ಬೆಂಗಳೂರು: ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹೆಸರಿನಲ್ಲಿ ಹೈಕೋರ್ಟ್ ಸಾರ್ವಜನಿಕ ಸಂಪರ್ಕ ಅಧಿಕಾರಿಗೆ ವಂಚನೆ (Fraud) ಮಾಡಿರುವಂತಹ ಘಟನೆ ಬೆಳಕಿ ಬಂದಿದೆ. ಸಿಜೆ ಹೆಸರಲ್ಲಿ ಅಧಿಕಾರಿಯ ವಾಟ್ಸಾಪ್ಗೆ 10 ಸಾವಿರ ಮೌಲ್ಯದ ಒಟ್ಟು 9 ಅಮೆಜಾನ್ ಗಿಫ್ಟ್ ವೋಚರ್ ಕಳಿಸಿ ವಂಚನೆ ಮಾಡಲಾಗಿದೆ. ಆ.6ರ ಬೆಳಗ್ಗೆ 7.30ಕ್ಕೆ ಅಧಿಕಾರಿಯ ವಾಟ್ಸಾಪ್ಗೆ ಸಂದೇಶ ರವಾನೆ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರಿನ ಸೈಬರ್ ಕ್ರೈಂ ಠಾಣೆಗೆ ಪಿಆರ್ಒ ದೂರು ನೀಡಿದ್ದು, ದೂರಿನ ಮೇರೆಗೆ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ. ಆರೋಪಿ ಪತ್ತೆಗೆ ಸೈಬರ್ ಕ್ರೈಂ ಠಾಣೆ ಪೊಲೀಸರು ಮುಂದಾಗಿದ್ದಾರೆ.
ಇದನ್ನೂ ಓದಿ: IAS, IPS ಅಧಿಕಾರಿಗಳ ಹೆಸರು ಹೇಳಿ 59 ಲಕ್ಷ ವಂಚನೆ: ಆರೋಪಿ ವಿರುದ್ಧ 420 ಕೇಸ್ ದಾಖಲು
ಗವರ್ನರ್ ಹೆಸರಲ್ಲೂ ಚೀಟಿಂಗ್:
ವಿವಿ ಸಿಂಡಿಕೇಟ್ ಸದಸ್ಯ ಮಾಡುವುದಾಗಿ ನಂಬಿಸಿ ರಾಜ್ಯಪಾಲ (Governor) ಥಾವರ್ಚಂದ್ ಗೆಹ್ಲೋಟ್ ಹೆಸರಿನಲ್ಲಿ ವಂಚನೆ ಮಾಡಿದ್ದ, ಬಳ್ಳಾರಿ ಮೂಲದ ಸದರುಲ್ಲಾ ಖಾನ್ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಗವರ್ನರ್ ಅಧೀನ ಕಾರ್ಯದರ್ಶಿ ಎಂದು ಹೇಳಿಕೊಂಡಿದ್ದು, ಎಲ್ಲಾ ವಿವಿಗಳಿಗೆ ಸೆನೆಟ್ ಸದಸ್ಯ ಎಂದು ಆಸಾಮಿ ಹೇಳಿಕೊಂಡಿದ್ದ. ನಕಲಿ ಗುರುತಿನ ಚೀಟಿ ಮಾಡಿಕೊಂಡು ಆರೋಪಿ ಓಡಾಡುತ್ತಿದ್ದ. ಇನ್ನೂ ರಾಜ್ಯಪಾಲರ ಹೆಸರು ಹೇಳಿದರೆ ಜನ ಬೇಗ ನಂಬುತ್ತಾರೆ. ರಾಜ್ಯಪಾಲರ ಕಚೇರಿ ಹೆಸರು ಬಳಸಿಕೊಂಡು ವಂಚಿಸುತ್ತಿದ್ದ ವಿಚಾರ ತಿಳಿದು ರಾಜ್ಯಪಾಲರ ಕಚೇರಿ ಸಿಬ್ಬಂದಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಯಾರು ತನ್ನ ಮೇಲೆ ಅನುಮಾನ ಪಡೋದಿಲ್ಲ ಎಂದು ರಾಜ್ಯಪಾಲರ ಹೆಸರು ಬಳಕೆ ಮಾಡಿದ್ದು, ಗವರ್ನರ್ ಕಚೇರಿಯಿಂದ ಎಂದು ಕೆಲವು ಗಣ್ಯ ವ್ಯಕ್ತಿಗಳಿಗು ಕರೆ ಮಾಡಿರುವುದು ಬೆಳಕಿಗೆ ಬಂದಿದೆ. ನಿಮ್ಮವರನ್ನ ಸಿಂಡಿಕೇಟ್ ಸದಸ್ಯರಾಗಿ ಮಾಡುತ್ತೇನೆ ಎಂದು ಆರೋಪಿ ಕರೆ ಮಾಡಿದ್ದ. ಈ ಬಗ್ಗೆ ಆರೋಪಿ ಸದರುಲ್ಲಾ ಖಾನ್ ವಶಕ್ಕೆ ಪಡೆದು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ಲಂಚದ ಪಿಡುಗು:
ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳಿಗೆ ಲಂಚ ಪಡೆಯುವುದು ನಿಯಮವಾಗಿ ಹೋಗಿದೆ. ಇದು ಕ್ಯಾನ್ಸರ್‌ಗಿಂತ ಗಂಭೀರವಾಗಿದೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಜಾಮೀನು ಕೋರಿ ಹಿಂದಿನ ಡಿಸಿ ಜೆ. ಮಂಜುನಾಥ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ತೀರ್ಪಿನಲ್ಲಿ ಈ ಅಂಶಗಳನ್ನು ನ್ಯಾಯಮೂರ್ತಿ ಕೆ.ನಟರಾಜನ್ ಉಲ್ಲೇಖಿಸಿದ್ದಾರೆ.
ಲಂಚವಿಲ್ಲದೆ ಫೈಲ್ ಮುಂದೆ ಹೋಗಲ್ಲ. ಕಂದಾಯ ಇಲಾಖೆಯಲ್ಲಿ ಮೇಲಿನ ಶ್ರೇಣಿಯಿಂದ ಕೆಳ ಹಂತದವರೆಗೂ ಭ್ರಷ್ಟಾಚಾರವಿದೆ. ಸರ್ಕಾರಿ ಕಚೇರಿಗಳಲ್ಲಿನ ಅಧಿಕೃತ ಕೆಲಸಗಳಿಗೂ ಲಂಚ ನಿಯಮವಾಗಿದೆ. ಮೊದಲಿಗೆ ಅರ್ಜಿದಾರ ಮಂಜುನಾಥ್ ವಿರುದ್ಧ ಕ್ರಮ ಕೈಗೊಳ್ಳದೆ ಸರ್ಕಾರ ವರ್ಗಾಯಿಸಿದೆ. ಸದ್ಯ ಜಾಮೀನು ಅರ್ಜಿ ವಜಾಗೊಳಿಸಿ ಹೈಕೋರ್ಟ್ ತೀರ್ಪು ನೀಡಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:22 am, Thu, 11 August 22