಪ್ ಡೆಸ್ಕ್ ಪ್ರಾರಂಭ ಮಾಡಿದ್ದೇವೆ ಆದರೆ ಯಾವ ಕರೆಯೂ ಬಂದಿಲ್ಲ. ಟಿಕೆಟ್ ಹಣ ರೀಫಂಡ್ ಮಾಡಲಾಗುತ್ತಿದೆ. ಸಾವಿನ ಬಗ್ಗೆ ಸುಳ್ಳು ಸುದ್ದಿ ಬೇಡ. ಯಾರು ಕೂಡ ಇದುವರೆಗೆ ಸಾವನಪ್ಪಿರವ ಮಾಹಿತಿ ಇಲ್ಲ. ಭಾರತದ ನಾರ್ತ್ ಈಸ್ಟ್ ಭಾಗದ ಒಂದಷ್ಟು ಜನರು ಮೃತರಾಗಿದ್ದ ಬಗ್ಗೆ ಮಾಹಿತಿ ಇದೆ ಎಂದು ಮಾಹಿತಿ ನೀಡಿದರು. ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 280ಕ್ಕೆ ಏರಿಕೆಯಾಗಿದ್ದು, 900ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ