ಬೆಂಗಳೂರಿನ ವಿವಿಧ ರೈಲು ನಿಲ್ದಾಣಗಳಲ್ಲಿ ಕಳೆದ 5 ವರ್ಷದಲ್ಲಿ 8 ಸಾವಿರ ಮಕ್ಕಳ ರಕ್ಷಣೆ

|

Updated on: Jan 08, 2024 | 2:57 PM

ದಕ್ಷಿಣ ರೈಲ್ವೆ ವಲಯದ ಅಂಕಿಅಂಶಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ, 755 ಬಾಲಕಿಯರು ಸೇರಿದಂತೆ 8,819 ಮಕ್ಕಳನ್ನು ಬೆಂಗಳೂರಿನ ವಿವಿಧ ರೈಲು ನಿಲ್ದಾಣಗಳಲ್ಲಿ ರಕ್ಷಿಸಲಾಗಿದೆ. ಬೆಂಗಳೂರು ವಿಭಾಗದಲ್ಲಿ ರಕ್ಷಿಸಲ್ಪಟ್ಟ ಹೆಚ್ಚಿನ ಮಕ್ಕಳು ಬಿಹಾರ, ಅಸ್ಸಾಂ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಉತ್ತರ ಭಾರತದ ಇತರ ಪ್ರದೇಶಗಳಿಂದ ಬಂದವರು.

ಬೆಂಗಳೂರಿನ ವಿವಿಧ ರೈಲು ನಿಲ್ದಾಣಗಳಲ್ಲಿ ಕಳೆದ 5 ವರ್ಷದಲ್ಲಿ 8 ಸಾವಿರ ಮಕ್ಕಳ ರಕ್ಷಣೆ
ಬೆಂಗಳೂರು ರೈಲು ನಿಲ್ದಾಣ
Follow us on

ಬೆಂಗಳೂರು, ಜನವರಿ 08: ದಕ್ಷಿಣ ರೈಲ್ವೆ ವಲಯದ (Southern Railway Zone) ಅಂಕಿಅಂಶಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ, 755 ಬಾಲಕಿಯರು ಸೇರಿದಂತೆ 8,819 ಮಕ್ಕಳನ್ನು ಬೆಂಗಳೂರಿನ ವಿವಿಧ ರೈಲು ನಿಲ್ದಾಣಗಳಲ್ಲಿ (Railway Sation) ರಕ್ಷಿಸಲಾಗಿದೆ. ನೈರುತ್ಯ ರೈಲ್ವೆ ವಲಯದ (SWR) ಬೆಂಗಳೂರು ವಿಭಾಗದಲ್ಲಿ ರಕ್ಷಿಸಲ್ಪಟ್ಟ ಹೆಚ್ಚಿನ ಮಕ್ಕಳು ಬಿಹಾರ, ಅಸ್ಸಾಂ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಉತ್ತರ ಭಾರತದ ಇತರ ಪ್ರದೇಶಗಳಿಂದ ಬಂದವರು ಎಂದು ಮಕ್ಕಳ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿಯಾಗಿರುವ ಬೆಂಗಳೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್ ಹೇಳಿದರು.

ನೇಪಾಳದಿಂದಲೂ ಮಕ್ಕಳು ಬಂದ ಉದಾಹರಣೆಗಳಿವೆ. ರಕ್ಷಿಸಲ್ಪಟ್ಟ ಬಹುತೇಕ ಮಕ್ಕಳು 12 ರಿಂದ 16 ವರ್ಷ ವಯಸ್ಸಿನವರಾಗಿದ್ದಾರೆ. ಮಕ್ಕಳು ಮನೆ ಬಿಟ್ಟು ಬರಲು ಹಲವು ಕಾರಣಗಳಿವೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳು ಹಣ ಸಂಪಾದಿಸಲು ಬೆಂಗಳೂರಿನಂತಹ ದೊಡ್ಡ ನಗರಗಳಿಗೆ ಬರುತ್ತಾರೆ. ಪೋಷಕರಿಂದ ತಪ್ಪಿಸಿಕೊಂಡು, ಬೆಂಗಳೂರನ್ನು ನೋಡಲು, ಮತ್ತು ಪ್ರೀತಿಸಿ ಓಡಿ ಬಂದವರು ಹೀಗೆ ನಾನಾ ಕಾರಣದಿಂದ ಮನೆ ಬಿಟ್ಟು ಬರುತ್ತಾರೆ ಎಂದರು.

ಇದನ್ನೂ ಓದಿ: ರಾಯಚೂರಿನಲ್ಲಿ ಕೂಲಿ ಕೆಲಸಕ್ಕೆ ಕರೆದೊಯ್ಯುತ್ತಿದ್ದ 59 ಮಕ್ಕಳ ರಕ್ಷಣೆ

ಇತ್ತೀಚಿಗೆ ಚಂದನ್ ಮತ್ತು ರಂಜ್ತ್ (ಎರಡೂ ಹೆಸರು ಬದಲಾಯಿಸಲಾಗಿದೆ) ಬಾಲಕರು ಸರಿ ಸುಮಾರು ಬಾಲಕರು 3,000 ಕಿ.ಮೀ.ಗೂ ಹೆಚ್ಚು ದೂರ ರೈಲಿನಲ್ಲೇ ಪ್ರಯಾಣಿಸಿ, ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣಕ್ಕೆ ತಲುಪಿದ್ದಾರೆ. ಇಲ್ಲಿ ಅದೃಷ್ಟವಶಾತ್ 13 ವರ್ಷದ ಮಕ್ಕಳನ್ನು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ರಕ್ಷಿಸಲಾಯಿತು ಎಂದು ತಿಳಿಸಿದರು.

ಈ ಇಬ್ಬರು ಬಾಲಕರು ಬೆಂಗಳೂರನ್ನು ನೋಡಲು ಮತ್ತು ಓರ್ವ ಬಾಲಕನ ಸಹೋದರ ಇಲ್ಲಿನ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಅವರನ್ನು ಭೇಟಿಯಾಗಲು ಅಸ್ಸಾಂನಿಂದ ಬಂದಿದ್ದೇನೆ ಎಂದು ಬಾಲಕ ಹೇಳಿದ್ದಾನೆ. ಅಲ್ಲದೇ ಬಾಲಕರು ಹೀಗೆ ಬಂದಿರುವುದು ಅವರ ಪೋಷಕರಿಗೆ ತಿಳಿದಿಲ್ಲ. ತನ್ನ ಸಹೋದರ ನಗರದಲ್ಲಿ ಎಲ್ಲಿ ಕೆಲಸ ಮಾಡುತ್ತಿದ್ದಾನೆ ಎಂಬ ಬಗ್ಗೆ ಬಾಲಕನಿಗೆ ತಿಳಿದಿಲ್ಲ. ಅಂತಿಮವಾಗಿ ರೈಲ್ವೆ ಅಧಿಕಾರಿಗಳು ಬಾಲಕನ ಪೋಷಕರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾದರು. ಬಾಲಕರನ್ನು ಪೋಷಕರಿಗೆ ಒಪ್ಪಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ