ಸಿಲಿಕಾನ್ ಸಿಟಿಯಲ್ಲಿ ಪಾಗಲ್ ಪ್ರೇಮಿ ಹುಚ್ಚಾಟ, ಅಪರಿಚಿತನಿಗೆ ಮಾರಕಾಸ್ತ್ರದಿಂದ ಹಲ್ಲೆ, ಆರೋಪಿಗಾಗಿ ಪೊಲೀಸರ ಹುಡುಕಾಟ

| Updated By: ಆಯೇಷಾ ಬಾನು

Updated on: Oct 08, 2022 | 8:44 AM

ಮಾಗಡಿರೋಡ್ ನ ಬಾರ್ ಬಳಿ ಮಂಜೇಶ್ ಹಾಗೂ ಆತನ ಗ್ಯಾಂಗ್ ಹುಚ್ಚಾಟಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿ ಆಸ್ಪತ್ರೆ ಸೇರುವಂತಾಗಿದೆ. ಪಾಗಲ್ ಪ್ರೇಮಿ ತಾನು  ಪ್ರೀತಿಸುತ್ತಿದ್ದ ಯುವತಿಯ ಪ್ರಿಯಕರನನ್ನು ಹಲ್ಲೆ ಮಾಡಲು ಹೋಗಿ ರಸ್ತೆಯಲ್ಲಿ ಸಿಕ್ಕ ಅಪರಿಚಿತನಿಗೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾನೆ.

ಸಿಲಿಕಾನ್ ಸಿಟಿಯಲ್ಲಿ ಪಾಗಲ್ ಪ್ರೇಮಿ ಹುಚ್ಚಾಟ, ಅಪರಿಚಿತನಿಗೆ ಮಾರಕಾಸ್ತ್ರದಿಂದ ಹಲ್ಲೆ, ಆರೋಪಿಗಾಗಿ ಪೊಲೀಸರ ಹುಡುಕಾಟ
ಸಿಲಿಕಾನ್ ಸಿಟಿಯಲ್ಲಿ ಪಾಗಲ್ ಪ್ರೇಮಿ ಹುಚ್ಚಾಟ, ಅಪರಿಚಿತನಿಗೆ ಮಾರಕಾಸ್ತ್ರದಿಂದ ಹಲ್ಲೆ
Follow us on

ಬೆಂಗಳೂರು: ಪ್ರೀತಿ ಎಂಬ ಎರಡಾಕ್ಷರದ ಪದಕ್ಕೆ ಬಹಳ ಶಕ್ತಿ ಇದೆ. ಪ್ರೀತಿಯಲ್ಲಿ ಬಿದ್ದ ಮನುಷ್ಯ ಬದುಕಿನಲ್ಲಿ ಗೆಲ್ಲಲೂ ಬಹುದು ಹಾಗೂ ಸೋಲಲೂ ಬಹುದು. ಆತ ರಾಕ್ಷಸನೂ ಆಗಬಲ್ಲ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒನ್ ಸೈಡ್ ಪ್ರೀತಿಯ ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ತಾನು  ಪ್ರೀತಿಸುತ್ತಿದ್ದ ಯುವತಿಯ ಪ್ರಿಯಕರನನ್ನು ಹಲ್ಲೆ ಮಾಡಲು ಹೋಗಿ ರಸ್ತೆಯಲ್ಲಿ ಸಿಕ್ಕ ಅಪರಿಚಿತನಿಗೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾನೆ.

ಮಾಗಡಿರೋಡ್ ನ ಬಾರ್ ಬಳಿ ಮಂಜೇಶ್ ಹಾಗೂ ಆತನ ಗ್ಯಾಂಗ್ ಹುಚ್ಚಾಟಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿ ಆಸ್ಪತ್ರೆ ಸೇರುವಂತಾಗಿದೆ. ನಡುರಸ್ತೆಯಲ್ಲಿ ಭೀಕರವಾಗಿ ಹಲ್ಲೆ ನಡೆದಿದ್ದು ಸಿಸಿಟಿವಿಯಲ್ಲಿ ಘಟನೆ ದೃಶ್ಯ ಸೆರೆಯಾಗಿದೆ. ಹಲ್ಲೆ ಮಾಡಿದ ಮಂಜೇಶ್ ಗೆ ಯುವತಿಯೋರ್ವಳ ಮೇಲೆ ಪ್ರೀತಿಯಾಗಿತ್ತು. ಆದ್ರೆ ಆ ಯುವತಿಗೆ ನಿತೀನ್ ಎಂಬಾತನ ಮೇಲೆ ಪ್ರೀತಿಯಾಗಿತ್ತು. ಹೀಗಾಗಿ ತಾನು ಇಷ್ಟ ಪಟ್ಟ ಯುವತಿಯ ಪ್ರಿಯಕರನ ಮೇಲೆ ಕೋಪಗೊಂಡಿದ್ದ ಮಂಜೇಶ್, ಆತನನ್ನು ಮಾತನಾಡಿಸುವ ನೆಪದಲ್ಲಿ ಕರೆದು ಹಲ್ಲೆ ಮಾಡಲು ತಂತ್ರ ಮಾಡಿದ್ದ. ಈ ವೇಳೆ ನಿತಿನ್ ತನ್ನ ಸಹೋದರನ ಜೊತೆ ಬರೋದಾಗಿ ಹೇಳಿದ್ದ. ಈ ವೇಳೆ ಮಂಜೇಶ್ ಅಂಡ್ ಗ್ಯಾಂಗ್ ನಿತಿನ್ ಎಂದು ಭಾವಿಸಿ ಹಲ್ಲೆ ನಡೆಸಿದ್ದಾರೆ. ಸದ್ಯ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಯುಎಸ್: ಬಾಲಕಿಯನ್ನು ರೇಪ್ ಮಾಡಿದ ಅರೋಪ ಹೊತ್ತು ಜೈಲು ಸೇರಿದ್ದ ಅವಳ ಶಿಕ್ಷಕ ಸೆರೆಮನೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ!

ಮುರುಘಾಮಠದಲ್ಲಿ ಕಳ್ಳತನ

ಚಿತ್ರದುರ್ಗದ ಮುರುಘಾಮಠದಲ್ಲಿ ಕಳ್ಳತನ ನಡೆದಿದೆ. ಮಠದ ರಾಜಾಂಗಣದ ಗೋಡೆಗೆ ಹಾಕಿದ್ದ 47 ಫೋಟೋಗಳನ್ನು ಕಳವು ಮಾಡಲಾಗಿದೆ. ವಿವಿಧ ಗಣ್ಯರ ಜೊತೆ ಮುರುಘಾಶ್ರೀ ಇರುವ ಫೋಟೋಗಳು, ಧಾರ್ಮಿಕ ಮುಖಂಡರು, ರಾಷ್ಟ್ರಪತಿ, ಪ್ರಧಾನಿ ಜೊತೆಗಿರುವ ಫೋಟೋ, ಹಲವು ಸಿಎಂಗಳ ಜೊತೆ ಮುರುಘಾಶ್ರೀ ತೆಗೆಸಿಕೊಂಡಿದ್ದ ಫೋಟೋ, ಮಠದ ಗೋಡೆಗೆ ಹಾಕಿದ್ದ ಇತರೆ ಫೋಟೋಗಳು ಕಳ್ಳತನವಾಗಿವೆ. ಅಕ್ಟೋಬರ್ 5ರ ಮಧ್ಯರಾತ್ರಿ ಫೋಟೋ ಕದ್ದೊಯ್ದ ಇಬ್ಬರು ವ್ಯಕ್ತಿಗಳ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:44 am, Sat, 8 October 22