ಒಡಿಶಾ ರೈಲು ದುರಂತ; ಈಶಾನ್ಯ ರಾಜ್ಯಗಳ ಕಡೆ ಹೊರಟಿದ್ದ ಪ್ರಯಾಣಿಕರಿಗೆ ಬಿಬಿಎಂಪಿಯಿಂದ ತಿಂಡಿ ವ್ಯವಸ್ಥೆ, ವೈದ್ಯಕೀಯ ನೆರವು

ಒಡಿಶಾದ ಬಾಲಸೋರ್​​ ಜಿಲ್ಲೆಯಲ್ಲಿ ರೈಲು ದುರಂತ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಈಶಾನ್ಯ ರಾಜ್ಯಗಳ ಕಡೆ ಹೋಗುವ ರೈಲುಗಳನ್ನು ತಡೆಹಿಡಿಯಲಾಗಿದ್ದು, ಪ್ರಯಾಣಿಕರು ರೈಲು ನಿಲ್ದಾಣದಲ್ಲೇ ಇದ್ದಾರೆ. ಇದೀಗ ಅವರಿಗೆ ಬಿಬಿಎಂಪಿ, ಕಾರ್ಮಿಕ ಇಲಾಖೆ ಬೆಳಿಗ್ಗೆ ತಿಂಡಿ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ.

ಒಡಿಶಾ ರೈಲು ದುರಂತ; ಈಶಾನ್ಯ ರಾಜ್ಯಗಳ ಕಡೆ ಹೊರಟಿದ್ದ ಪ್ರಯಾಣಿಕರಿಗೆ ಬಿಬಿಎಂಪಿಯಿಂದ ತಿಂಡಿ ವ್ಯವಸ್ಥೆ, ವೈದ್ಯಕೀಯ ನೆರವು
ಪ್ರಯಾಣಿಕರಿಗೆ ಊಟದ ವ್ಯವಸ್ಥೆ
Follow us
ಕಿರಣ್ ಹನುಮಂತ್​ ಮಾದಾರ್
|

Updated on:Jun 04, 2023 | 11:11 AM

ಬೆಂಗಳೂರು: ಒಡಿಶಾ ಭೀಕರ ರೈಲು ದುರಂತಕ್ಕೆ ಸಂಬಂಧಿಸಿದಂತೆ 288 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಅದರಂತೆ 56 ಪ್ರಯಾಣಕರ ಸ್ಥಿತಿ ಚಿಂತಾಜನಕವಾಗಿದೆ. ಈ ಕಾರಣಕ್ಕೆ ನಿನ್ನೆ(ಜೂ.3)ಯಿಂದ ಈಶಾನ್ಯ ರಾಜ್ಯಗಳ ಕಡೆ ಹೋಗುವ ರೈಲುಗಳನ್ನು ತಡೆಹಿಡಿಯಲಾಗಿದ್ದು, ಬೈಯ್ಯಪ್ಪನಹಳ್ಳಿ ಎಸ್ಎಂವಿಟಿ(SMVT) ನಿಲ್ದಾಣದಲ್ಲಿ ಪ್ರಯಾಣಿಕರು ರೈಲು ನಿಲ್ದಾಣದಲ್ಲೆ ಇದ್ದಾರೆ. ಇದನ್ನು ಕಂಡ ಬಿಬಿಎಂಪಿ(BBMP) ಹಾಗೂ ಕಾರ್ಮಿಕ ಇಲಾಖೆ(Labour Department) ಪ್ರಯಾಣಿಕರಿಗೆ ತಿಂಡಿ ವಿತರಣೆ ಮಾಡಿದ್ದಾರೆ.

ಇದೇ ವೇಳೆ ಬಿಬಿಎಂಪಿ ಪೂರ್ವ ವಲಯ ಜಂಟಿ ಆಯುಕ್ತೆ ಪಲ್ಲವಿ ಅವರು ಮಾತನಾಡಿ ‘ಬಿಬಿಎಂಪಿಯಿಂದ 1200 ಜನರಿಗೆ, ಎನ್​ಜಿಓ ಸಂಸ್ಥೆಯಿಂದ 1500 ಜನರಿಗೆ ತಿಂಡಿ ವ್ಯವಸ್ಥೆ ಮಾಡಲಾಗಿದೆ. ನಿನ್ನೆಯಿಂದ ರೈಲು ನಿಲ್ದಾಣದಲ್ಲಿ ಇರುವ ಪ್ರಯಾಣಿಕರಿಗೆ ತಿಂಡಿ ನೀಡಲಾಗುತ್ತಿದೆ. ಜೊತೆಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಮೆಡಿಕಲ್ ಚೆಕಪ್​ಗೂ ವ್ಯವಸ್ಥೆ ಮಾಡಲಾಗಿದೆ. ಪಕ್ಕದಲ್ಲೆ ಬಿಬಿಎಂಪಿ ಪಿಹೆಚ್​ಸಿ ಕೂಡ ಇದೆ. ಮೊಬೈಲ್ ಟಾಯ್ಲೆಟ್ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನು ಮಧ್ಯಾಹ್ನದ ನಂತರ ರೈಲು ಸಂಚಾರ ಆರಂಭ ಆಗುತ್ತೆ ಎಂದು ಸ್ಟೇಷನ್ ಮಾಸ್ಟರ್ ಹೇಳಿದ್ದಾರೆ. ಅದ್ದರಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದರು.

ಇದನ್ನೂ ಓದಿ:ಒಡಿಶಾ ರೈಲು ದುರಂತ: ಹೌರಾದಲ್ಲಿ ಸಿಲುಕಿ ಪರದಾಡಿದ ಪರಿಸ್ಥಿತಿ ವಿವರಿಸಿದ ಕರ್ನಾಟಕದ ವಿದ್ಯಾರ್ಥಿನಿ

ಒಡಿಶಾದ ರೈಲು ದುರಂತ ಪ್ರಕರಣ: ಕರ್ನಾಟಕ ಮೂಲದವರು ಮೃತಪಟ್ಟಿರುವ ಮಾಹಿತಿ ಇಲ್ಲ; ರೈಲ್ವೆ ಎಸ್​ಪಿ ಸೌಮ್ಯಾ ಲತಾ

ಬೆಂಗಳೂರು: ಒಡಿಶಾದ ಬಾಲಸೋರ್​​ ಜಿಲ್ಲೆಯಲ್ಲಿ ರೈಲು ದುರಂತ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ‘ಕರ್ನಾಟಕ ಮೂಲದವರು ಮೃತಪಟ್ಟಿರುವ ಯಾವುದೇ ಮಾಹಿತಿ ಇಲ್ಲ ಎಂದು ರೈಲ್ವೆ ಎಸ್​ಪಿ ಸೌಮ್ಯಾ ಲತಾ ಮಾಹಿತಿ ನೀಡಿದ್ದಾರೆ. ರಾಜ್ಯದ ಓರ್ವ ಡಿವೈಎಸ್​​ಪಿ ಘಟನಾ ಸ್ಥಳದಲ್ಲೇ ಇದ್ದಾರೆ. ಕರ್ನಾಟಕದ ಬಗ್ಗೆ ಏನೇ ಮಾಹಿತಿ ಇದ್ದರೂ ತಿಳಿಸುತ್ತಾರೆ ಎಂದಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:08 am, Sun, 4 June 23