ಬೆಂಗಳೂರು ಅ.17: ಬೆಂಗಳೂರಿನಿಂದ (Bengaluru) ಪುಣೆಗೆ (Pune) ಆಕಾಸ್ ವಿಮಾನದಲ್ಲಿ (Airplane) ಹೊರಟಿದ್ದ ಯುವತಿಗೆ, ಕರ್ತವ್ಯದಲ್ಲಿಲ್ಲದ ಪೈಲಟ್ ನನಗೆ ಕಿರುಕುಳ ನಿಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಕಿರುಕುಳಕ್ಕೆ ಒಳಗಾದ 20 ವರ್ಷದ ಯುವತಿ ಆಕಾಸ್ ವಿಮಾನಯಾನ ಸಂಸ್ಥೆಗೆ ದೂರು ನೀಡಿದರೂ ಕ್ರಮಕೈಗೊಂಡಿಲ್ಲ ಎಂಬ ಆರೋಪವಿದೆ. ಘಟನೆ ಬಗ್ಗೆ ವಿವರವಾಗಿ ತನಿಖೆ ನಡೆಸಲು ನಾವು ಯುವತಿಯನ್ನು ಸಂಪರ್ಕಿಸಲು ಯತ್ನಿಸಿದೇವು. ಆದರೆ ಅವರು ಸಂಪರ್ಕಕಕ್ಕೆ ಸಿಗಲಿಲ್ಲ ಎಂದು ಆಕಾಸ್ ಏರ್ಲೈನ್ಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಘಟನೆ ಬಗ್ಗೆ ಯುವತಿ ಸಾಮಾಜಿ ಜಾಲತಾಣದಲ್ಲಿ ಫೋಸ್ಟ್ ಹಾಕಿದ ಪ್ರಕಾರ “ನಾನು (ಯುವತಿ) ಬೆಂಗಳೂರಿನಲ್ಲಿ ಮೂರು ತಿಂಗಳು ಇಂಟರ್ನ್‌ಶಿಪ್ ಮುಗಿಸಿಕೊಂಡು ಭಾನುವಾರದಂದು ವಿಮಾನದಲ್ಲಿ ಪುಣೆಗೆ ಹೊರಟಿದ್ದೆ. ವಿಮಾನದ ಹಿಂಭಾಗದಲ್ಲಿ ಸೀಟ್ ಸಂಖ್ಯೆ 32Cಯಲ್ಲಿ ಕುಳಿತಿದ್ದೆ. ನನ್ನ ಲಗೇಜ್ಗಳನ್ನು ಕ್ಯಾಬಿನ್ನಲ್ಲಿ ಇರಿಸಲು ಸೀಟ್ ಸಂಖ್ಯೆ 30ರಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಸಹಾಯ ಮಾಡಿದರು. ನಂತರ ಅವರು ನನ್ನೊಂದಿಗೆ ಮಾತನಾಡಲು ಪ್ರಾರಂಭಿಸಿದರು. ಅವರು ಕರ್ತವ್ಯದಲ್ಲಿಲ್ಲದ ಆಕಾಸ್ ಏರ್ ಪೈಲಟ್ ಎಂದು ಪರಿಚಯಿಸಿಕೊಂಡರು. ಅಲ್ಲದೆ ಅವರು ಏರ್‌ಲೈನ್ ಐಡಿ ಕಾರ್ಡ್ ಹಾಕಿಕೊಂಡಿದ್ದರು”.
ಇದನ್ನೂ ಓದಿ: ಸಮಯಪಾಲನೆ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವದಲ್ಲೇ ಅತ್ಯುತ್ತಮ
ಕೆಲ ಸಮಯದ ನಂತರ ಪೈಲಟ್, ತಾನು ಕುಳಿತಿದ್ದ ಆಸನದ ಬಳಿಯೇ ಕೂರುವಂತೆ ಒತ್ತಾಯಿಸಿದರು. ನಾನು ಹೋಗಿ ಕೂತೆ, ಬಳಿಕ ವಿಮಾನ ಸಿಬ್ಬಂದಿ ನನ್ನ ಲಗೇಜ್ಅನ್ನು ಸ್ಥಳಾಂತರಿಸಿದರು. ಬಳಿಕ ಪೈಲಟ್ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದರು. ಇದನ್ನು ಸಹಿಸದೆ ನಾನು ನನ್ನ ಮೊದಲಿನ ಸೀಟ್ನಲ್ಲಿ ಹೋಗಿ ಕುಳಿತೆ. ಈ ಬಗ್ಗೆ ವಿಮಾನದ ಸಿಬ್ಬಂದಿಗೆ ತಿಳಿಸಿದೆ, ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಪುಣೆಯಲ್ಲಿ ಇಳಿದ ನಂತರ ಪೈಲಟ್ ನನ್ನನ್ನು ಹಿಂಬಾಲಿಸಿದರು. ತನ್ನೊಂದಿಗೆ ಬರುವಂತೆ ಹೇಳಿದರು. ಅಲ್ಲದೆ ಮೊಬೈಲ್ ನಂಬರ್ ನೀಡುವಂತೆ ಒತ್ತಾಯಿಸಿದರು.”
ಈ ಬಗ್ಗೆ ಆಕಾಸ್ ಏರ್ಲೈನ್ಸ್ಗೆ ದೂರು ನೀಡಿದ್ದೇನೆ. ದೂರು ನೀಡಿ 15 ದಿನ ಕಳೆದರು ಏನು ಪ್ರಯೋಜನವಾಗಿಲ್ಲ ಎಂದು ಯುವತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ