AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ನಾಲ್ಕು ವರ್ಷಗಳಲ್ಲಿ 3,500 ಕ್ಕೂ ಹೆಚ್ಚು ಅಪಘಾತ, ಆದರೆ ಶಿಕ್ಷೆ ಪ್ರಮಾಣ 7% : ವರದಿ

ಬೆಂಗಳೂರಿನಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸಾವಿರಾರು ಗಂಭೀರ ರಸ್ತೆ ಅಪಘಾತಗಳು ನಡೆದಿದೆ. ಆದರೆ ಅದು ಯಾವುದಕ್ಕೂ ನ್ಯಾಯ ಸಿಕ್ಕಿಲ್ಲ. ಇದಕ್ಕೆ ಕಾರಣಗಳು ಕೇಳಿದ್ರೆ, ಹಲವು ಕಾನೂನು ಚೌಕಟ್ಟಿನ ಉತ್ತರಗಳನ್ನು ನೀಡುತ್ತಾರೆ. ಒಂದು ಅಪಘಾತದ ಪ್ರಕರಣವಕ್ಕೆ ನ್ಯಾಯ ನೀಡಲು ವರ್ಷಗಳೇ ಕಳೆದರು ಅದಕ್ಕೆ ಸಾಕ್ಷ್ಯ ಇಲ್ಲ ಎಂದು ಅದನ್ನು ಮುಂದಕ್ಕೆ ಹಾಕುತ್ತಾರೆ. ಆದರೆ ಇಲ್ಲಿಯವರೆಗೆ ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ಬಲಿಯಾದ ಜನರಿಗೆ ಎಷ್ಟು ನ್ಯಾಯ ಸಿಕ್ಕಿದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ ನೋಡಿ.

ಬೆಂಗಳೂರಿನಲ್ಲಿ ನಾಲ್ಕು ವರ್ಷಗಳಲ್ಲಿ 3,500 ಕ್ಕೂ ಹೆಚ್ಚು ಅಪಘಾತ, ಆದರೆ ಶಿಕ್ಷೆ ಪ್ರಮಾಣ 7% : ವರದಿ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Oct 08, 2025 | 4:09 PM

Share

ಬೆಂಗಳೂರು, ಅ8: ಕಳೆದ ನಾಲ್ಕೂವರೆ ವರ್ಷಗಳಲ್ಲಿ ಬೆಂಗಳೂರಿನಲ್ಲಿ (Bengaluru) ಸಾವಿರಾರು ಗಂಭೀರ ರಸ್ತೆ ಅಪಘಾತಗಳು ನಡೆದಿದೆ. ಆದರೆ ಆ ಯಾವ ಅಪಘಾತಕ್ಕೂ ನ್ಯಾಯ ಸಿಕ್ಕಿಲ್ಲ. ಇಲ್ಲಿಯವರೆಗೆ ಈ ಅಪಘಾತದಲ್ಲಿ ಸಾವಿನ್ನಪ್ಪಿದವರಿಗೆ ಸರಿಯಾದ ರೀತಿಯಲ್ಲಿ ನ್ಯಾಯ ಸಿಕ್ಕಿಲ್ಲ. ಪೊಲೀಸ್ ದತ್ತಾಂಶದಲ್ಲಿ ಈ ಬಗ್ಗೆ ಅಚ್ಚರಿಯ ವಿವರಣೆಗಳನ್ನು ನೀಡಲಾಗಿದೆ. 2021 ಮತ್ತು 2025 ರ ಮಧ್ಯಭಾಗದಲ್ಲಿ 3,500 ಕ್ಕೂ ಹೆಚ್ಚು ಮಾರಕ ಅಪಘಾತಗಳು ಮತ್ತು 15,000 ಕ್ಕೂ ಹೆಚ್ಚು ಮಾರಕವಲ್ಲದ ಅಪಘಾತಗಳು ವರದಿಯಾಗಿವೆ, ಆದರೆ ಶಿಕ್ಷೆಯ ಪ್ರಮಾಣವು ಕೇವಲ 7 ಪ್ರತಿಶತದಷ್ಟಿದೆ. ಕರ್ನಾಟಕದಲ್ಲಿ ಪ್ರತಿದಿನ ಸರಾಸರಿ 25 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಾರೆ ಮತ್ತು 80 ಕ್ಕೂ ಹೆಚ್ಚು ಜನರು ಗಾಯಗೊಳ್ಳುತ್ತಾರೆ ಎಂದು ಬೆಂಗಳೂರು ಮಿರರ್ ವರದಿ ಮಾಡಿದೆ . ಆದರೆ ಈ ಪ್ರಕರಣಗಳಲ್ಲಿ ಶಿಕ್ಷೆಯಾಗಿರುವುದು ತುಂಬಾ ಕಡಿಮೆ ಎಂದು ಹೇಳಲಾಗಿದೆ. ನ್ಯಾಯ ಸಿಗದೇ ಇರಲು ಕಾರಣವೇ ಏನು ಎಂಬುದನ್ನು ಕೂಡ ಅಧಿಕಾರಿಗಳು ಹೇಳಿದ್ದಾರೆ. ಈ ಅಪಘಾತಗಳನ್ನು ನೋಡಿದವರು ನಾಪತ್ತೆಯಾಗುತ್ತಾರೆ, ದುರ್ಬಲ ಸಾಕ್ಷಿಗಳು, ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಿಕೊಳ್ಳುವ ಆತಂಕಕಾರಿ ಪ್ರವೃತ್ತಿ ಇದೆಲ್ಲರಿಂದ ನ್ಯಾಯ ಸಿಗಲು ತುಂಬಾ ಕಷ್ಟವಾಗಿದೆ.

ಆರೋಪಿ ಮತ್ತು ಬಲಿಪಶುವಿನ ಕುಟುಂಬದ ನಡುವೆ ಶೇಕಡಾ 70 ರಷ್ಟು ಪ್ರಕರಣಗಳನ್ನು ಖಾಸಗಿಯಾಗಿ ಇತ್ಯರ್ಥಪಡಿಸಲಾಗುತ್ತದೆ. ಇನ್ನು 2025ರಲ್ಲಿಅಪಘಾತ ಹೆಚ್ಚಾಗಿದ್ದು, ಜೂನ್ ವರೆಗೆ ಕೇವಲ ಪ್ರಕರಣಗಳಲ್ಲಿ ಕೇವಲ 4 ಶಿಕ್ಷೆಗಳು ದಾಖಲಾಗಿವೆ. ಮಾರಕವಲ್ಲದ ಪ್ರಕರಣಗಳಲ್ಲಿ, 2022 ರಲ್ಲಿ 2,300 ಕ್ಕಿಂತ ಹೆಚ್ಚು ಶಿಕ್ಷೆಗಳು, ಈ ವರ್ಷ 300 ಕ್ಕಿಂತ ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ. ಇದಕ್ಕಾಗಿ ಹೊಸ ಕಾನೂನುಗಳನ್ನು ಹಾಗೂ ಕಠಿಣ ಕ್ರಮಗಳನ್ನು ತರುವುದು ಅಗತ್ಯ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈಗಾಗಲೇ ಡಿಜಿಟಲ್​​​ ವಿಚಾರಗಳು ಬಂದಿದ್ದು, ಇಂತಹ ಘಟನೆಗಳನ್ನು ತಡೆಯಬೇಕಿದೆ.

ಇದನ್ನೂ ಓದಿ: ಬೆಂಗಳೂರು ಪೊಲೀಸರಿಂದ ಬರೋಬ್ಬರಿ 23 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳ ಭರ್ಜರಿ ಬೇಟೆ

ಇನ್ನು ಈ ಬಗ್ಗೆ ಕಾನೂನು ತಜ್ಞರು ಸಹ ಒಪ್ಪಿಕೊಂಡಿದ್ದಾರೆ. ಆದರೆ ಶಿಕ್ಷೆ ವಿಧಿಸಲು ಇನ್ನೂ ಬಿಗಿಯಾದ ತನಿಖೆ ಮತ್ತು ಸೂಕ್ತ ಕಾನೂನು ಕ್ರಮಗಳು ಬರಬೇಕಿದೆ. ಸಾಕ್ಷ್ಯ ಹೆಸರಿನಲ್ಲಿ ಅನೇಕ ಪ್ರಕರಣಗಳು ಮೂಲೆ ಸೇರುತ್ತಿದೆ ಎಂದು ಹೇಳಿದ್ದಾರೆ. ಅಜಾಗರೂಕ ಚಾಲನೆಯಿಂದ ಆಗಿರುವ ಅಪಘಾತಗಳು, ಯಾಂತ್ರಿಕ ವೈಫಲ್ಯ ಅಥವಾ ದುರುದ್ದೇಶಪೂರಿತ ಉದ್ದೇಶ ಎಷ್ಟೋ ಅಪಘಾತಗಳ ಪ್ರಕರಣಗಳು ಇಂದಿಗೂ ಇತ್ಯರ್ಥವಾಗಿಲ್ಲ. ಇವುಗಳಿಗೆ ಸಾಕ್ಷ್ಯಗಳು ಬೇಕು ಎಂದರೆ ಸಿಸಿಟಿವಿಗಳ ಅಳವಡಿಕೆಯನ್ನು ಮಾಡಬೇಕಿದೆ ಎಂದು ಕಾನೂನು ತಜ್ಞರ ಸಲಹೆಯಾಗಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ