ORR ಸಂಚಾರ ಸಲಹೆ: ಮೆಟ್ರೋ ಕಾಮಗಾರಿ ನಡೆಯುತ್ತಿದೆ, 45 ದಿನಗಳವರೆಗೆ ಬೆಂಗಳೂರಿನ ಈ ರಸ್ತೆ ಬಂದ್​​​​

ಬಿಎಂಆರ್‌ಸಿಎಲ್ ಮೆಟ್ರೋ ನಿಲ್ದಾಣ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಹೊರ ವರ್ತುಲ ರಸ್ತೆ ( ಒಆರ್‌ಆರ್ ) ಸರ್ವಿಸ್ ರಸ್ತೆಯನ್ನು ಮುಚ್ಚಲಾಗಿದೆ. ವಾಹನ ಸವಾರರು ಇದಕ್ಕೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಯಾವೆಲ್ಲ ರಸ್ತೆಗಳಾಗಿ ಹೋಗಬಹುದು. ಹಾಗೂ ಬೆಂಗಳೂರು ಸಂಚಾರ ಪೊಲೀಸರು ಸಂಚಾರ ಸಲಹೆಗಳೇನು? ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ORR ಸಂಚಾರ ಸಲಹೆ: ಮೆಟ್ರೋ ಕಾಮಗಾರಿ ನಡೆಯುತ್ತಿದೆ, 45 ದಿನಗಳವರೆಗೆ ಬೆಂಗಳೂರಿನ ಈ ರಸ್ತೆ ಬಂದ್​​​​
ಸಾಂದರ್ಭಿಕ ಚಿತ್ರ

Updated on: Oct 09, 2025 | 4:44 PM

ಬೆಂಗಳೂರು, ಅ.9: ಬಿಎಂಆರ್‌ಸಿಎಲ್ ಮೆಟ್ರೋ ನಿಲ್ದಾಣ (BMRCL metro station) ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಹೊರ ವರ್ತುಲ ರಸ್ತೆ ( ಒಆರ್‌ಆರ್ ) ಸರ್ವಿಸ್ ರಸ್ತೆಯನ್ನು ಬಂದ್ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರು ಸಂಚಾರ ಪೊಲೀಸರು ಸಂಚಾರ ಸಲಹೆಯನ್ನು ನೀಡಿದ್ದಾರೆ. ಈ ಪ್ರದೇಶದಲ್ಲಿ ಬರುವ 9ನೇ ಮುಖ್ಯ ರಸ್ತೆ ಜಂಕ್ಷನ್‌ನಿಂದ 5ನೇ ಮುಖ್ಯ ರಸ್ತೆ ಜಂಕ್ಷನ್‌ವರೆಗೆ ಸಾಗುತ್ತದೆ . ಇದೀಗ ಈ ರಸ್ತೆಯನ್ನು ಅಕ್ಟೋಬರ್ 6 ರಿಂದ 45 ದಿನಗಳವರೆಗೆ ಮುಚ್ಚಲಾಗುತ್ತದೆ. ಇಬ್ಬ್ಲೂರಿನಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಕಡೆಗೆ ಬರುವ ವಾಹನಗಳು ಪರ್ಯಾಯ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ವಾಹನ ಸವಾರರು 14ನೇ ಮುಖ್ಯ ರಸ್ತೆ ಮೇಲ್ಸೇತುವೆ ಮೂಲಕ ಪ್ರಯಾಣಿಸಿ ಮುಖ್ಯ ರಸ್ತೆಯಲ್ಲಿ ಬಂದು 5ನೇ ಮುಖ್ಯ ರಸ್ತೆ ಜಂಕ್ಷನ್ ತಲುಪಬಹುದು ಅಥವಾ ಎಚ್‌ಎಸ್‌ಆರ್ ಲೇಔಟ್‌ನ ರಸ್ತೆಗಳನ್ನು ಬಳಸಿಕೊಂಡು ಸಿಲ್ಕ್ ಬೋರ್ಡ್ ಮತ್ತು ಹೊಸೂರು ಮುಖ್ಯ ರಸ್ತೆ ಕಡೆಗೆ ಸಾಗಬಹುದು ಎಂದು ಹೇಳಿದ್ದಾರೆ

ಮೆಟ್ರೋ ನಿರ್ಮಾಣ ಅವಧಿಯಲ್ಲಿ ವಾಹನ ದಟ್ಟನೆಯನ್ನು ಕಡಿಮೆ ಮಾಡಲು ಹಾಗೂ ಸುಗಮ ಸಂಚಾರಕ್ಕಾಗಿ ಈ ವ್ಯವಸ್ಥೆಯನ್ನು ಪಾಲಿಸಬೇಕು ಹಾಗೂ ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಸಂಚಾರ ಅಧಿಕಾರಿಗಳು ಹೇಳಿದ್ದಾರೆ. ಟೌನ್ ಹಾಲ್ ಜಂಕ್ಷನ್ ಬಳಿಯ ಜೆಸಿ ರಸ್ತೆಯಿಂದ ಎನ್ಆರ್ ಜಂಕ್ಷನ್, ಪಿಎಸ್ ಜಂಕ್ಷನ್ ಮತ್ತು ಪೊಲೀಸ್ ಕಾರ್ನರ್ ಜಂಕ್ಷನ್ ವರೆಗಿನ ಸಂಚಾರ ಸಂಕೇತಗಳನ್ನು ತೋರಿಸುವ ವೀಡಿಯೋವೊಂದನ್ನು ಸಂಚಾರ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಅನೂಪ್ ಎ. ಶೆಟ್ಟಿ, ಐಪಿಎಸ್, ಇತ್ತೀಚೆಗೆ ತಮ್ಮ ಎಕ್ಸ್​​​ ಖಾತೆಯಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ: ಬೆಂಗಳೂರಿನ ಈ ರಸ್ತೆಗಳಲ್ಲಿ ಸಿಂಕ್ರೋನೈಸ್ಡ್ ಸಿಗ್ನಲ್​ಗಳು! ನಾನ್ ಪೀಕ್ ಅವರ್ಸ್ ಸಂಚಾರ ಇನ್ನು ಸುಗಮ

ಎಕ್ಸ್​​​ ಪೋಸ್ಟ್​​ ಇಲ್ಲಿದೆ ನೋಡಿ:

Twitter

ಈ ವಿಡಿಯೋದಲ್ಲಿ ಸಿಗ್ನಲ್ ಸಿಂಕ್ರೊನೈಸೇಶನ್ ಬಗ್ಗೆಯೂ ತೋರಿಸಿದ್ದಾರೆ. ಇದು ಜನದಟ್ಟಣೆ ಇಲ್ಲದ ಸಮಯದಲ್ಲಿ ಪ್ರತಿ ಸಿಗ್ನಲ್‌ನಲ್ಲಿ ಸುಗಮ ಪ್ರಯಾಣ ಮತ್ತು ಹಸಿರು ದೀಪಗಳನ್ನು ತೋರಿಸುತ್ತದೆ. ದಟ್ಟಣೆಯನ್ನು ಕಡಿಮೆ ಮಾಡಲು ನಗರದಲ್ಲಿ ಇಂತಹ ನಿರಂತರ ಪ್ರಯತ್ನಗಳು ನಡೆಯುತ್ತಿರುತ್ತದೆ ಎಂದು ಹೇಳಿದ್ದಾರೆ

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ​​​