ಟೊಮೆಟೊ ಆಯ್ತು ಈಗ ಈರುಳ್ಳಿ, ಬೆಳ್ಳುಳ್ಳಿ ಸರದಿ; ಸೈಲೆಂಟಾಗಿ ಏರಿಕೆ ಕಾಣುತ್ತಿದೆ

| Updated By: ಆಯೇಷಾ ಬಾನು

Updated on: Aug 14, 2023 | 2:14 PM

Onion And Ginger Rate: ಟೊಮೆಟೊ ಬಳಿಕ ಬೆಳ್ಳುಳ್ಳಿ ಹಾಗೂ ಈರುಳ್ಳಿ ಜನರಲ್ಲಿ ಕಣ್ಣೀರು ತರಿಸಲು ಆರಂಭಿಸಿದೆ. ಕಳೆದ ಒಂದು ವಾರದಿಂದ ಈರುಳ್ಳಿ ಬೆಲೆಯಲ್ಲಿ ಕೆಜಿಗೆ ಸುಮಾರು 12-15 ರೂ ರಷ್ಟು ಏರಿಕೆ ಕಂಡು ಬಂದಿದೆ. ಕೆಜಿ ಬೆಳ್ಳುಳ್ಳಿಗೆ 200 ರೂಪಾಯಿ ಇದೆ. ಹೊಸ ಕ್ರಾಫ್ಟ್ ಬರುವವರಿಗೂ ಇದೆ ಬೆಲೆ ಮುಂದುವರಿಯುವ ಸಾಧ್ಯತೆ ಇದೆ.

ಟೊಮೆಟೊ ಆಯ್ತು ಈಗ ಈರುಳ್ಳಿ, ಬೆಳ್ಳುಳ್ಳಿ ಸರದಿ; ಸೈಲೆಂಟಾಗಿ ಏರಿಕೆ ಕಾಣುತ್ತಿದೆ
ಈರುಳ್ಳಿ, ಬೆಳ್ಳುಳ್ಳಿ
Follow us on

ಬೆಂಗಳೂರು, ಆ.14: ದಾಖಲೆ ಮಟ್ಟದಲ್ಲಿ ಬೆಲೆ ಏರಿಕೆ ಕಂಡಿದ್ದ ಟೊಮೆಟೊ ದರ(Tomato Rate) ಸದ್ಯ ಇಳಿಕೆ ಕಂಡಿದೆ. ಮಳೆ ಕಡಿಮೆಯಾದ ಹಿನ್ನೆಲೆ ಒಂದು ವಾರದಿಂದ ಟೊಮೆಟೊ ದರ ಕುಸಿತ ಕಾಣುತ್ತಿದೆ. ಇದರಿಂದ ಗ್ರಾಹಕರು ಫುಲ್ ಖುಷ್ ಆಗಿದ್ದಾರೆ. ಆದ್ರೆ ಇದೀಗ ಟೊಮೆಟೊ ಬಳಿಕ ಬೆಳ್ಳುಳ್ಳಿ(Ginger) ಹಾಗೂ ಈರುಳ್ಳಿ(Onion)ಜನರಲ್ಲಿ ಕಣ್ಣೀರು ತರಿಸಲು ಆರಂಭಿಸಿದೆ. ಕಳೆದ ಒಂದು ವಾರದಿಂದ ಈರುಳ್ಳಿ ಬೆಲೆಯಲ್ಲಿ ಕೆಜಿಗೆ ಸುಮಾರು 12-15 ರೂ ರಷ್ಟು ಏರಿಕೆ ಕಂಡು ಬಂದಿದೆ.

ಸೈಲೆಂಟ್ ಆಗಿ ಏರಿಕೆ ಕಾಣುತ್ತಿರುವ ಈರುಳ್ಳಿ

ಭಾರೀ ಏರಿಕೆ ಕಂಡು ರೈತರಿಗೆ ಭರಪೂರ ಲಾಭ ತಂದು ಕೊಟ್ಟ ಕೆಂಪು ಸುಂದರಿ ಟೊಮೆಟೊ ಬೆಲೆ ಸದ್ಯ ಇಳಿಕೆ ಕಾಣುತ್ತಿದೆ. ವಾರದಿಂದ ವಾರಕ್ಕೆ ಟೊಮೆಟೊ ದರ ಕುಸಿಯುತ್ತಿದೆ. ಕಳೆದ ವಾರ ಒಂದು ಕೆಜೆ ಟೊಮೆಟೊಗೆ 80 ರಿಂದ 90 ರೂ ಇತ್ತು. ಇಂದು 50 ರಿಂದ 60 ರೂಪಾಯಿ ಆಗಿದೆ. ಆದ್ರೆ ಟೊಮೆಟೊ ಬೆಲೆ ಇಳಿಕೆಯ ನಡುವೆ ಸೈಲೆಂಟ್ ಆಗಿ ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ. ಕಳೆದ ವಾರ ಕೆಜಿಗೆ 25 ರೂ. ಇದ್ದ ಈರುಳ್ಳಿ ಬೆಲೆ, ಈ ವಾರ 30 -40 ರೂ.ಗೆ ತಲುಪಿದೆ. ಸೂಪರ್ ಮಾರ್ಕೆಟ್​ಗಳಲ್ಲಿ ಕೆಜಿಗೆ 45 ರೂ.ಗಳಂತೆ ಮಾರಾಟ ಮಾಡಲಾಗುತ್ತಿದೆ. ಕಳೆದ ಒಂದು ವಾರದಿಂದ ಈರುಳ್ಳಿ ಬೆಲೆಯಲ್ಲಿ ಕೆಜಿಗೆ ಸುಮಾರು 12-15 ರೂ ರಷ್ಟು ಏರಿಕೆ ಕಂಡು ಬಂದಿದೆ.

ಇದನ್ನೂ ಓದಿ: ಟೊಮೆಟೊ ಸುವರ್ಣ ಯುಗ ಅಂತ್ಯ, ಕುಸಿತದತ್ತ ಕೆಂಪು ರಾಣಿ; ಈಗ ಕೋಲಾರ ಎಪಿಎಂಸಿಯಲ್ಲಿ ಬೆಲೆ ಎಷ್ಟಿದೆ?

ಮುಂಗಾರು ಮಳೆ ಕೈಕೊಟ್ಟು ಚಿತ್ರದುರ್ಗ, ದಾವಣಗೆರೆ ಹಾಗೂ ಕರ್ನಾಟಕದ ಇತರೆಡೆಯಿಂದ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ಸುಮಾರು 4,000 ಹೆಕ್ಟೇರ್‌ನಲ್ಲಿ ಬೆಳೆ ಕೊರತೆ ಇದೆ. ಮುಂಗಾರು ಮಳೆ ವಿಳಂಬವಾಗಿರುವುದರಿಂದ ಸುಮಾರು 6-8 ವಾರಗಳ ಕೊಯ್ಲು ವಿಳಂಬವಾಗಿದೆ. ಮಹಾರಾಷ್ಟ್ರದ ನಾಸಿಕ್ ನಲ್ಲಿಯೂ ಇದೇ ರೀತಿಯ ಸಮಸ್ಯೆಯಾಗಿದೆ. ಹೀಗಾಗಿ ಬೆಳೆ ಉತ್ಪಾದನೆಯಲ್ಲಿ ಕೊರತೆಗಳು ಎದುರಾಗಿದ್ದು, ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆಯಲ್ಲಿ 50 ರಿಂದ 60 ರೂಪಾಯಿ ಏರಿಕೆಯಾಗುವ ಸಾಧ್ಯಾತೆ ಇದೆ.

ಬೆಳ್ಳುಳ್ಳಿ ಬೆಲೆಯಲ್ಲಿಯೂ ಏರಿಕೆ

ಇನ್ನು ಮತ್ತೊಂದೆಡೆ ಬೆಳ್ಳುಳ್ಳಿ ದರ ಕೂಡ ಏರಿಕೆ ಕಾಣುತ್ತಿದೆ. ಕೆಜಿ ಬೆಳ್ಳುಳ್ಳಿಗೆ 200 ರೂಪಾಯಿ ಇದೆ. ಹೊಸ ಕ್ರಾಫ್ಟ್ ಬರುವವರಿಗೂ ಇದೆ ಬೆಲೆ ಮುಂದುವರಿಯುವ ಸಾಧ್ಯತೆ ಇದೆ. ಕಳೆದ ಎರಡು ತಿಂಗಳಿನಿಂದ ಬೆಳ್ಳುಳ್ಳಿ ಬೆಲೆ ಜಾಸ್ತಿಯಾಗಿದೆ. ಇನ್ನು ಒಂದು ತಿಂಗಳು ಇದೇ ಬೆಲೆ ಮುಂದುವರಿಯುವ ಸಾಧ್ಯತೆ ಇದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ